ಗುಟ್ಟಾಗಿ ಹಸೆಮಣೆ ಏರಿದ್ರಾ ಅನುಷ್ಕಾ ಶೆಟ್ಟಿ? – ಮದುವೆಯ ಬಗ್ಗೆ ಕರಾವಳಿ ಬೆಡಗಿ ಹೇಳಿದ್ದೇನು ಗೊತ್ತಾ?

ಗುಟ್ಟಾಗಿ ಹಸೆಮಣೆ ಏರಿದ್ರಾ ಅನುಷ್ಕಾ ಶೆಟ್ಟಿ? – ಮದುವೆಯ ಬಗ್ಗೆ ಕರಾವಳಿ ಬೆಡಗಿ ಹೇಳಿದ್ದೇನು ಗೊತ್ತಾ?

ನ್ಯೂಸ್‌ ಆ್ಯರೋ : ಕರಾವಳಿಯ ಮೂಲದ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಬಾಲಿವುಡ್, ಟಾಲಿವುಡ್ ನಲ್ಲಿ ದೊಡ್ಡಮಟ್ಟದ ಹೆಸರನ್ನು ಗಳಿಸಿದವರು. ಅರುಂಧತಿ, ಬಾಹುಬಲಿ, ಸಿಂಗಂ ಚಿತ್ರದ ಮೂಲಕ ಎಲ್ಲರ ಮನಗೆದ್ದವರು. ಬಾಹುಬಲಿ 2 ಚಿತ್ರದ ನಂತರ ಅವರ ಸಿನಿಮಾಗಳಿಗಿಂತ ಅವರ ಮದುವೆಯ ಬಗ್ಗೆಯೇ ಜಾಸ್ತಿ ಚರ್ಚೆಯಾಗುತ್ತಿದೆ.

ಬಾಹುಬಲಿ ಚಿತ್ರದ ಬಳಿಕ ನಟ ಪ್ರಭಾಸ್ ಅವರ ಅನುಷ್ಕಾ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಬಹುತೇಕ ಅಭಿಮಾನಿಗಳು ಈ ಜೋಡಿ ಮದುವೆಯಾದರೆ ಚೆನ್ನಾಗಿದೆ, ಆದಷ್ಟು ಬೇಗ ಮದುವೆಯಾಗಲಿ ಎಂದು ಹಾರೈಸಿದ್ದರು. ಆದರೆ, ನಂತರ ಈ ಸುದ್ದಿ ತೆರೆಮರೆಗೆ ಜಾರಿತು.

ಈ ಮಧ್ಯೆ ಅನುಷ್ಕಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಗಾಸಿಪ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಬಗ್ಗೆ ಮೌನ ಮುರಿದ ಅನುಷ್ಠಾ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಅವರೇ ಮಾತಾಡಿದ್ದಾರೆ.

ನಾನು ಗುಟ್ಟಾಗಿ ಮದ್ವೆ ಆಗಿದ್ದೇನೆ, ಡೇಟಿಂಗ್‌ನಲ್ಲಿದ್ದೇನೆ ಎಂದು ಏನೆಲ್ಲ ಅಸಭ್ಯ ತೆರನಾದ ಸುದ್ದಿ ನನ್ನ ಕಿವಿಗೆ ಬಿದ್ದಿದೆ, ಅದರೆ ಈ ವಿಚಾರ ನನಗೆ ಕಾಮಿಡಿ ಆಗುತ್ತದೆ, ಈ ಮೂಲಕ ತಾನು ಯಾರನ್ನು ಇಷ್ಟ ಪಟ್ಟಿಲ್ಲ, ಇದೆಲ್ಲ ಗಾಸಿಪ್ ಅಷ್ಟೆ. ಮನೆಯವರಿಗೆ ಹಾಗೂ ನನಗೆ ಇಷ್ಟ ಆಗುವ ವರ ಸಿಕ್ಕಿದ ಮೇಲೆ ಖಂಡಿತವಾಗಿಯೂ ಮದುವೆ ವಿಚಾರ ಹೇಳ್ತೀನಿ ಅಂದಿದ್ದಾರೆ.

ಈ ಮೂಲಕ ಅನುಷ್ಕಾ ಅವರ ಮದುವೆ ವಯಸ್ಸು ದಾಟುತ್ತಿದ್ದರೂ ಇನ್ನು ಮದುವೆಗೆ ಮನಸ್ಸು ಮಾಡದಿರುವುದು ಅಭಿಮಾನಿಗಳ ಬೇಸರಕ್ಕೂ ಕಾರಣ ಆಗಿದೆ. ಈ ನಡುವೆ ಈ ಗಾಸಿಪ್ ಕೂಡ ಹರಿದಾಡುತ್ತಿದೆ. ಸದ್ಯ ಅವರು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಸದ್ಯ ಅಭಿಮಾನಿಗಳಿಗಂತೂ ಅನುಷ್ಕಾ ಅವರ ಮದುವೆಯದ್ದೇ ಚಿಂತೆ ಎಂದರೂ ತಪ್ಪಾಗಲಾರದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *