ಬರೋಬ್ಬರಿ 120 ಕೋಟಿಗೆ ಸೇಲ್ ಆಯ್ತು ಫ್ಯಾನ್ಸಿ ನಂಬರ್! – ಇಷ್ಟು ದುಬಾರಿ ಬೆಲೆಯ ಆ ನಂಬರ್ ಯಾವುದು?

ಬರೋಬ್ಬರಿ 120 ಕೋಟಿಗೆ ಸೇಲ್ ಆಯ್ತು ಫ್ಯಾನ್ಸಿ ನಂಬರ್! – ಇಷ್ಟು ದುಬಾರಿ ಬೆಲೆಯ ಆ ನಂಬರ್ ಯಾವುದು?

ನ್ಯೂಸ್ ಆ್ಯರೋ : ಶ್ರೀಮಂತರು, ಸೆಲೆಬ್ರಿಟಿಗಳು ದುಬಾರಿ ಬೆಲೆಯ ಐಶಾರಾಮಿ ಕಾರುಗಳನ್ನು ಕೊಳ್ಳುವ ವಿಚಾರ ಪದೇ ಪದೆ ಸುದ್ದಿಯಲ್ಲಿರುತ್ತದೆ‌. ಆದರೆ ಫ್ಯಾನ್ಸಿ ನಂಬರ್ ಒಂದನ್ನು ಬರೋಬ್ಬರಿ 120‌ಕೋಟಿ ಕೊಟ್ಟು ಖರೀದಿ ಮಾಡಿದ ವಿಚಾರ ಬಹುಶಃ ನೀವು ಕೇಳಿರಲಿಕ್ಕಿಲ್ಲ. ಸದ್ಯ ಈ ವಿಚಾರ ವಿಶ್ವ ದಾಖಲೆಯ ಮಾನ್ಯತೆ ಪಡೆದುಕೊಂಡಿದೆ. ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ವಿಐಪಿ ನಂಬರ್‌ ʼP 7′ ದಾಖಲೆಯ 122.6 ಕೋಟಿ ರೂ. ಹರಾಜಾಗಿದೆ. ಫ್ಯಾನ್ಸಿ ʼP 7′ ಸಂಖ್ಯೆಗೆ ಮೂಲಬೆಲೆ 15 ದಶಲಕ್ಷ ದಿರ್ಹಾಮ್‌ ನಿಗದಿ ಮಾಡಲಾಗಿತ್ತು. ಆರಂಭದ ಕೆಲವೇ ನಿಮಿಷಗಳಲ್ಲಿಇದು 30 ದಶಲಕ್ಷ ದಿರ್ಹಾಮ್‌ಗೆ ಹೋಗಿತ್ತು. ಕೊನೆಗೆ ಇದು 55 ದಶಲಕ್ಷ ದಿರ್ಹಾಮ್‌ ಮಾರಾಟವಾಗಿದೆ. ಇಷ್ಟೊಂದು ಹಣವನ್ನು ಖರ್ಚು ಮಾಡಿ ಬಿಡ್‌ ಗೆದ್ದವರು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಯುಎಇ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ರಂಜಾನ್‌ ಸಮಯದಲ್ಲಿ 100 ಕೋಟಿ ಉಚಿತ ಊಟ ವಿತರಣೆ ಮಾಡಲು ಮುಂದಾಗಿದ್ದು ಈ ಸೇವೆಗೆ ಸಹಾಯ ನೀಡಲು ಎಮಿರೆಟ್ಸ್‌ ಸಂಸ್ಥೆ ಫ್ಯಾನ್ಸಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಹರಾಜು ಹಾಕಿತ್ತು. ಈ ಹರಾಜಿನ ಮೂಲಕ ಒಟ್ಟು 100 ದಶಲಕ್ಷ ದಿರ್ಹಾಮ್‌ ಅಂದರೆ ಒಟ್ಟಾರೆ ಅಂದಾಜು 220 ಕೋಟಿ ರೂ.ಸಂಗ್ರಹವಾಗಿದೆ ಎನ್ನಲಾಗಿದೆ.

ವಿಶ್ವದಾಖಲೆಯ ಹರಾಜು!

ಇದಕ್ಕೂ ಮುನ್ನ 2008ರಲ್ಲಿ ಅಬುಧಾಬಿಯಲ್ಲಿ ʼNo. 1ʼ ಪ್ಲೇಟ್‌ 52.22 ದಶಲಕ್ಷ ದಿರ್ಹಾಮ್‌ಗೆ ಬಿಡ್‌ ಆಗಿತ್ತು. ಇದು ಇಲ್ಲಿಯವರೆಗೆ ದುಬಾರಿ ಬೆಲೆಗೆ ಹರಾಜಾದ ಫ್ಯಾನ್ಸಿ ನಂಬರ್‌ ಆಗಿತ್ತು. ಇದೀಗ,ಈ ದಾಖಲೆಯನ್ನು ʼP 7′ ಮುರಿದಿದ್ದು, ವಿಶ್ವದಾಖಲೆ ನಿರ್ಮಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *