ಎಂಗೇಜ್ ಎಂಪಿವಿ ಕಾರು ಬಿಡುಗಡೆಗೆ ದಿನ ಗಣನೆ – ಇನ್ನೋವಾ ಮಾದರಿಯ ಈ ಗಾಡಿಯ ವಿಶೇಷತೆ ಏನು?

ಎಂಗೇಜ್ ಎಂಪಿವಿ ಕಾರು ಬಿಡುಗಡೆಗೆ ದಿನ ಗಣನೆ – ಇನ್ನೋವಾ ಮಾದರಿಯ ಈ ಗಾಡಿಯ ವಿಶೇಷತೆ ಏನು?

ನ್ಯೂಸ್ ಆ್ಯರೋ‌ : ಟೊಯೊಟಾ ಇನ್ನೋವಾ ವಾಹನ ಪ್ರಿಯರ ನೆಚ್ಚಿನ ಕಾರು. ಕುಟುಂಬ, ಗೆಳೆಯರ ಜೊತೆಗಿನ ಆರಾಮದಾಯಕ ಪಯಣಕ್ಕೆ ಇದು ಹೇಳಿ ಮಾಡಿಸಿದ ವಾಹನ ಎನ್ನುವುದು ಬಹುತೇಕರ ಅಭಿಮತ. ಹೀಗಾಗಿ ಇದೀಗ ಮಾರುತಿ ಸುಜುಕಿ ಇನ್ನೋವಾ ಹೈಕ್ರೂಸ್ ಮಾದರಿಯ ಏಳು ಸೀಟಿನ ಎಂಗೇಜ್ ಎಂಪಿವಿ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಕಾರು ಪ್ರಿಯರನ್ನು ಸೆಳೆಯುವುದು ಕಂಪೆನಿಯ ಉದ್ದೇಶ.

ದರ ಎಷ್ಟು?

ಎಂಗೇಜ್ ಎಂಪಿವಿ ಮಾದರಿ ಮಾರುತಿ ಸುಜುಕಿ ಕಂಪೆನಿಯ ದುಬಾರಿ ಕಾರು ಎನಿಸಿಕೊಳ್ಳಲಿದ್ದು, ದರ 25 ಲಕ್ಷ ರೂ. ಆಸುಪಾಸಿನಲ್ಲಿರಲಿದೆ. ಇದು ನೆಕ್ಸಾ ರಿಟೇಲ್ ಗಳಲ್ಲಿ ದೊರೆಯಲಿದೆ. ಕಂಪೆನಿ ಕಾರನ್ನು ಪರಿಚಯಿಸುವ ಉದ್ದೇಶದಿಂದ ಇದೀಗ ಟೀಸರ್ ಬಿಡುಗಡೆ ಮಾಡಿದೆ.

ಇದು ಮಾರುತಿ ಸುಜುಕಿಯು ಸುಜುಕಿ ಟೊಯೊಟಾ ಜಾಗತಿಕ ಪಾಲುದಾರಿಕೆಯಲ್ಲಿ ಹೊರ ತರುತ್ತಿರುವ ಮೊದಲ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ಪಾಲುದಾರಿಕೆ ಒಪ್ಪಂದದಲ್ಲಿ ಟೊಯೊಟಾ ಬ್ರ್ಯಾಂಡ್ ಹೆಸರಲ್ಲಿ ಎರಡು ಕಾರುಗಳು ಮಾರಾಟವಾಗುತ್ತಿವೆ. ಟೊಯೊಟಾ ಗ್ಲಾಂಜಾ ಮತ್ತು ಟೊಯೊಟಾ ಅರ್ಬನ್ ಕ್ರೂಷರ್ ಹೈರೈಡರ್-ಇವೇ ಈ ಎರಡು ಮಾದರಿಗಳು.

ಪೆಟ್ರೋಲ್‌ ಮತ್ತು ಪೆಟ್ರೋಲ್‌ ಹೈಬ್ರಿಡ್‌ ಪವರ್‌ಟ್ರೇನ್‌ ಆಯ್ಕೆಗಳಲ್ಲಿ ಎಂಗೇಜ್‌ ಎಂಪಿವಿ ದೊರೆಯುವ ಸಾಧ್ಯತೆ ಇದೆ. 2.0 ಲೀಟರ್‌ನ ಫೋರ್‌ ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ ಇರುವ ನಿರೀಕ್ಷೆಯಿದೆ. ಪೆಟ್ರೋಲ್‌ ಆವೃತ್ತಿಯು ಲೀಟರ್‌ಗೆ 16.13 ಕಿ.ಮೀ. ಮತ್ತು ಹೈಬ್ರಿಡ್‌ ಆವೃತ್ತಿಯು ಲೀಟರ್‌ಗೆ 23.24 ಕಿ.ಮೀ. ಮೈಲೇಜ್‌ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಇದು ಕಿಯಾ ಕಾರೆನ್ಸ್‌, ಎಂಜಿ ಹೆಕ್ಟರ್‌ ಪ್ಲಸ್‌, ಟಾಟಾ ಸಫಾರಿ ಮುಂತಾದ ಕಾರುಗಳಿಗೆ ಪ್ರಬಲ ಸ್ಪರ್ಧಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜು. 5ರಂದು ಭಾರತದಲ್ಲಿ ಲಾಂಚ್‌ ಆಗಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *