ಮೌನಿಕಾ ರೆಡ್ಡಿ ವೆಡ್ಸ್‌ ಮಂಚು; ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಮದುವೆಯ ಫೋಟೋಸ್ ವೈರಲ್…!!

ಮೌನಿಕಾ ರೆಡ್ಡಿ ವೆಡ್ಸ್‌ ಮಂಚು; ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಮದುವೆಯ ಫೋಟೋಸ್ ವೈರಲ್…!!

ನ್ಯೂಸ್ ಆ್ಯರೋ : ತೆಲುಗು ನಟ ಮಂಚು ಮನೋಜ್ ವಿವಾಹವಾಗಿದ್ದಾರೆ. ಮೌನಿಕಾ ರೆಡ್ಡಿ ಎಂಬುವರನ್ನ ಮಂಚು ಮನೋಜ್ ಮದುವೆಯಾಗಿದ್ದಾರೆ. ಮಾರ್ಚ್ 3 ರಂದು (ಶುಕ್ರವಾರ) ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಅವರ ವಿವಾಹ ಮಹೋತ್ಸವ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಹೋದರಿ ಲಕ್ಷ್ಮೀ ಮಂಚು ನಿವಾಸದಲ್ಲಿ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಕಲ್ಯಾಣ ಜರುಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಮೌನಿಕಾ ರೆಡ್ಡಿ ಕೊರಳಿಗೆ ಮಂಚು ಮನೋಜ್ ಮಾಂಗಲ್ಯಧಾರಣೆ ಮಾಡಿದ್ದಾರೆ. ಬಂಧು ಮಿತ್ರರು, ಆತ್ಮೀಯರು ಹಾಗೂ ತಾರೆಯರು ಮಂಚು ಮನೋಜ್ ಮತ್ತು ಮೌನಿಕಾ ರೆಡ್ಡಿ ವಿವಾಹಕ್ಕೆ ಸಾಕ್ಷಿಯಾಗಿದ್ದರು.

ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಅವರ ಮದುವೆ ಸಂಪ್ರದಾಯಬದ್ಧವಾಗಿ, ಶಾಸ್ತ್ರೋಕ್ತವಾಗಿ ಜರುಗಿತು. ವಿವಾಹಕ್ಕೆ ಕ್ರೀಮ್ ಮತ್ತು ಗೋಲ್ಡನ್ ಬಣ್ಣದ ಕುರ್ತಾ ಹಾಗೂ ಧೋತಿಯನ್ನ ವರ ಮಂಚು ಮನೋಜ್ ಧರಿಸಿದ್ದರು. ಇನ್ನೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ವಧು ಮೌನಿಕಾ ರೆಡ್ಡಿ ಮಿರಿಮಿರಿ ಮಿಂಚುತ್ತಿದ್ದರು.

ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಮದುವೆ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಲೇ ಇತ್ತು. ಕಳೆದ ವರ್ಷದ ಗಣೇಶ ಹಬ್ಬದ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ವಿವಾಹವಾಗಿದ್ದಾರೆ.

ಇನ್ನೂ ತೆಲುಗು ನಟ ಮಂಚು ಮನೋಜ್ ಅವರಿಗೆ ಇದು ಎರಡನೇ ವಿವಾವಾಗಿದ್ದು, ಈ ಹಿಂದೆ ಪ್ರಣತಿ ರೆಡ್ಡಿ ಅವರನ್ನ ಮಂಚು ಮನೋಜ್ ಮದುವೆಯಾಗಿದ್ದರು. ಪ್ರಣತಿ ರೆಡ್ಡಿ ಅವರನ್ನು ಪ್ರೀತಿಸಿ ಮಂಚು ಮನೋಜ್ ಮದುವೆಯಾಗಿದ್ದರು. 2015ರಲ್ಲಿ ತಮ್ಮ ಹುಟ್ಟುಹಬ್ಬದಂದೇ ಮಂಚು ಮನೋಜ್, ಪ್ರಣತಿ ರೆಡ್ಡಿ ಅವರನ್ನ ವರಿಸಿದ್ದರು.

ಮಂಚು ಮನೋಜ್ ಹಾಗೂ ಪ್ರಣತಿ ರೆಡ್ಡಿ ಅವರ ಮದುವೆಗೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ತಾರೆಯರು ಸಾಕ್ಷಿಯಾಗಿದ್ದರು. ಆದರೆ, ಮಂಚು ಮನೋಜ್ ಹಾಗೂ ಪ್ರಣತಿ ರೆಡ್ಡಿ ಅವರ ಸಂಸಾರ ಹೆಚ್ಚು ದಿನ ಉಳಿಯಲಿಲ್ಲ. ಇಬ್ಬರ ಮಧ್ಯೆ ಮನಸ್ತಾಪ, ಭಿನ್ನಾಭಿಪ್ರಾಯ ಭುಗಿಲೆದ್ದಿತು. ಹೀಗಾಗಿ, 2019ರಲ್ಲಿ ಮಂಚು ಮನೋಜ್ ಹಾಗೂ ಪ್ರಣತಿ ರೆಡ್ಡಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದರು. ಅಲ್ಲದೇ ಭೂಮಾ ಮೌನಿಕಾ ರೆಡ್ಡಿಗೂ ಇದು 2ನೇ ಮದುವೆಯಾಗಿದ್ದು, 2016ರಲ್ಲಿ ಬೆಂಗಳೂರು ಮೂಲಕ ಗಣೇಶ್ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದರು. ಆದರೆ 3 ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಇಬ್ಬರು ವಿಚ್ಛೇದನ ಪಡೆಯುವ ಮೂಲಕ ಬೇರೆಯಾದರು.

ಟಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ಮಾಪಕ ಮೋಹನ್ ಬಾಬು ಮತ್ತು ನಿರ್ಮಲಾ ದೇವಿ ದಂಪತಿಯ ಪುತ್ರ ಮಂಚು ಮನೋಜ್. ‘ಮೇಜರ್ ಚಂದ್ರಕಾಂತ್’ ಸಿನಿಮಾದ ಮೂಲಕ ಬಾಲನಟನಾಗಿ ಮಂಚು ಮನೋಜ್ ಚಿತ್ರರಂಗಕ್ಕೆ ಕಾಲಿಟ್ಟರು. ‘ದೊಂಗ ದೊಂಗದಿ’ ಸಿನಿಮಾದ ಮೂಲಕ ಮಂಚು ಮನೋಜ್ ನಾಯಕರಾದರು. ‘ಶ್ರೀ’, ‘ಪ್ರಯಾಣಂ’, ‘ಬಿಂದಾಸ್’, ‘ಪೋಟುಗಾಡು’, ‘ಶೌರ್ಯ’ ಮುಂತಾದ ಸಿನಿಮಾಗಳಲ್ಲಿ ಮಂಚು ಮನೋಜ್ ಅಭಿನಯಿಸಿದ್ದಾರೆ. ಸದ್ಯ ಮಂಚು ಮನೋಜ್ ಕೈಯಲ್ಲಿ ‘ಅಹಂ ಬ್ರಹ್ಮಾಸ್ಮಿ’ ಸಿನಿಮಾ ಇದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *