ಮನೆ ಫೀಲಿಂಗ್ ಕೊಡದ ಎಕರೆಯಲ್ಲಿ ನಿರ್ಮಿಸಲಾಗಿದ್ದ ಬಂಗಲೆ – ನೂರು ಕೋಟಿಗೆ ಮನೆ ಮಾರಾಟ ಮಾಡಿದ್ರೂ ಭಾರೀ ನಷ್ಟ ಮಾಡ್ಕೊಂಡ ನಟಿ ಯಾರು?

ಮನೆ ಫೀಲಿಂಗ್ ಕೊಡದ ಎಕರೆಯಲ್ಲಿ ನಿರ್ಮಿಸಲಾಗಿದ್ದ ಬಂಗಲೆ – ನೂರು ಕೋಟಿಗೆ ಮನೆ ಮಾರಾಟ ಮಾಡಿದ್ರೂ ಭಾರೀ ನಷ್ಟ ಮಾಡ್ಕೊಂಡ ನಟಿ ಯಾರು?

ನ್ಯೂಸ್‌ ಆ್ಯರೋ : ಬಣ್ಣದ ಬದುಕಿನ ಮಂದಿ ತಮ್ಮ ಜೀವನವನ್ನು ತುಂಬಾನೇ ಐಷಾರಾಮಿಯಾಗಿ ಕಳೆಯಲು ಇಚ್ಛೆ ಪಡುತ್ತಾರೆ. ಅದಕ್ಕಾಗಿ ದೊಡ್ಡ ದೊಡ್ಡ ಬಂಗಲೆಗಳಲ್ಲೇ ಇರಲು ಇಚ್ಛಿಸುತ್ತಾರೆ. ಆದರೆ ಇಲ್ಲೊಂದು ನಟಿ ಎಕರೆಯಲ್ಲಿ ಆವೃತವಾಗಿರುವ ಬಂಗಲೆ ಮನೆಯ ವಾತಾವರಣವನ್ನು ಕೊಡುತ್ತಿಲ್ಲ ಎಂದು ಮಾರಾಟ ಮಾಡಿದ್ದಾರೆ.

ಈಕೆ ಬೇರಾರು ಅಲ್ಲ ಹಾಲಿವುಡ್ ಜನಪ್ರಿಯ ಸೆಲೆಬ್ರಿಟಿ ಆಗಿರುವ ಬ್ರಿಟ್ನಿ ಸ್ಪಿಯರ್ಸ್ ಅವರು. ಏಳು ಎಕರೆ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ವಿಶಾಲವಾದ ಮನೆಯನ್ನು ನಿರ್ಮಿಸಲಾಗಿತ್ತು. ಈ ಮನೆಯಲ್ಲಿ 12 ಬೆಡ್​ರೂಂಗಳಿದ್ದವು. ಒಂದು ದೊಡ್ಡ ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್ ಮತ್ತು ಒಂದು ವಾಟರ್ ಸ್ಪೋರ್ಟ್ ಏರಿಯಾ. ದೊಡ್ಡ ಬಾರ್, ಫೈರ್ ರೂಂ, ಗೆಸ್ಟ್ ಹೌಸ್, ವಿಶಾಲವಾದ ಕಾರು ಪಾರ್ಕಿಂಗ್ ಹಾಗೂ ಗ್ಯಾರೇಜ್ ಸೇರಿದಂತೆ ಹಲವು ಅನುಕೂಲಗಳು ಈ ಮನೆಯಲ್ಲಿದ್ದವು.

ಆದರೆ ಈ ಐಶಾರಾಮಿ ಮನೆಯನ್ನು ಬ್ರಿಟ್ನಿ ಸ್ಪಿಯರ್ಸ್ ಇತ್ತೀಚೆಗಷ್ಟೇ ಮಾರಾಟ ಮಾಡಿದ್ದಾಳೆ. ಈ ಮನೆ ಅವಳಿಗೆ ಖಾಸಗಿ ಎನಿಸುತ್ತಿಲ್ಲವಂತೆ. ಈ ಮನೆ ಸಾರ್ವಜನಿಕ ವೀಕ್ಷಣೆಗೆ ಸುಲಭಕ್ಕೆ ಲಭ್ಯವಿದೆ. ಇಲ್ಲಿ ಏಕಾಂತ ಪ್ರಾಪ್ತವಾಗುವುದಿಲ್ಲ ಎಂಬ ಕಾರಣಕ್ಕೆ ಈ ಮನೆಯನ್ನು ಬ್ರಿಟ್ನಿ ಕಳೆದ ವರ್ಷಾರಂಭದಲ್ಲಿಯೇ ಮನೆಯಿಂದ ಹೊರಬಂದಿದ್ದರು. ಆದರೆ ಇದೀಗ ಈ ಮನೆಯನ್ನು ಜನಪ್ರಿಯ ವಕೀಲರೊಬ್ಬರಿಗೆ ಮಾರಾಟ ಮಾಡಿದ್ದಾಳೆ.

3 ಮಿಲಿಯನ್ ಮಿಲಿಯನ್ ಡಾಲರ್​ಗೆ ಮನೆಯನ್ನು ಮಾರಾಟ ಮಾಡಿದ್ದರು, ಅಮೆರಿಕದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಹೌಸಿಂಗ್ ಮಾರುಕಟ್ಟೆ ಮೌಲ್ಯ ಕುಸಿದಿದ್ದು ಗಾಯಕಿಯ ನಿರೀಕ್ಷಿತ ಬೆಲೆಗಿಂತಲೂ 1.70 ಮಿಲಿಯನ್ ಡಾಲರ್ ಕಡಿಮೆ ಮೊತ್ತಕ್ಕೆ ಮಾರಾಟವಾಗಿದೆ. ಹತ್ತಿರ-ಹತ್ತಿರ ನೂರು ಕೋಟಿಗೆ ಮನೆ ಮಾರಾಟವಾಗಿದೆಯಾದರೂ ಹೌಸಿಂಗ್ ಮಾರುಕಟ್ಟೆ ಕುಸಿದಿರುವ ಕಾರಣ ನಟಿಗೆ ನಷ್ಟವಾಗಿದೆ ಎನ್ನಲಾಗಿದೆ.

ಮನೆ ಇಷ್ಟವಿಲ್ಲದೆ ಕಾರಣ ನಟಿ ಬ್ರಿಟ್ನಿ ನಷ್ಟದ ಮೊತ್ತಕ್ಕೆ ಮನೆಯನ್ನು ವಕೀಲರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಇದೀಗ ಬ್ರಿಟ್ನಿ ಸ್ಪಿಯರ್ಸ್ ತನ್ನ ಬಾಯ್​ಫ್ರೆಂಡ್ ಜೊತೆಗೆ ಥೌಸಂಡ್ಸ್ ಓಕ್ಸ್ ಎಂಬಲ್ಲಿ ಮನೆ ಮಾಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *