ಒಮ್ಮೆ ಚಾರ್ಜ್ ಮಾಡಿದರೆ 303 ಕಿ.ಮೀ. ಓಡುತ್ತೆ ಈ ಕಾರು – ಎಂಜಿ ಮೋಟಾರ್ ಕಂಪನಿಯ ಹೊಸ ಕಾರ್ ಹೇಗಿದೆ ಗೊತ್ತಾ..!?

ಒಮ್ಮೆ ಚಾರ್ಜ್ ಮಾಡಿದರೆ 303 ಕಿ.ಮೀ. ಓಡುತ್ತೆ ಈ ಕಾರು – ಎಂಜಿ ಮೋಟಾರ್ ಕಂಪನಿಯ ಹೊಸ ಕಾರ್ ಹೇಗಿದೆ ಗೊತ್ತಾ..!?

ನ್ಯೂಸ್ ಆ್ಯರೋ‌ : ಸದ್ಯ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಅದಕ್ಕೆ ತಕ್ಕಂತೆ ವಿವಿಧ ಕಂಪೆನಿಗಳು ಎಲೆಕ್ಟ್ರಿಕ್ ವಾಹನ ತಯಾರಿಸಲು ಮುಂದಾಗುತ್ತಿವೆ. ಈಗ ಜಾಗತಿಕ ಬೆಸ್ಟ್ ಸೆಲ್ಲರ್ ಆಗಿ ಸುಜುಕಿ ಜಿಮ್ನಿ ಮಾರಾಟವಾಗುತ್ತಿದ್ದು, ಪೈಪೋಟಿ ನೀಡಲು ಎಂಜಿ ಮೋಟಾರ್ ಕಂಪನಿಯು ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

SAIC-GM-Wuling Baojun Yep ಮಿನಿ ಎಲೆಕ್ಟ್ರಿಕ್ ಕಾರನ್ನು ಎಂಜಿ ಮೋಟಾರ್ ಅನಾವರಣಗೊಳಿಸಿದೆ. ಇದು ನಾಲ್ಕು ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಆಫ್-ರೋಡ್ ಗಳಿಗೂ ಸೂಕ್ತ ಎನ್ನಲಾಗಿದ್ದು, ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ. ಬಾಜುನ್ ಯೆಪ್ ಮಿನಿ-ಇವಿ ಮತ್ತು 3-ಡೋರ್ ಜಿಮ್ನಿಯ ನಡುವೆ ವಿವಿಧ ಹೋಲಿಕೆಗಳಿವೆ.

ಜಿಮ್ನಿಯ ಬಾಡಿಗೆ ಹೋಲಿಸಿದರೆ ಬಾಜುನ್ ಯೆಪ್ ನ ಬಾಡಿ ರಚನೆಯು ಕರ್ವಿಯರ್ ಮತ್ತು ಏರೋಡೈನಾಮಿಕ್ ಆಗಿ ಕಾಣುತ್ತದೆ. ಜಿಮ್ನಿಯ ರೌಂಡ್ ಹೆಡ್‌ಲ್ಯಾಂಪ್‌ಗಳಿಗೆ ಹೋಲಿಸಿದರೆ ಬಾಜುನ್ ಯೆಪ್ ಫ್ಯೂಚರಿಸ್ಟಿಕ್-ಲುಕಿಂಗ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ರೂಫ್ ವಿಭಾಗವು ಎರಡೂ ಕಾರುಗಳಲ್ಲಿ ವಿಶಿಷ್ಟವಾಗಿದೆ. ಬಾಜುನ್ ಯೆಪ್ ವಿಶಿಷ್ಟವಾದ ಹಿಂಬದಿಯ ಪ್ರೊಫೈಲ್ ಹೊಂದಿದೆ.

ಬಾಜುನ್ ಯೆಪ್ ಐದು ಅತ್ಯಾಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯ. ಈ ಕಾರು ದೊಡ್ಡದಾದ ಸ್ಟೀರಿಂಗ್ ಚಕ್ರವನ್ನು ಹೊಂದಿದೆ. ಇದು 28.1 kWh LFP ಬ್ಯಾಟರಿಯನ್ನು ಹೊಂದಿದ್ದು 68 hp ಪವರ್ ಮತ್ತು 140 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಟಾಪ್ ಸ್ಪೀಡ್ 100 ಕಿ.ಮೀ. ಒಮ್ಮೆ ಚಾರ್ಜ್ ಮಾಡಿದರೆ ಸಂಪೂರ್ಣ 303 ಕಿ.ಮೀ. ಪ್ರಯಾಣಿಸುತ್ತದೆ ಎನ್ನಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *