ನೀವು ಪ್ರತಿಯೊಂದಕ್ಕೂ ಡಿಜಿಟಲ್‌ ಪಾವತಿ ಬಳಸುತ್ತಿದ್ದೀರಾ? – ಈ ಮುನ್ಸೂಚನೆ ಪಾಲಿಸಿ, ಇಲ್ಲಾಂದ್ರೆ ಲಾಸ್ ಗ್ಯಾರಂಟಿ..!!

ನೀವು ಪ್ರತಿಯೊಂದಕ್ಕೂ ಡಿಜಿಟಲ್‌ ಪಾವತಿ ಬಳಸುತ್ತಿದ್ದೀರಾ? – ಈ ಮುನ್ಸೂಚನೆ ಪಾಲಿಸಿ, ಇಲ್ಲಾಂದ್ರೆ ಲಾಸ್ ಗ್ಯಾರಂಟಿ..!!

ನ್ಯೂಸ್‌ ಆ್ಯರೋ : ಇದೀಗ ಡಿಜಿಟಲ್‌ ಯುಗ. ಬಹುತೇಕ ಮಂದಿ ನಿತ್ಯದ ಎಲ್ಲ ಕಾರ್ಯಗಳಿಗೆ ಡಿಜಿಟಲ್ ಪಾವತಿಯನ್ನು ಅವಲಂಬಿಸಿದ್ದಾರೆ. ಅಂಗಡಿಗಳಲ್ಲಿ ಏನು ಖರೀದಿ ಮಾಡಿದರೂ ಡಿಜಿಟಲ್‌ ಪಾವತಿಯ ಮೊರೆ ಹೋಗುತ್ತೇವೆ. ಇಂದು ಜೀವನದ ಪ್ರಮುಖ ಭಾಗವಾಗಿರುವ ಡಿಜಿಟಲ್ ಪಾವತಿಯ ಬಗ್ಗೆ ಜನರಿಗೆ ತಿಳಿವಳಿಕೆ ಹೊಂದುವುದು ಮುಖ್ಯ. ಯಾಕೆಂದರೆ ಡಿಜಿಟಲ್‌ ಪಾವತಿ ವೇಳೆ ವಂಚನೆ ನಡೆಯುವ ಸಾಧ್ಯತೆ ಇರುತ್ತದೆ.

ಡಿಜಿಟರ್‌ ವಂಚನೆಗಳಿಂದ ರಕ್ಷಣೆ ಮಾಡಬೇಕಾದರೆ ‌‌ಕೆಲವೊಂದು ಸೂಚನೆ ಪಾಲಿಸಬೇಕಾಗುತ್ತದೆ. ಮುಖ್ಯವಾಗಿ ಗ್ರಾಹಕರು ವಿಶಿಷ್ಟ, ವಿಭಿನ್ನವಾದ ಪಾಸ್‌ವರ್ಡ್‌ಗಳನ್ನು ನಮ್ಮ ಪಾವತಿ ಆಪ್‌ಗೆ ಹಾಕುವುದು ಅಗತ್ಯ. ಹಾಗೆಯೇ ಎರಡು ಹಂತದ ಅಥೆಂಟಿಫಿಕೇಷನ್ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಯಾವುದೇ ವ್ಯಕ್ತಿಯೊಂದಿಗೂ ವೈಯಕ್ತಿಕ ಹಾಗೂ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬಾರದು.

ಗ್ರಾಹಕರು ಆಗಾಗೇ ತಮ್ಮ ಖಾತೆಯಲ್ಲಿ ನಡೆಯುವ ವಹಿವಾಟುಗಳ ಬಗ್ಗೆ ಪರಿಶೀಲನೆ ಮಾಡುತ್ತಿರಬೇಕಾಗುತ್ತದೆ. ಯಾವುದೇ ವಹಿವಾಟಿನ ಬಗ್ಗೆ ಸಂದೇಹ ಉಂಟಾದರೆ ಅದರ ಬಗ್ಗೆ ಹಣಕಾಸು ಸಂಸ್ಥೆ (ಬ್ಯಾಂಕ್) ಅಥವಾ ಪಾವತಿ ಸೇವೆ ನೀಡುವವರಿಗೆ ದೂರನ್ನು ಅಥವಾ ರಿಪೋರ್ಟ್ ಮಾಡಬೇಕಾಗುತ್ತದೆ.

ಡಿಜಿಟಲ್‌ ಪಾವತಿಯ ವಂಚನೆಗಳ ತಡೆಗೆ ಗ್ರಾಹಕರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಮೊದಲನೆಯದಾಗಿ, ನಿಮ್ಮ ಮೊಬೈಲ್ ಮತ್ತು ಅಪ್ಲಿಕೇಷನ್ ಅನ್ನು ಅಪ್‌ಡೇಟ್ ಮಾಡುತ್ತಿರಬೇಕಾಗುತ್ತದೆ. ಎರಡನೆಯದಾಗಿ, ವಿಶ್ವಾಸಾರ್ಹ ಮತ್ತು ಉತ್ತಮ ಸುರಕ್ಷತೆಯನ್ನು ಹೊಂದಿರುವ ಆಪ್‌ಗಳನ್ನು ಮಾತ್ರ ನೀವು ಬಳಕೆ ಮಾಡಬೇಕಾಗುತ್ತದೆ.

ಯಾವುದೇ ವೆಬ್‌ಸೈಟ್, ಆನ್‌ಲೈನ್ ಆಪ್‌ಗಳಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸುವ ವೇಳೆ ಆ ಆಪ್ ಅಧಿಕೃತವೇ ಎಂದು ತಿಳಿದುಕೊಳ್ಳಬೇಕು. ಯಾವುದೇ ಪಾವತಿ ಮಾಡುವುದಕ್ಕೂ ಮುನ್ನ ವಹಿವಾಟು ಮಾಹಿತಿಯನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಪಾವತಿ ಮೊತ್ತ ಮತ್ತು ಸ್ವೀಕರಿಸುವವರ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಡಿಜಿಟಲ್ ಪಾವತಿಗೆ ಯಾವ ಕಾರಣಕ್ಕೂ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಕೆ ಮಾಡಬಾರದು. ಬಳಕೆ ಮಾಡುವುದಾದರೂ ನಿಮ್ಮ ಇಂಟರ್ನೆಟ್ ಟ್ರಾಫಿಕ್ ಅನ್ನು ಎನ್‌ಕ್ರಿಪ್ಟ್ ಮಾಡಲು ಮತ್ತು ನಿಮ್ಮ ಡೇಟಾವನ್ನು ಹ್ಯಾಕರ್‌ಗಳಿಂದ ರಕ್ಷಿಸಲು ವರ್ಚುವಲ್ ಖಾಸಗಿ ನೆಟ್‌ವರ್ಕ್ ಅನ್ನು ಬಳಸುವುದು ಮುಖ್ಯವಾಗುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ, ಡಿಜಿಟಲ್ ಪಾವತಿ ವಂಚನೆಯನ್ನು ತಡೆಯಲು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಸಹಾಯವಾಗಬಹುದು. ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಕೆಲವು ವಂಚನೆ ಬಗ್ಗೆಯೂ ಮಾಹಿತಿ ನೀಡಿದೆ.

ವಂಚನೆ ತಡೆಗೆ ಈ ಸೂಚನೆ ಪಾಲಿಸಿ:

  • ಡೆಬಿಟ್ ಕಾರ್ಡ್ ಪಿನ್ ಮತ್ತು ಯುಪಿಐ ಪಿನ್‌ಗಳನ್ನು ಯಾವುದೇ ಕಾರಣಕ್ಕೂ ಯಾರ ಜತೆಗೂ ಹಂಚಿಕೊಳ್ಳಬಾರದು
  • ಬ್ಯಾಂಕ್ ಅಥವಾ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಯಾವುದೇ ಮಾಹಿತಿಯನ್ನು ಕೇಳಿದರೆ ಗ್ರಾಹಕರು ಮಾಹಿತಿ ನೀಡಬಾರದು
  • ರಿಮೋಟ್ ಆಕ್ಸಸ್/ ಸ್ಕ್ರೀನ್ ಶೇರಿಂಗ್ ಆಪ್‌ಗಳನ್ನು ವಂಚಕರು ಬಳಕೆ ಮಾಡಬಹುದು, ಅದಕ್ಕಾಗಿ ಎಂದಿಗೂ ಕೂಡಾ ಸ್ಕ್ರೀನ್ ಶೇರಿಂಗ್ ಆಪ್ ಬಳಕೆ ಮಾಡುವಾಗ ಎಚ್ಚರವಾಗಿರಿ. ಹಣಕಾಸು ವಹಿವಾಟು ನಡೆಸುವಾಗ ಸ್ಟ್ರೀನ್ ಶೇರಿಂಗ್ ಆಪ್ ಬಳಕೆ ಮಾಡಬಾರದು
  • ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವಹಿವಾಟಿನ ವಿವರಗಳನ್ನು ಎಂದಿಗೂ ಪೋಸ್ಟ್ ಮಾಡಬಾಋದು
  • ಕರೆ ಮಾಡಿ ಮೂರನೇ ವ್ಯಕ್ತಿಯೊಂದಿಗೆ ಮಾತನಾಡುವಾಗ ವಹಿವಾಟು ನಡೆಸುವುದನ್ನು ತಪ್ಪಿಸಬೇಕು
  • ನಿಮ್ಮ ಬ್ಯಾಂಕ್‌ ಖಾತೆಗೆ ರಿಜಿಸ್ಟಾರ್ ಮಾಡಲಾಗಿರುವ ಅಪ್‌ಡೇಟೆಡ್ ಮೊಬೈಲ್ ಸಂಖ್ಯೆ ಬಳಕೆ ಮಾಡಬೇಕು
  • ಪಾವತಿ ಸಂದರ್ಭದಲ್ಲಿ ಮಾತ್ರ ಯುಪಿಐ ಪಿನ್ ಅನ್ನು ಬಳಕೆ ಮಾಡಬೇಕು
  • ವಹಿವಾಟು ಮಾಡುವಾಗ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಪರಿಶೀಲನೆ ಮಾಡಬೇಕು
  • ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಬ್ಯಾಂಕ್‌ನ ಸಂಪರ್ಕ ವಿವರಗಳನ್ನು ಹುಡುಕಬೇಕು
  • ದೂರುಗಳಿದ್ದಲ್ಲಿ, ಬಳಕೆದಾರರು ಅದನ್ನು ಬ್ಯಾಂಕ್ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ವರದಿ ಮಾಡಬೇಕು

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *