ನಟಿ ಖುಷ್ಬೂ ಅವರ ಮಗಳು ಈಗ ಹೇಗಿದ್ದಾರೆ ಗೊತ್ತಾ? – ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಆವಂತಿಕಾ ಲೇಟೆಸ್ಟ್ ಫೋಟೋಸ್…

ನಟಿ ಖುಷ್ಬೂ ಅವರ ಮಗಳು ಈಗ ಹೇಗಿದ್ದಾರೆ ಗೊತ್ತಾ? – ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಆವಂತಿಕಾ ಲೇಟೆಸ್ಟ್ ಫೋಟೋಸ್…

ನ್ಯೂಸ್ ಆ್ಯರೋ : ದಶಕಗಳ‌ ಹಿಂದೆ ಭಾರತೀಯ ಚಿತ್ರರಂಗದ ಸ್ಟಾರ್ ನಟಿಯಾಗಿ ಮಿಂಚಿದ್ದ ನಟಿ ಖುಷ್ಬೂ, 70ರ ದಶಕದ ಲೇಡಿ ಸೂಪರ್ ಸ್ಟಾರ್ ಎಂದರೆ ತಪ್ಪಾಗಲಾರದು. ಖುಷ್ಬೂ ನಟನೆ ಮತ್ತು ಸೌಂದರ್ಯಕ್ಕೆ ಮರುಳಾಗದವರೇ ಇರಲಿಲ್ಲ. ಅಭಿಮಾನಿಗಳಂತೂ ಒಂದು ಹೆಜ್ಜೆ ಮುಂದಿಟ್ಟು ಖುಷ್ಬೂ ಅವರಿಗೆ ದೇವಾಲಯವನ್ನೇ ಕಟ್ಟಿಸಿದ್ದರು. ಕನ್ನಡ, ತಮಿಳು, ಮಲೆಯಾಳಂ ಸೇರಿದಂತೆ ಹಲವು ಚಿತ್ರರಂಗದಲ್ಲಿ ನಟಿಸಿದ್ದ ಖುಷ್ಬೂ ಸದ್ಯ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಚಿತ್ರರಂಗಗಳಲ್ಲಿ ಮಾತ್ರವಲ್ಲದೆ ಹಲವು ರಿಯಾಲಿಟಿ ಶೋಗಳಲ್ಲೂ ಕೂಡ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ನಟಿ ಖುಷ್ಬೂ ಅವರ ಮಗಳು ಅವಂತಿಕಾಳ ಫೋಟೋಗಳು ಸಕ್ಕತ್ ವೈರಲ್ ಆಗಿದ್ದು, ನೆಟ್ಟಿಗರು ಆಕೆಯನ್ನು ಕಂಡು ‘ಖುಷ್ಬೂ ಅವರಿಗೆ ಇಷ್ಟು ದೊಡ್ಡ ಮಗಳಿದ್ದಾಳಾ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವರದಿಯಲ್ಲಿ ಖುಷ್ಬೂ ಮಗಳು ಇಷ್ಟರ ವರೆಗೆ ಎಲ್ಲಿದ್ದರು? ಆಕೆ ಚಿತ್ರರಂಗಕ್ಕೆ ಬರಲಿದ್ದಾರಾ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಖುಷ್ಬೂ 90ರ ದಶಕದಲ್ಲಿ ಪ್ರಭು ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಪ್ರಭು ಅವರಿಗೆ ಅದು ಎರಡನೇ ಮದುವೆಯಾಗಿದ್ದರಿಂದ ಖುಷ್ಬೂ ತಂದೆ ಒಪ್ಪಿರಲಿಲ್ಲ. ಇದರಿಂದಾಗಿ ಮದುವೆಯಾದ ಮೂರೇ ತಿಂಗಳಿಗೆ ಈ ಮದುವೆ ಮುರಿದು ಬಿತ್ತು. ಇದಾದ ನಂತರ 2000ರಲ್ಲಿ ನಿರ್ದೇಶಕ ಸುಂದರ್ ಅವರನ್ನು ಖುಷ್ಬೂ ಮದುವೆಯಾದರು. ಈ ದಂಪತಿಗೆ ಅವಂತಿಕಾ ಹಾಗೂ ಆನಂದಿತಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದು ಅವರಿಬ್ಬರೂ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಗ್ಲಾಮರಸ್ ಫೋಟೋ ಹಂಚಿಕೊಂಡ ಅವಂತಿಕಾ

ಖುಷ್ಬೂ ಮಗಳು ಅವಂತಿಕಾ ಚಿತ್ರರಂಗದಿಂದ ದೂರ ಇದ್ದರೂ‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಲಂಡನ್‌ನಲ್ಲಿ ಓದುತ್ತಿರುವ ಅವಂತಿಕಾ ಇದೀಗ ಗ್ಲಾಮರ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡಿರುವ ನೆಟ್ಟಿಗರೆಲ್ಲ ‘ಚಿತ್ರರಂಗಕ್ಕೆ ಬರುವಂತೆ ಒತ್ತಾಯಿಸಿದ್ದಾರೆ’. ಆದರೆ ಅವಂತಿಕಾ ಈ ಫೋಟೋ ಹಂಚಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಬರುವ ಸೂಚನೆ ನೀಡಿತ್ತಿದ್ದಾರಾ ಅಥವಾ ಚಿತ್ರರಂಗದಿಂದ ದೂರ ಉಳಿಯಲಿದ್ದಾರಾ ಎಂದು ಕಾದು ನೋಡಬೇಕಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *