IPL 2023 : CSK vs GT ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಗಳ ಬಳಕೆ – ಏನಿದು ಹೊಸ ನಿಯಮ? ಷರತ್ತುಗಳೇನು? ಇಲ್ಲಿದೆ ಸಂಪೂರ್ಣ ವರದಿ..

IPL 2023 : CSK vs GT ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಗಳ ಬಳಕೆ – ಏನಿದು ಹೊಸ ನಿಯಮ? ಷರತ್ತುಗಳೇನು? ಇಲ್ಲಿದೆ ಸಂಪೂರ್ಣ ವರದಿ..

ನ್ಯೂಸ್ ಆ್ಯರೋ‌ : 2008ರಲ್ಲಿ ಜನ್ಮತಾಳಿದ ಐಪಿಎಲ್ ಹಲವು ಬದಲಾವಣೆಗಳನ್ನ ಕಂಡಿದೆ. ಹೊಸ ರೂಲ್ಸ್ ಗಳು ಟೂರ್ನಿಗೆ ಹೊಸ ಮೆರಗು ತಂದುಕೊಟ್ಟಿವೆ. ಅಂತಯೇ ಈ ಬಾರಿಯ ಐಪಿಎಲ್ನಲ್ಲೂ ನೀವು ಹೊಸ ರೂಲ್ಸ್ ಅನ್ನು ನೋಡಬಹುದು. ನಿನ್ನೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ 11 ಆಟಗಾರರ ಪಟ್ಟಿಯಲ್ಲಿ ಇಲ್ಲದ ತುಷಾರ್ ಪಾಂಡೆ ಬೌಲಿಂಗ್ ಮಾಡಿದ್ದಾರೆ.‌ ಹಾಗಾದರೆ ಅದು ಹೇಗೆ ಗೊತ್ತಾ..!? ಅದುವೇ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್.

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೊಸದಾಗಿ ಪರಿಚಯಿಸಲಾದ ಇಂಪ್ಯಾಕ್ಸ್​ ಪ್ಲೇಯರ್​(ಪ್ರಭಾವಿ ಆಟಗಾರ) ಅವಕಾಶವನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಬಳಸಿಕೊಂಡಿತು. ಬಲಗೈ ಮಧ್ಯಮ ವೇಗಿ ತುಷಾರ್​ ದೇಶಪಾಂಡೆ ಅವರನ್ನು ಕಣಕ್ಕಿಳಿಸಿತು. ತುಷಾರ್​ ಐಪಿಎಲ್​ ಇತಿಹಾಸದಲ್ಲಿ ಮೊದಲ ‘ಇಂಪ್ಯಾಕ್ಟ್ ಪ್ಲೇಯರ್’ ಎನಿಸಿಕೊಂಡರು. ಚೆನ್ನೈ ತಂಡ ಮೊದಲು ಬ್ಯಾಟ್​ ಮಾಡಿ 178 ರನ್​ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಬೌಲರ್​ ಅನ್ನು ಕಣಕ್ಕಿಳಿಸಲು ಉದ್ದೇಶಿಸಿ, ಬ್ಯಾಟ್​ ಮಾಡಿದ್ದ ಅಂಬಟಿ ರಾಯುಡು ಬದಲಾಗಿ ತುಷಾರ್​ ದೇಶಪಾಂಡೆಯನ್ನು ಇಂಪ್ಯಾಕ್ಟ್​ ಪ್ಲೇಯರ್​ ನಿಮಯದಡಿ ಆಡಿಸಿತು. ಇದು ಐಪಿಎಲ್​ ಇತಿಹಾಸದಲ್ಲಿಯೇ ಇದೇ ಮೊದಲಾಗಿದೆ.

ಇದಲ್ಲದೇ, ಗುಜರಾತ್​ ಟೈಟಾನ್ಸ್​ ಕೂಡ ಸಾಯಿ ಸುದರ್ಶನ್ ಅವರನ್ನು ಬಳಸಿಕೊಂಡಿತು. ಗುಜರಾತ್ ಟೈಟಾನ್ಸ್​ನ ಕೇನ್ ವಿಲಿಯಮ್ಸನ್‌ ಫೀಲ್ಡಿಂಗ್​ ಮಾಡುವಾಗ ಗಾಯಗೊಂಡರು. ನ್ಯೂಜಿಲೆಂಡ್ ಬ್ಯಾಟರ್ ಬದಲಿಯಾಗಿ ಬಿ.ಸಾಯಿ ಸುದರ್ಶನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಆಯ್ಕೆ ಮಾಡಿತು. ಇದರಿಂದ ಸುದರ್ಶನ್​​ ಎರಡನೇ ಪ್ರಭಾವಿ ಆಟಗಾರರಾದರು.

ಆದರೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಉಭಯ ತಂಡಗಳ ತುಷಾರ್​ ದೇಶಪಾಂಡೆ ಮತ್ತು ಸಾಯಿ ಸುದರ್ಶನ್​ ಪಂದ್ಯದಲ್ಲಿ ಪ್ರಭಾವ ಬೀರಲಿಲ್ಲ. 3.2 ಓವರ್ ಬೌಲ್​ ಮಾಡಿದ ದೇಶಪಾಂಡೆ 1 ವಿಕೆಟ್​ ಪಡೆದು 51 ರನ್​ ನೀಡಿ ದುಬಾರಿಯಾದರು. ಇದರಲ್ಲಿ ತಲಾ 1 ವೈಡ್​, ನೋಬಾಲ್​ ಎಸೆದರು. ಎರಡನೇ ಇಂಪ್ಯಾಕ್ಟ್​ ಪ್ಲೇಯರ್​ ಸಾಯಿ ಸುದರ್ಶನ್​ ಕೂಡ ಬ್ಯಾಟಿಂಗ್​ನಲ್ಲಿ ಕರಾಮತ್ತು ಮಾಡಲಿಲ್ಲ. 17 ಎಸೆತಗಳಲ್ಲಿ 3 ಬೌಂಡರಿಗಳಿಂದ 22 ರನ್​ ಮಾತ್ರ ಮಾಡಿದರು.

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?

  1. ಆಟದ ಮಧ್ಯೆ ಬದಲಿಯಾಗಿ ಒಬ್ಬ ಆಟಗಾರ ಆಡಬಹುದು
  2. ಬೌಲರ್ ಅಥವಾ ಒಬ್ಬ ಬ್ಯಾಟರ್​​ನನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು
  3. ಟಾಸ್​ ವೇಳೆನೇ ಕ್ಯಾಪ್ಟನ್ಸ್​ ಹೆಚ್ಚುವರಿ 4 ಆಟಗಾರರ ಹೆಸರು ನೀಡಬೇಕು
  4. 14 ಓವರ್​ಗಳ ಒಳಗೆ ಈ ಇಂಪ್ಯಾಕ್ಟ್​ ಪ್ಲೇಯರ್ ನಿಯಮ ಅನ್ವಯ
  5. ಇಂಪ್ಯಾಕ್ಟ್​​​​ ಪ್ಲೇಯರ್ ಆಡಿದ್ರೆ ಬದಲಿ ಆಟಗಾರ ತಂಡ ತೊರೆಯಬೇಕು

ಯಾರು ಇಂಪ್ಯಾಕ್ಟ್ ಪ್ಲೇಯರ್ ? ವಿದೇಶಿಗನಾ ? ಭಾರತೀಯನಾ ?

  1. ಈ ನಿಯಮ ಮೊದಲು ಭಾರತೀಯರಿಗೆ ಅನ್ವಯ.
  2. ಪ್ಲೇಯಿಂಗ್​​​​-11 ನಲ್ಲಿ 4 ವಿದೇಶಿಗರಿದ್ದರೆ ನಿಯಮ ಅನ್ವಯವಾಗದು.
  3. ಮೂವರಿದ್ದರೆ ಇಂಪ್ಯಾಕ್ಟ್​​ ಪ್ಲೇಯರ್ ಆಗಿ ವಿದೇಶಿಗ ಆಡಬಹುದು.
  4. ವಿದೇಶಿಗನ ಬದಲು ಭಾರತೀಯ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು.
  5. ಇಂಪ್ಯಾಕ್ಟ್ ಪ್ಲೇಯರ್ ಅನ್ನು ಮತ್ತೆ ಬದಲಿಸಲು ಅವಕಾಶವಿಲ್ಲ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *