HSRP ನಂಬರ್ ಪ್ಲೇಟ್ ಅಳವಡಿಕೆಗೆ ಸೆ. 15 ಲಾಸ್ಟ್ ಡೇಟ್:
ಸಾರಿಗೆ ಇಲಾಖೆಯಿಂದ ಖಡಕ್ ವಾರ್ನಿಂಗ್
ನ್ಯೂಸ್ ಆ್ಯರೋ : ಈ ಹಿಂದೆಯೇ ಕರ್ನಾಟಕ ಸಾರಿಗೆ ಇಲಾಖೆಯು ಎಲ್ಲ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಮಾಡಲು ಸೂಚನೆ ನೀಡಿದೆ. ಇದೀಗ ನಂಬರ್ ಪ್ಲೇಟ್ ಅಳವಡಿಕೆಗೆ ಅಂತಿಮ ಗಡುವನ್ನು ನೀಡಲಾಗಿದೆ.
2019ರ ಏಪ್ರಿಲ್ 1ರ ಮೊದಲು ಖರೀದಿಸಿದ ವಾಹನಗಳು HSRP ನಂಬರ್ ಪ್ಲೇಟ್ ಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ವಾಹನಗಳ ಸುರಕ್ಷತೆಯ ಸಲುವಾಗಿ ಈ ನಂಬರ್ ಪ್ಲೇಟ್ ನ ಅಳವಡಿಕೆ ಮಾಡಿಕೊಳ್ಳಬೇಕಿದೆ.
ಇದೀಗ ರಾಜ್ಯ ಸಾರಿಗೆ ಇಲಾಖೆಯು ಹೆಚ್.ಎಸ್.ಆರ್.ಪಿ ನಂಬರ್ ಪ್ಲಾಟ್ ಅಳವಡಿಸಲು ಸೆಪ್ಟೆಂಬರ್ 15ಕ್ಕೆ ಕೊನೆಯ ದಿನವಾಗಿದೆ. HSRP ನಂಬರ್ ಪ್ಲೇಟ್ ಮಾಡದ ವಾಹನಗಳಿಗೆ ದಂಡಲ ವಿಧಿಸಲಾಗುವುದು ಎಂದು ಖಡಕ್ ವಾರ್ನಿಂಗ್ ಕೊಟ್ಟಿದೆ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಾಗಿ ಅರ್ಜಿ ಸಲ್ಲಿಸಲು ಎಣಿಕೆಯ ದಿನಗಳು ಬಾಕಿಯಿದ್ದು, ಕೊನೆಯ ದಿನದ ಮೊದಲು HSRP ನಂಬರ್ ಪ್ಲೇಟ್ ಅಳವಡಿಸಬೇಕು, ಇಲ್ಲವಾದಲ್ಲಿ 500 ರಿಂದ 1000 ರೂ. ದಂಡ ವಿಧಿಸಲಾಗುತ್ತದೆ.
Leave a Comment