ಹಾಲಿವುಡ್ ಸಿನಿಮಾದಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥ ರಂಗನಾಥ್ – ಫಾಸ್ಟ್ & ಫ್ಯೂರಿಯಸ್ 10 ಚಿತ್ರದಲ್ಲಿ ರಂಗಣ್ಣ ನಟನೆ

ಹಾಲಿವುಡ್ ಸಿನಿಮಾದಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥ ರಂಗನಾಥ್ – ಫಾಸ್ಟ್ & ಫ್ಯೂರಿಯಸ್ 10 ಚಿತ್ರದಲ್ಲಿ ರಂಗಣ್ಣ ನಟನೆ

ನ್ಯೂಸ್ ಆ್ಯರೋ‌ : ಈ ಹಿಂದೆ ಸಾಬು ದಸ್ತಗಿರಿ ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ಆ ಮೂಲಕ ವಿದೇಶಿ ಭಾಷೆಯಲ್ಲಿ ಕಾಣಿಸಿಕೊಂಡ ಮೊದಲ ಮೈಸೂರಿನ ವ್ಯಕ್ತಿ ಎನಿಸಿಕೊಂಡಿದ್ದರು. ಅದಾದ ಹಲವು ವರ್ಷಗಳ ಬಳಿಕ ಇನ್ನೊಬ್ಬ ಮೈಸೂರು ಮೂಲದ ವ್ಯಕ್ತಿಯೊಬ್ಬರು ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದೈನಂದಿನ ಸುದ್ದಿಗಳನ್ನು ಬಿಗ್ ಬುಲೆಟಿನ್ ಮೂಲಕ ಕನ್ನಡಿಗರಿಗೆ ತಲುಪಿಸುವ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಇದೀಗ ಹಾಲಿವುಡ್ ಸಿನಿಮಾಗೆ ಸಾಥ್ ನೀಡಿದ್ದು, ಈ ಕುರಿತಾದ ವೀಡಿಯೋ ವೈರಲ್ ಆಗಿದೆ.

ಹಾಲಿವುಡ್ ನ ‘ಫಾಸ್ಟ್ & ಫ್ಯೂರಿಯಸ್ 10’ ಸಿನಿಮಾ ರಿಲೀಸ್‌ಗೂ (ಮೇ 19) ಮುನ್ನವೇ ಇದರ ಭಾಗವಾಗಿರುವ ಎಚ್.ಆರ್.ರಂಗನಾಥ್ ಅವರನ್ನೊಳಗೊಂಡ ವೀಡಿಯೋವೊಂದು ಹರಿದಾಡುತ್ತಿದೆ. ರೋಮ್‌ನಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಸುದ್ದಿಯನ್ನು ರಂಗನಾಥ್ ಈ ಚಿತ್ರದ ಮೂಲಕ‌ ಪ್ರಸ್ತುತ ಪಡಿಸಿದ್ದಾರೆ.

ಈ ಸುದ್ದಿ ಪಬ್ಲಿಕ್ ಟಿವಿ ಆಫೀಸಿನಲ್ಲಿ ಚಿತ್ರೀಕರಣವಾಗಿದೆ. ಈ ಮೂಲಕ ಹಾಲಿವುಡ್‌ಗೆ ಹಾರಿದ ಮೈಸೂರಿನ ಎರಡನೇ‌ ವ್ಯಕ್ತಿ ಇವರಾಗಿದ್ದಾರೆ. ಸದ್ಯ ಈ ವೈರಲ್ ವೀಡಿಯೋದ ಕುರಿತಾದ ಚರ್ಚೆ ಜೋರಾಗಿ ನಡೆಯುತ್ತಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *