ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಜಡಿಯುತ್ತಿರುವ ಪೋಷಕರು – ಅಲ್ಲಿ ಎಂತಹಾ ಅಮಾನವೀಯ ಕೃತ್ಯ ನಡೆಯುತ್ತಿದೆ ಗೊತ್ತಾ?

ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಜಡಿಯುತ್ತಿರುವ ಪೋಷಕರು – ಅಲ್ಲಿ ಎಂತಹಾ ಅಮಾನವೀಯ ಕೃತ್ಯ ನಡೆಯುತ್ತಿದೆ ಗೊತ್ತಾ?

ನ್ಯೂಸ್ ಆ್ಯರೋ : ಪಾಕಿಸ್ತಾನ ಅಥವಾ ಪಾಪಿಸ್ತಾನ ಎಂದೇ ಕರೆಯಲ್ಪಡುವ ನೆರೆಯ ರಾಷ್ಟ್ರ ಈಗಾಗಲೇ ಆರ್ಥಿಕವಾಗಿ ಪಾತಾಳ ನಲುಪಿದ್ದು ಅಳಿವು ಉಳಿವಿನ ಅಂಚಿನಲ್ಲಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯವೊಂದು ಇದೀ ರಾಷ್ಮಟ್ಟದಲ್ಲಿ ಸುದ್ದಿಯಾಗಿದೆ.

ಪಾಕಿಸ್ತಾನದ ಯುವತಿಯರು, ಮಹಿಳೆಯರು ಸತ್ತರೆ ಅವರ ಸಮಾಧಿಗಳಿಗೆ‌ ಪೋಷಕರು ಕಬ್ಬಿಣದ ಬೀಗ ಜಡಿಯುತ್ತಿದ್ದಾರೆ. ಆ ಮೂಲಕ ಶವಗಳನ್ನು ಯಾರೂ ಮುಟ್ಟದಂತೆ ಎಚ್ಚರ ವಹಿಸುತ್ತಿದ್ದಾರೆ. ಈ ರೀತಿ ಸಮಾಧಿಗಳಿಗೆ ಬೀಗ ಹಾಕಿರುವ ಪ್ರಕರಣ ಜಗತ್ತಿನಲ್ಲಿ ಇದೇ‌ ಮೊದಲು ಎನ್ನಲಾಗುತ್ತಿದ್ದು, ಇದಕ್ಕೆ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ.

ಶವಗಳನ್ನೂ ಬಿಡುತ್ತಿಲ್ಲ ಕಾಮಾಂಧರು..

ಪಾಕಿಸ್ತಾನದಲ್ಲಿ ಪ್ರತಿ ಎರಡು ಗಂಟೆಗೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದೀಗ ಕಾಮಾಂದರು ಶವಗಳನ್ನು ಕೂಡ ಬಿಡುತ್ತಿಲ್ಲ. ತಮ್ಮ ಕಾಮತೃಷೆ ತೀರಿಸಲು ಸಮಾಧಿಗಳನ್ನು ಒಡೆದು, ಅಗೆದು ಶವಗಳನ್ನು ಹೊರ ತೆಗೆದು ಶವಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಈ ಕೃತ್ಯಕ್ಕೆ ನೆಕ್ರೋಫಿಲಿಯಾ ಎಂದು ಕರೆಯಲಾಗುತ್ತದೆ. ಪಾಕಿಸ್ತಾನದ ಹಲವೆಡೆ ಮಹಿಳೆ ಮತ್ತು ಯುವತಿಯರ ಶವಗಳು ಕಣ್ಮರೆಯಾಗಿದ್ದು, ಇವುಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ಸಮಾಧಿ ಮಾಡಿದ ಮರು ದಿನವೇ ಶವ ಹೊರ ತೆಗೆದ ಕಾಮಾಂಧರು!

ಇತ್ತೀಚೆಗಷ್ಟೇ, ಪಾಕಿಸ್ತಾನದ ಮಹಮ್ಮದ್ ಮುನೀರ್ ಎಂಬವರ 15 ವರ್ಷದ ಮಗಳು ಮೃತ ಪಟ್ಟಿದ್ದು ಆಕೆಯ ಶವವನ್ನು ಸಮಾಧಿ ಮಾಡಲಾಗಿತ್ತು. ಆದರೆ ಅದರ ಮರುದಿನವೆ ಶವ ಸಮಾಧಿಯ ಹೊರಗೆ ಕಂಡು ಬಂದಿತ್ತು. ತನಿಖೆ ನಡೆಸಿದ ಪೊಲೀಸರು ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಶಂಕಿಸಿದ್ದಾರೆ.

ಶವಗಳ ರಕ್ಷಣೆಗೆ ಸಮಾಧಿಗೆ ಬೀಗ

ಭಾರತದಂತೆಯೇ, ಪಾಕಿಸ್ತಾನದಲ್ಲೂ ಕೌಟುಂಬಿಕ ಮೌಲ್ಯಗಳಿವೆ. ಮಹಿಳೆಯರಿಗಷ್ಟೇ ಅಲ್ಲ ಅವರ ಶವಗಳಿಗೆ ತೊಂದರೆಯಾದರೂ ದೇವರು ಕ್ಷಮಿಸುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ಇದೀಗ ಅಲ್ಲಿ ಮಿತಿ‌ ಮೀರಿದ ನೆಕ್ರೋಲಿಫಿಯಾ ಕೃತ್ಯಗಳು ನಡೆಯುತ್ತಿದ್ದು, ಯಾವಾಗ, ಯಾವ ಸಮಾಧಿಯಿಂದ ಶವ ಕದ್ದೊಯ್ಯುತ್ತಾರೆ ಎಂಬ ಆತಂಕ ಎದುರಾಗಿದೆ.ಇದನ್ನು ತಡೆಯಲು ಪೋಷಕರು ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ. ಜೊತೆಗೆ ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಪೋಷಕರು ಅಳಲು ನೋಡಿಕೊಳ್ಳುತ್ತಿದ್ದಾರೆ.

48 ಶವಗಳ ಮೇಲೆ ಅತ್ಯಾಚಾರ‌ ನಡೆಸಿದ್ದ ಸೈಕೋ!

ಪಾಕಿಸ್ತಾನದಲ್ಲಿ 2011ರಲ್ಲಿ ಭಯಾನಕ ನೆಕ್ರೋಫಿಲಿಯ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಸ್ಮಶಾನದ ಪಾಲಕನಾಗಿದ್ದ ಕರಾಚಿಯ ಉತ್ತರ ನಜೀಮಾಬಾದ್ ನ ಮೊಹಮ್ಮದ್ ರಿಜ್ವಾನ್ ಎಂಬಾತ ಸಮಾಧಿಯಲ್ಲಿದ್ದು ಒಟ್ಟು 48 ಶವಗಳನ್ನು‌ ತೆಗೆದು ಅತ್ಯಾಚಾರ ನಡೆಸಿದ್ದ. ಆತನನ್ನು‌ ಬಂಧಿಸಿ ವಿಚಾರಣೆ ನಡೆಸಿದಾಗ ಇದನ್ನು ಒಪ್ಪಿಕೊಂಡಿದ್ದಾನೆ‌.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *