ರಾಖಿ ಸಾವಂತ್ ಪತಿ ಆದಿಲ್ ಖಾನ್ ಅರೆಸ್ಟ್ – ಬೀದಿಗೆ ಬಿತ್ತು ಹಾಟ್ ನಟಿಯ ವೈವಾಹಿಕ ಜೀವನ

ರಾಖಿ ಸಾವಂತ್ ಪತಿ ಆದಿಲ್ ಖಾನ್ ಅರೆಸ್ಟ್ – ಬೀದಿಗೆ ಬಿತ್ತು ಹಾಟ್ ನಟಿಯ ವೈವಾಹಿಕ ಜೀವನ

ನ್ಯೂಸ್ ಆ್ಯರೋ : ತಿಂಗಳ ಹಿಂದೆಯಷ್ಟೇ ರಾಖಿ ಸಾವಂತ್ ಹಾಗೂ ಆದಿಲ್ ಖಾನ್ ಮದುವೆಯಾಗಿದ್ದರು. ಆದರೆ ಇವರು ಮದುವೆಯಾದಾಗಿನಿಂದಲೂ ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ಕೆಲ ಸಮಯವಷ್ಟೇ ಚೆನ್ನಾಗಿದ್ದ ಈ ಜೋಡಿಗಳ ನಡುವೆ ಮತ್ತೆ ಬಿರುಕು‌ ಮೂಡಿದೆ. ಅಷ್ಟೇ ಅಲ್ಲದೆ ಪತಿ ಆದಿಲ್ ಖಾನ್‌ ವಿರುದ್ದ ರಾಖಿ ಸಾವಂತ್ ದೂರು ದಾಖಲಿಸಿದ್ದು, ಆತನನ್ನು ಮುಂಬೈನ ಓಶಿರ ಪೊಲೀಸರು ಬಂಧಿಸಿದ್ದಾರೆ.

ಇಷ್ಟೆಲ್ಲ ಸಾಂಸಾರಿಕ ಜಟಾಪಟಿಯ ನಂತರವೂ ಇತ್ತೀಚೆಗಷ್ಟೇ ರಾಖಿ ಸಾವಂತ್‌ ಪತಿ ಆದಿಲ್‌ ಖಾನ್ ಅವರಿಗೆ ಕೈ ತುತ್ತು ನೀಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಖಿ ಸಾವಂತ್, ‘ಆದಿಲ್ ಪರ ಸ್ತ್ರೀಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಇದು ನಾಟಕವಲ್ಲ, ಆತ‌ ನನ್ನ ಜೀವನ ಹಾಳು ಮಾಡಿದ್ದಾನೆ. ನನಗೆ ಥಳಿಸಿದ್ದಾನೆ. ನನ್ನ ಹಣವನ್ನೆಲ್ಲ ಆತ ಲಪಟಾಯಿಸಿದ್ದಾನೆ’ ಎಂದಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ರಾಖಿ ಸಾವಂತ್‌ ಹಾಗೂ ಆದಿಲ್ ಖಾನ್‌ ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಆಕೆ ಕೈ ತುತ್ತು ತಿನ್ನಿಸುವ ತುಣುಕುಗಳಿದೆ. ಆ ನಂತರವೇ ಆದಿಲ್ ಖಾನ್ ಬಂಧನವಾಗಿದೆ. ಈ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, ‘ಮನೆಯಲ್ಲಿ ನಾನು ಅವನಿಗೆ ಊಟ ಮಾಡಿಸುತ್ತಿದ್ದೆ. ಶತ್ರುಗಳು ಮನೆಗೆ ಬಂದಾಗಲೂ ನೀರು ಕೊಡುತ್ತೇವೆ. ಆತ ನನ್ನ ಗಂಡ. ಆತನನ್ನು ಸಾಯುವ ತನಕ ಪ್ರೀತಿಸುತ್ತೇನೆ, ಆದರೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದಿದ್ದಾರೆ.

ಈ ವಿಡಿಯೋಗಳನ್ನು ನೋಡಿ ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಿದ್ದಾರೆ. ‘ಇವರ ಜೀವನದ ರೀತಿಯೇ ಅರ್ಥವಾಗುವುದಿಲ್ಲ’ ಎಂದು ಕಮೆಂಟಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *