Cannes Film Festival : ಲಕ್ಷ ಲಕ್ಷ ತೆತ್ತು ಭಾರತೀಯ ನಟಿಯರು ಭಾಗವಹಿಸುವುದೇಕೆ? – ಈ ಕಾರ್ಯಕ್ರಮದ ಒಂದು ಟಿಕೆಟ್ ಬೆಲೆಯೆಷ್ಟು ಗೊತ್ತಾ?

Cannes Film Festival : ಲಕ್ಷ ಲಕ್ಷ ತೆತ್ತು ಭಾರತೀಯ ನಟಿಯರು ಭಾಗವಹಿಸುವುದೇಕೆ? – ಈ ಕಾರ್ಯಕ್ರಮದ ಒಂದು ಟಿಕೆಟ್ ಬೆಲೆಯೆಷ್ಟು ಗೊತ್ತಾ?

ನ್ಯೂಸ್ ಆ್ಯರೋ‌ : ಫ್ರಾನ್ಸ್ ನ ದಕ್ಷಿಣ ಭಾಗದಲ್ಲಿರುವ ಪ್ರವಾಸಿ ತಾಣ ಕ್ಯಾನ್ ನಲ್ಲಿ ಪ್ರತೀ ವರ್ಷ ಮೇಯಲ್ಲಿ ಜರಗುವ ಚಲನಚಿತ್ರೋತ್ಸವ ಸಿನಿ ರಸಿಕರ ಗಮನ ಸೆಳೆಯುತ್ತದೆ. ಅದರಲ್ಲೂ ಭಾರತದ ನಟಿಯರು ಈ ಪ್ರತಿಷ್ಠಿತ ಸಮಾರಂಭದಲ್ಲಿ ಭಾಗವಹಿಸಿ ಆಕರ್ಷಣೆಯ ಕೆಂದ್ರ ಬಿಂದುವಾಗುತ್ತಾರೆ. ನಟಿಯರು ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸುವಾಗ ಕೆಲವೊಮ್ಮೆ ವಿಚಿತ್ರ ಉಡುಪು ಧರಸಿ ಸುದ್ದಿಯಾಗುತ್ತಾರೆ. ಈ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ತಮ್ಮ ಚಲನಚಿತ್ರಗಳ ಪ್ರದರ್ಶನವಿಲ್ಲದಿದ್ದರೂ ಭಾರತೀಯ ನಟಿಯರು ಯಾಕೆ ಭಾಗವಹಿಸುತ್ತಾರೆ? ಈ ಫೆಸ್ಟಿವಲ್ ನ ವಿಶೇಷತೆ ಏನು? ಎನ್ನುವುದರ ವಿವರ ಇಲ್ಲಿದೆ.

ವಿಶೇಷ ಎಂದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ನಟಿಯರು ಪಾಲ್ಗೊಳ್ಳುತ್ತಿದ್ದಾರೆ. ಸಾರಾ ಅಲಿ ಖಾನ್ ಜೊತೆಗೆ ಅನುಷ್ಕಾ ಶರ್ಮಾ ಮತ್ತು ಮೃಣಾಲ್ ಠಾಕೂರ್ ಕೂಡ ಈ ವರ್ಷ ಕೇನ್ಸ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಉದ್ದೇಶ ಏನು?

ಹಲವು ವರ್ಷಗಳಿಂದ ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಸೋನಮ್ ಕಪೂರ್ ತಮ್ಮ
ತಮ್ಮ ಚಲನಚಿತ್ರಗಳು ಪ್ರದರ್ಶನವಾಗಲಿ ಅಥವಾ ಆಗದಿರಲಿ ಕೇನ್ಸ್ ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಅವರು ಪ್ರಚುರ ಪಡಿಸುವ ಸೌಂದರ್ಯ ಬ್ರ್ಯಾಂಡ್ ಗಳ ಪ್ರಮೋಷನ್ ಗಾಗಿ ಅವರು ರೆಡ್ ಕಾರ್ಪೆಟ್‌ನಲ್ಲಿ ನಡೆಯುತ್ತಾರೆ. ಕೇನ್ಸ್ ಚೋಪರ್ಡ್ ಮತ್ತು ಲೋರಿಯಲ್ ಪ್ಯಾರಿಸ್‌ ಫಿಲ್ಮ್ ಫೆಸ್ಟಿವಲ್ ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಈ ಬಾಲಿವುಡ್ ನಟಿಯರು ಈ ಲೇಬಲ್‌ಗಳಿಗೆ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿರುವುದರಿಂದ ಅವರನ್ನು ಪ್ರತಿ ವರ್ಷ ರೆಡ್ ಕಾರ್ಪೆಟ್‌ಗೆ ಆಹ್ವಾನಿಸಲಾಗುತ್ತದೆ.

ಕ್ಯಾನೆಸ್ ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ನಟಿಯರು ನಡೆಯುವ ಮತ್ತು ಉಡುಗೆಯ ವಿಧಾನಕ್ಕೆ ಹೆಚ್ಚಿನ ಗಮನ ನೀಡಲಾಗುತ್ತದೆ. ಈ ವರ್ಷ ಮೇ 16 ರಿಂದ ಮೇ 27ರ ವರೆಗೆ ಚಿತ್ರೋತ್ಸವ ನಡೆಯುತ್ತದೆ. ಸಾಮಾನ್ಯವಾಗಿ ಚಲನಚಿತ್ರ ವೃತ್ತಿಪರರು ಮತ್ತು ಪತ್ರಕರ್ತರಿಗೆ ಆಹ್ವಾನ ನೀಡಲಾಗುತ್ತದೆ. ವರದಿಗಳ ಪ್ರಕಾರ, ಈ ಕಾರ್ಯಕ್ರಮಕ್ಕೆ ಹಾಜರಾಗಲು ಟಿಕೆಟ್‌ಗಳ ಬೆಲೆ 5ರಿಂದ 20 ಲಕ್ಷ ರೂ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *