Ankitha Kundu : ಅಶ್ಲೀಲ ಫೋಟೋ ಪೋಸ್ಟ್ ಮಾಡಿದ ಗಾಯಕಿಗೆ ನೆಟ್ಟಿಗರ ತಪರಾಕಿ – ಬಿಚ್ಚಮ್ಮ ಆಗೋಕೆ ನೀನು ಲಾಯಕ್ಕಲ್ಲ ಎಂದ‌ ನೆಟ್ಟಿಗರು…!!

Ankitha Kundu : ಅಶ್ಲೀಲ ಫೋಟೋ ಪೋಸ್ಟ್ ಮಾಡಿದ ಗಾಯಕಿಗೆ ನೆಟ್ಟಿಗರ ತಪರಾಕಿ – ಬಿಚ್ಚಮ್ಮ ಆಗೋಕೆ ನೀನು ಲಾಯಕ್ಕಲ್ಲ ಎಂದ‌ ನೆಟ್ಟಿಗರು…!!

ನ್ಯೂಸ್ ಆ್ಯರೋ‌ : ಸರಿಗಮಪ ಲಿಟ್ಲ್ ಚಾಂಪ್ 2015 ರಲ್ಲಿ ತನ್ನ ಅಭೂತಪೂರ್ವ ಹಾಡಿನ ಮೂಲಕ ಕನ್ನಡಿಗರ ಮನಗೆದ್ದು, ಬಳಿಕ ಸ್ಯಾಂಡಲ್ ವುಡ್ ನ ಹಿನ್ನೆಲೆ ಗಾಯಕಿಯಾಗಿ ಹೆಸರು ಮಾಡುತ್ತಿರುವ ಅಂಕಿತಾ ಕುಂಡು ಅವರ ಫೇಸ್‌ಬುಕ್‌ ಪೋಸ್ಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ‌ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ ಅಂಕಿತಾ ಕುಂಡು ಅವರಿಗೆ ಅವರ ಅಭಿಮಾನಿಗಳು ಆಗಾಗ ಬುದ್ದಿವಾದ ಹೇಳುತ್ತಿದ್ದರು. ಆದರೆ ‌ಇತ್ತೀಚೆಗೆ ವಿಪರೀತ ರೀತಿಯ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುವುದನ್ನೇ ಖಯಾಲಿ ಮಾಡಿಕೊಂಡಿರುವ ಅಂಕಿತಾ ಕುಂಡು ಅವರ ನಡೆಗೆ ಅಭಿಮಾನಿಗಳು ಸಕತ್ ಆಗಿಯೇ ಬೆವರಿಳಿಸಿದ್ದಾರೆ.

2015 ರ ಸರಿಗಮಪ ಲಿಟ್ಲ್ ಚಾಂಪ್ಸ್ ನಲ್ಲಿ ತನ್ನದೇ ಸುಮಧುರ ಹಾಡಿನ ಮೂಲಕ ರನ್ನರ್ ಅಪ್ ಪ್ರಶಸ್ತಿ ಪಡೆದು ಮನೆಮಾತಾದ ಅಂಕಿತಾ ಹುಟ್ಟಿದ್ದು ದೆಹಲಿಯಲ್ಲಿ. ಮೂಲತಃ ಬೆಂಗಾಳಿಯಾಗಿರುವ ತಂದೆ ಅಮಿತಾಭ್ ಕುಂಡು, ತಾಯಿ ಸುರಸ್ರಿ ಕುಂಡು. ಒಬ್ಬ ಸಹೋದರಿಯನ್ನು ಹೊಂದಿರುವ ಅಂಕಿತಾ ಈಗಾಗಲೇ ಕನ್ನಡಿಗರಿಗೆ ಪರಿಚಿತ ಮುಖ. ಹಲವು ಸಿನಿಮಾ ಹಾಡುಗಳಿಗೆ ಧ್ವನಿಯಾದವರು ಅಂಕಿತಾ ಕುಂಡು.

ಸ್ಯಾಂಡಲ್ ವುಡ್ ನ ಹಿಟ್ ಚಿತ್ರಗಳಾದ ರಿಕಿ, ತ್ರಿವಿಕ್ರಮ, ಡಿಸೆಂಬರ್ 24, ಒಲವೇ ಮಂದಾರ 2, ಜೇಮ್ಸ್, ಲವ್ ಸ್ಟೋರಿ 1998 ಮುಂತಾದ ಸಿನಿಮಾಗಳಲ್ಲಿ ತನ್ನದೇ ಗಾಯನದ ಮೂಲಕ ಹೆಸರುವಾಸಿಯಾಗಿರುವ ಅಂಕಿತಾ ಕುಂಡು ಸದ್ಯ ಫೇಸ್‌ಬುಕ್‌ ನಲ್ಲಿ ತನ್ನ‌ ಅಸಭ್ಯ ಫೋಟೋ ಪೋಸ್ಟ್ ಮಾಡುವ ಮೂಲಕ ಚರ್ಚೆಗೆ ಆಹಾರವಾಗಿದ್ದಾರೆ.

ಅಂಕಿತಾ ಅವರ ಫೇಸ್‌ಬುಕ್‌ ಖಾತೆಯಲ್ಲಿ ಹಾಕಲಾದ ಹಲವು ಫೋಟೋಗಳಿಗೆ ನೆಟ್ಟಿಗರು‌ ಗರಂ ಆಗಿದ್ದು, ನಿಮ್ಮ ಗಾಯನಕ್ಕೆ ಬೆಲೆ ಇದೆ, ಅದನ್ನು ಮಾತ್ರ ಮಾಡಿ. ಅದನ್ನು ಬಿಟ್ಟು ಬಿಚ್ಚಮ್ಮ ಆಗಬೇಡಿ ಎಂದಿದ್ದಾರೆ. ಕೆಲವರಂತೂ ನಿನ್ನ ದೇಹದ ಮೈಮಾಟ ತೋರಿಸ್ಬೇಡ, ನೀನು ಗಾಯಕಿಯಾಗೋಕೆ ಮಾತ್ರ ಲಾಯಕ್ಕು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *