Sanya Iyyer : ಬಿಚ್ಚಮ್ಮನ ಅವತಾರ‌ ತಾಳಿದ ಸಾನ್ಯಾ – ಮಿರಮಿರ ಮಿಂಚಿದ ಚೆಲುವೆಯ ಅವತಾರ ನೋಡಿ ರೂಪೇಶ್ ಶೆಟ್ಟಿ ಏನಂದ್ರು ಗೊತ್ತಾ?

Sanya Iyyer : ಬಿಚ್ಚಮ್ಮನ ಅವತಾರ‌ ತಾಳಿದ ಸಾನ್ಯಾ – ಮಿರಮಿರ ಮಿಂಚಿದ ಚೆಲುವೆಯ ಅವತಾರ ನೋಡಿ ರೂಪೇಶ್ ಶೆಟ್ಟಿ ಏನಂದ್ರು ಗೊತ್ತಾ?

ನ್ಯೂಸ್ ಆ್ಯರೋ : ಪುಟ್ಟ ಗೌರಿಯ ಮದುವೆ ಧಾರವಾಹಿಯ ಮೂಲಕ ನಟನೆ ಆರಂಭಿಸಿದ ಸಾನ್ಯಾ ಅಯ್ಯರ್ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಬಿಗ್ ಬಾಸ್ ಬೆಡಗಿ ಇದೀಗ ಗ್ಲಾಮರಸ್ ಫೋಟೋಶೂಟ್ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ಸಾನ್ಯಾ ಅವರು ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬು ರತಾನಿ ಕಡೆಯಿಂದ ಫೋಟೋಶೂಟ್ ಮಾಡಿಸಿದ್ದು, ಇದಕ್ಕೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಸಕ್ಕತ್ ವೈರಲ್ ಆಗುತ್ತಿದೆ.

ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿ ಫೋಟೋಶೂಟ್ ಗ್ರಾಫರ್ ಆಗಿರುವ ಡಬು ರತಾನಿ ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಫೋಟೋ ಕ್ಲಿಕ್ಕಿಸಿದ್ದರು. ಇದೀಗ ಅವರು ಸಾನ್ಯ ಅಯ್ಯರ್ ಅವರ ಗ್ಲಾಮರಸ್ ಫೋಟೋಶೂಟ್ ನಡೆಸಿದ್ದಾರೆ‌. ಬಿಳಿ ಸ್ಕರ್ಟ್ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟಿರುವ ಸಾನ್ಯಾ ಬಾಲಿವುಡ್ ನಟಿ ರೇಂಜಿಗೆ ಮಿಂಚಿದ್ದಾರೆ.

ಈ ಎಲ್ಲಾ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಸಾನ್ಯಾ ಅವರಿಗೆ ಕೇವಲ ಫಾಲೋವರ್ಸ್ ಗಳು ಮಾತ್ರವಲ್ಲದೇ, ಚಿತ್ರರಂಗದ ಪ್ರಮುಖರೂ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಬಿಳಿ ಬಣ್ಣಸ ಸ್ಕರ್ಟ್ ವಿವಿಧ ಭಂಗಿಗಳಲ್ಲಿ ಫೋಟೋ ಹೊಡೆಸಿಕೊಂಡಿರುವ ಸಾನ್ಯಾ ಸಕ್ಕತ್ ಸಕ್ಕತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.

ರೂಪೇಶ್ ಶೆಟ್ಟಿ ಏನ್ ಹೇಳಿದ್ರು?

ಇತ್ತೀಚೆಗೆ ಮುಕ್ತಾಯ ಕಂಡ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾದಾಗಿನಿಂದ ರೂಪೇಶ್ ಹಾಗೂ ಸಾನ್ಯ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿತ್ತು. ಕೆಲವೊಂದು ಕಾರ್ಯಕ್ರಮಕ್ಕೂ ಒಟ್ಟಿಗೆ ತೆರಳುತ್ತಿದ್ದರು. ಆದರೆ ಯಾರೂ ಕೂಡ ಅಧಿಕೃತವಾಗಿ ನಾವು ಪ್ರೇಮಿಗಳು ಎಂದು ಹೇಳಿಕೊಂಡಿಲ್ಲ. ಇದೀಗ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡಿರುವ ಸಾನ್ಯ ಅಯ್ಯರ್ ಫೋಟೋಗಳನ್ನು ಕಂಡಿರುವ ರೂಪೇಶ್ ಶೆಟ್ಟಿ ‘ಚೆನ್ನಾಗಿ ಕಾಣ್ತೀರಾ ಸಾನ್ಯಾ’ ಎಂದು ಕಮೆಂಟ್ ಹಾಕಿದ್ದು, ಇದು ಸಕ್ಕತ್ ಟ್ರೆಂಡಿಂಗ್ ನಲ್ಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *