ದಶಕಕ್ಕೂ ಹೆಚ್ಚು ಕಾಲ ಬಾಳಿಕೆ ಬಂದ ಉಪಗ್ರಹ ಬೀಳಿಸೋಕೆ ಇಸ್ರೋ ಸಜ್ಜು – ಅನಾಹುತವಾಗದಂತೆ ತಪ್ಪಿಸಲು ಇಸ್ರೋ ಭರ್ಜರಿ ಪ್ಲ್ಯಾನ್….!!

ದಶಕಕ್ಕೂ ಹೆಚ್ಚು ಕಾಲ ಬಾಳಿಕೆ ಬಂದ ಉಪಗ್ರಹ ಬೀಳಿಸೋಕೆ ಇಸ್ರೋ ಸಜ್ಜು – ಅನಾಹುತವಾಗದಂತೆ ತಪ್ಪಿಸಲು ಇಸ್ರೋ ಭರ್ಜರಿ ಪ್ಲ್ಯಾನ್….!!

ನ್ಯೂಸ್ ಆ್ಯರೋ : ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಸದ್ಯ ಅಂತರಿಕ್ಷದಲ್ಲಿ ನಿರುಪಯುಕ್ತವಾಗಿರುವ ಉಪಗ್ರಹವೊಂದನ್ನು ಮರಳಿ ಭೂ ವಾತಾವರಣಕ್ಕೆ ತಂದು ಸಾಗರದಲ್ಲಿ ಬೀಳಿಸುವ ಅತ್ಯಂತ ಸವಾಲಿನ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಸಂಜೆ ನಡೆಸಲಿದೆ.

ಉಷ್ಣ ವಲಯದ ವಾತಾವರಣ ಹಾಗೂ ಹವಾಮಾನ ಅಧ್ಯಯನ ನಡೆಸಲು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್‌ (CNES) ಜತೆಗೂಡಿ ಇಸ್ರೋ (ISRO) 2011ರ ಅಕ್ಟೋಬರ್‌ 12ರಂದು ಮೇಘ ಟ್ರಾಪಿಕ್ಸ್‌-1 (Megha-Tropiques-1) (MT1) ಎಂಬ ಕೆಳ ಭೂಕಕ್ಷೆ ಉಪಗ್ರಹವನ್ನು ಉಡಾವಣೆ ಮಾಡಿತ್ತು.

ಈ ಉಪಗ್ರಹದ ಜೀವಿತಾವಧಿ ಮೂರು ವರ್ಷಗಳಾಗಿತ್ತಾದರೂ, ಉಪಗ್ರಹ ಒಂದು ದಶಕ ಸೇವೆ ಸಲ್ಲಿಸಿದೆ. ಇದೀಗ ನಿರುಪಯುಕ್ತವಾಗಿರುವ 1 ಟನ್‌ ತೂಕದ ಉಪಗ್ರಹವನ್ನು ಮರಳಿ ಭೂಮಿಗೆ ತರಲು ಇಸ್ರೋ ಉದ್ದೇಶಿಸಿದೆ.

ಮೇಘ ಟ್ರಾಫಿಕ್ಸ್ 1 ಉಪಗ್ರಹದಲ್ಲಿ ಇನ್ನೂ ಕೂಡ125 ಕೆಜಿ ಇಂಧನವಿದ್ದು, ಮರಳಿ ಭೂಮಿಗೆ ಬರುವಾಗ ಎಡವಟ್ಟಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದಾಗ್ಯೂ ಪೆಸಿಫಿಕ್‌ ಸಾಗರದಲ್ಲಿ ಜನವಸತಿ ಇಲ್ಲದ ಕಡೆ ಈ ಉಪಗ್ರಹವನ್ನು ಬೀಳಿಸಲು ಇಸ್ರೋ ಸಕಲ ಸಿದ್ಧತೆಗಳನ್ನೂ ಕೈಗೊಂಡಿದೆ.

ಉಪಗ್ರಹದಲ್ಲಿರುವ ಇಂಧನವು ಅದನ್ನು ಭೂ ವಾತಾವರಣಕ್ಕೆ ಮರುಪ್ರವೇಶ ಮಾಡಿಸಿ, ನಿಯಂತ್ರಿತ ರೀತಿಯಲ್ಲಿ ಉದ್ದೇಶಿತ ಸ್ಥಳದಲ್ಲಿ ಬೀಳಿಸಲು ಸಹಕಾರಿಯಾಗಲಿದೆ. ಇಂದು ಸಂಜೆ 4.30ರಿಂದ ರಾತ್ರಿ 7.30ರವರೆಗೆ ಈ ಕಾರ್ಯಾಚರಣೆಯನ್ನು ನಡೆಸಲು ಇಸ್ರೋ ಉದ್ದೇಶಿಸಿದ್ದು, ಈ ಕಾರ್ಯ ದೇಶದ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *