ತ್ರಿವಳಿ ಸಹೋದರಿಯರಿಗೆ ಒಬ್ಬನೇ ಗಂಡ – ಒಬ್ಬೊಬ್ಬರಿಗೆ‌ ಒಂದೊಂದು ದಿನ‌ ಮೀಸಲಿಟ್ಟ ಲಕ್ಕಿ ಪತಿರಾಯ..!!

ತ್ರಿವಳಿ ಸಹೋದರಿಯರಿಗೆ ಒಬ್ಬನೇ ಗಂಡ – ಒಬ್ಬೊಬ್ಬರಿಗೆ‌ ಒಂದೊಂದು ದಿನ‌ ಮೀಸಲಿಟ್ಟ ಲಕ್ಕಿ ಪತಿರಾಯ..!!

ನ್ಯೂಸ್ ಆ್ಯರೋ : ಕಾಲ ಬದಲಾದಂತೆ ಮನುಷ್ಯನ ಜೀವನದಲ್ಲೂ ಚಿತ್ರ ವಿಚಿತ್ರ ಬದಲಾವಣೆಗಳಾಗುತ್ತಿವೆ.‌ ಹಿಂದೆಂದೂ ಕೇಳದಂತಹ ವಿವಾಹಗಳು‌ ನೆರವೇರಿ ಕೇಳುಗರ ಹುಬ್ಬೇರಿಸುತ್ತಿದೆ. ಇತ್ತೀಚೆಗಷ್ಟೇ, 65 ವರ್ಷದ ಮುದುಕನೊಬ್ಬ 23 ವರ್ಷದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಇದೀಗ, ಕೀನ್ಯಾದಲ್ಲೊಬ್ಬ ಮಹಾ ಪತಿರಾಯ ತ್ರಿವಳಿ ಸಹೋದರಿಯರನ್ನು ಏಕಕಾಲಕ್ಕೆ ವಿವಾಹವಾಗಿ ಸುದ್ದಿಯಲ್ಲಿದ್ದಾನೆ.

ಈ ಒಂದು ವಿಚಿತ್ರ ಘಟನೆ ನಡೆದಿರುವುದು ಕೀನ್ಯಾದಲ್ಲಿ. ಕೇಟ್, ಈವ್ ಮತ್ತು ವೇರಿ ಎಂಬ ತ್ರಿವಳಿ ಸಹೋದರಿಯರನ್ನು ಸ್ಟೀವೋ ಎಂಬ ಯುವಕ ವಿವಾಹವಾಗಿದ್ದಾನೆ‌. ಈ ಮೂವರು ಯುವತಿಯರು ನೋಡಲು ಒಂದೇ ರೀತಿಯಿದ್ದು ಇವರದ್ದು ಪ್ರೇಮ ವಿವಾಹ ಎಂಬುದೆ ಆಶ್ಚರ್ಯಕರ ಸಂಗತಿ.

ಈ ಲವ್ ಸ್ಟೋರಿ ಹುಟ್ಟಿದ್ದೇ‌ ಒಂದು ಅದ್ಭುತ

ಮೊದಲು ಕೇಟ್ ಹಾಗೂ ಸ್ಟಿವೋ ಪರಸ್ಪರ ಪ್ರೀತಿಸುತ್ತಿದ್ದಂತೆ. ಒಮ್ಮೆ ಸ್ಟೀವೋ ಕಾರ್ಯಕ್ರಮವೊಂದಕ್ಕೆ ಕೇಟ್ ಮನೆಗೆ ತೆರಳಿದಾಗ ನೋಡಲು ಈಕೆಯ ರೀತಿಯೇ‌ ಇರುವ ಈವ್ ಹಾಗೂ ಮೇರಿಯನ್ನಯು ಕಂಡು ಸ್ಟೀವೋ ಮೂಕ ವಿಸ್ಮಿತನಾಗಿದ್ದಾನೆ. ಅನಂತರ‌ ಕೇಟ್ ಜೊತೆಗೆ ಉಳಿದ ಸಹೋದರಿಯರನ್ನೂ ವರಿಸುವುದಾಗಿ ತಿಳಿಸಿದಾಗ, ಕೇಟ್ ಕೂಡ ಇದಕ್ಕೆ ಸಮ್ಮತಿಸಿದ್ದಳಂತೆ. ಅಂತಿಮವಾಗಿ ಸ್ಟೀವ್ ಮೂವರು ತ್ರಿವಳಿ ಸಹೋದರಿಯರನ್ನು ಏಕ ಕಾಲಕ್ಕೆ ವಿವಾಹವಾಗಿದ್ದಾನೆ.

ಮದುವೆಯ ನಂತರ ಸ್ಟೀವೋ ಯಾರಿಗೂ ನೋವಾಗಬಾರದೆಂಬ‌ ಕಾರಣದಿಂದ ಪ್ರೀತಿಯಲ್ಲೂ ಸಮಾನತೆಯನ್ನು ತೋರಿದ್ದಾನೆ.‌ ‘ಮುಂದಿನ ದಿನಗಳಲ್ಲಿ ನಾನು ಮೂರು ಜನ ಪತ್ನಿಯರೊಂದಿಗೂ ಅನ್ಯೋನ್ಯವಾಗಿ ಇರುವುದಾಗಿ’ ಆತ ತಿಳಿಸಿದ್ದಾನೆ. ಜೊತೆಗೆ‌ ಒಬ್ಬೊಬ್ಬರಿಗೂ ಒಂದೊಂದು ದಿನವನ್ನು ಮೀಸಲಿಟ್ಟಿದ್ದಾನಂತೆ. ಸದ್ಯ, ಈ ಅಪರೂಪದ ಮದುವೆಯ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಶುಭಾಶಯ ತಿಳಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *