ಗಂಡ-ಹೆಂಡತಿ ರಾತ್ರಿ ಹಗಲು ಉದ್ಯೋಗಕ್ಕೆ ಹೋದರೆ ಸಂಸಾರಕ್ಕೆ ಸಮಯವೆಲ್ಲಿದೆ? – ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಬೆಂಗಳೂರಿನ ಟೆಕ್ಕಿ ದಂಪತಿಗೆ ಸುಪ್ರೀಂ ಪ್ರಶ್ನೆ..!!

ಗಂಡ-ಹೆಂಡತಿ ರಾತ್ರಿ ಹಗಲು ಉದ್ಯೋಗಕ್ಕೆ ಹೋದರೆ ಸಂಸಾರಕ್ಕೆ ಸಮಯವೆಲ್ಲಿದೆ? – ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಬೆಂಗಳೂರಿನ ಟೆಕ್ಕಿ ದಂಪತಿಗೆ ಸುಪ್ರೀಂ ಪ್ರಶ್ನೆ..!!

ನ್ಯೂಸ್‌ ಆ್ಯರೋ : ಸಣ್ಣಪುಟ್ಟ ವಿಚಾರಕ್ಕೆ ದಂಪತಿ ಮಧ್ಯೆ ಜಗಳವಾಗಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಉದ್ಯೋಗದೊಂದಿಗೆ ಸಂಸಾರಕ್ಕೂ ಸಮಯ ಕೊಟ್ಟರೆ ದಾಂಪತ್ಯ ಜೀವನವೂ ಚೆನ್ನಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಪ್ರಕರಣವೊಂದರ ವಿಚಾರಣೆ ವೇಳೆ ಸಲಹೆ ನೀಡಿದೆ.

ಸಂಸಾರದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸಮಯ ಕೊಡಲು ಸಾಧ್ಯವಾಗದೆ ಇರುವಾಗ, ಮತ್ತೊಂದು ಅವಕಾಶ ಏಕೆ ಕೊಡಬಾರದು? ಎಂದು ವಿಚ್ಛೇದನ ಕೋರಿ ಬಂದಿರುವ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿಗೆ ಸುಪ್ರೀಂಕೋರ್ಟ್ ಪ್ರಶ್ನೆ ಕೇಳಿದೆ.

ನಿಮಗೆ ಸಂಸಾರ ನಡೆಸಲು ಸಮಯ ಎಲ್ಲಿದೆ? ನೀವಿಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ಒಬ್ಬರು ಹಗಲಿನಲ್ಲಿ ಕೆಲಸಕ್ಕೆ ಹೋದರೆ ಮತ್ತೊಬ್ಬರು ರಾತ್ರಿ ಹೋಗುತ್ತೀರಿ. ನಿಮಗೆ ವಿಚ್ಛೇದನ ಬಗ್ಗೆ ಪಶ್ಚಾತ್ತಾಪವಿಲ್ಲ, ಆದರೆ ಮದುವೆ ಬಗ್ಗೆ ಪಶ್ಚಾತ್ತಾಪ ಇದೆ. ನಿಮಗೆ ಈ ಸಂಸಾರ ಸರಿಪಡಿಸಲು ಎರಡನೇ ಅವಕಾಶ ಏಕೆ ನೀಡಬಾರದು? ಎಂದು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠ ಪ್ರಶ್ನಿಸಿದೆ.

ಬೆಂಗಳೂರು ವಿಚ್ಛೇದನಗಳು ಹೆಚ್ಚು ಹೆಚ್ಚು ನಡೆಯುವಂತಹ ಸ್ಥಳವಲ್ಲ. ತಾವು ಜತೆಯಾಗಿ ಬಾಳಲು ದಂಪತಿ ಮತ್ತೊಂದು ಅವಕಾಶ ನೀಡಬಹುದು ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

ಪರಸ್ಪರ ಸಹಮತದಲ್ಲಿ ವಿಚ್ಛೇದನ. ಆದರೆ, ಈ ಪ್ರಕರಣವನ್ನು ತಮ್ಮಿಬ್ಬರ ನಡುವೆ ಇತ್ಯರ್ಥ ಪಡಿಸಿಕೊಳ್ಳುವ ಸಾಧ್ಯತೆಗಳನ್ನು ಹುಡುಕಲು, ಈ ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಮೊರೆ ಹೋಗಲಾಗಿತ್ತು ಎಂದು ಗಂಡ ಮತ್ತು ಹೆಂಡತಿ ಇಬ್ಬರ ವಕೀಲರು ಪೀಠಕ್ಕೆ ತಿಳಿಸಿದರು. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13ಬಿ ಅಡಿ ಕೆಲವು ನಿಯಮ ಹಾಗೂ ಷರತ್ತುಗಳಿಗೆ ಒಳಪಟ್ಟು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಮದುವೆಯನ್ನು ಮುರಿದುಕೊಳ್ಳಲು ಪರಿಹಾರ ಒಪ್ಪಂದಕ್ಕೆ ಗಂಡ ಮತ್ತು ಹೆಂಡತಿ ಇಬ್ಬರೂ ಬಂದಿದ್ದಾರೆ ಎಂದು ಪೀಠಕ್ಕೆ ಮಾಹಿತಿ ನೀಡಲಾಯಿತು.

ಪತ್ನಿಗೆ ಶಾಶ್ವತ ಜೀವನಾಂಶವಾಗಿ ಎಲ್ಲ ಹಣಕಾಸು ವಿಚಾರಗಳನ್ನು ಪೂರ್ಣ ಹಾಗೂ ಅಂತಿಮಗೊಳಿಸಲು ಒಟ್ಟು ₹12.51 ಲಕ್ಷ ನೀಡಲು ಗಂಡ ಒಪ್ಪಿಕೊಂಡಿದ್ದಾನೆ ಎಂದು ವಕೀಲರು ಹೇಳಿದರು. ಹಣ ಸ್ವೀಕರಿಸಿದ ಡಿಮ್ಯಾಂಡ್ ಡ್ರಾಫ್ಟ್‌ನ ರಸೀದಿಗೆ ಹೆಂಡತಿ ಸಹಿ ಹಾಕಿರುವುದನ್ನು ಕೂಡ ನ್ಯಾಯಾಲಯ ದಾಖಲೆಗೆ ತೆಗೆದುಕೊಂಡಿತು.

ಕೋರ್ಟ್ ವಿಚಾರಣೆ ನಡೆಸಿದಾಗ, ಪರಸ್ಪರ ಸಹಮತದ ಮೇರೆಗೆ ವಿಚ್ಛೇದನ ಕೋರಿ ಹಾಗೂ ತಮ್ಮ ವಿವಾದಗಳನ್ನು ಸ್ನೇಹಪೂರ್ವಕವಾಗಿ ಪರಿಹರಿಸಿಕೊಳ್ಳಲು ಒಪ್ಪಿಕೊಂಡಿರುವುದಾಗಿ ಇಬ್ಬರೂ ಹೇಳಿದ್ದಾರೆ. ತಾವು ಬದ್ಧರಾಗಬೇಕಾದ ಒಪ್ಪಂದಗಳನ್ನೂ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಮದುವೆಯನ್ನು ಪರಸ್ಪರ ಒಪ್ಪಿಗೆಯ ವಿಚ್ಛೇದನದ ಮೇರೆಗೆ ರದ್ದುಗೊಳಿಸಲಾಗುತ್ತದೆ ಎಂದು ಏ. 18ರಂದು ಕೋರ್ಟ್ ಆದೇಶ ನೀಡಿದೆ.

ಸಂವಿಧಾನದ 142ನೇ ವಿಧಿ ಅಡಿ ಸಲ್ಲಿಸಿದ ಅರ್ಜಿಯನ್ನು ಹಾಗೂ ಪರಸ್ಪರ ಪರಿಹಾರ ಒಪ್ಪಂದವನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ. ನಾವು ಅದನ್ನು ಹಾಗೆಯೇ ಅನುಮೋದಿಸಿದ್ದೇವೆ. ಪರಿಹಾರ ಒಪ್ಪಂದಗಳು ಕಾನೂನು ಬದ್ಧವಾಗಿವೆ ಮತ್ತು ಪರಿಹಾರ ಸ್ವೀಕೃತಿ ವಿಚಾರದಲ್ಲಿ ಯಾವುದೇ ಕಾನೂನು ತೊಡಕು ಇಲ್ಲ ಎಂದು ನ್ಯಾಯಪೀಠ ಹೇಳಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *