ಪದಕ ಸ್ವೀಕಾರದ ವೇಳೆ ಹಿಜಾಬ್‌ ಧರಿಸುವಂತೆ‌ ಒತ್ತಾಯ – ಬ್ಯಾಡ್ಮಿಂಟನ್ ಗೆದ್ದ ಭಾರತೀಯಳಿಗೆ ವಿದೇಶದಲ್ಲಿ ಅವಮಾನ

ಪದಕ ಸ್ವೀಕಾರದ ವೇಳೆ ಹಿಜಾಬ್‌ ಧರಿಸುವಂತೆ‌ ಒತ್ತಾಯ – ಬ್ಯಾಡ್ಮಿಂಟನ್ ಗೆದ್ದ ಭಾರತೀಯಳಿಗೆ ವಿದೇಶದಲ್ಲಿ ಅವಮಾನ

ನ್ಯೂಸ್ ಆ್ಯರೋ : ಕ್ರೀಡಾ ಕ್ಷೇತ್ರದಲ್ಲಿ ಈ ಹಿಂದೆ ಮಿಂಚಿದ ಮಿಂಚುತ್ತಿರುವ ಭಾರತೀಯ ಪ್ರತಿಭೆಗಳಿಗೆ ವಿದೇಶಗಳಲ್ಲಿ ಅವಮಾನಗಳಾದ ಹಲವು ನಿದರ್ಶನಗಳಿವೆ. ಇದೀಗ ಮತ್ತೆ ಇರಾನ್ ನಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಇತ್ತೀಚೆಗೆ, ಇರಾನ್ ಫಜ್ರ್ ಇಂಟರ್ ನ್ಯಾಷನಲ್ ಚಾಲೆಂಜ್‌ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆದ್ದ 19 ವರ್ಷದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾನ್ಯಾ ಹೇಮಂತ್ ಅವರಿಗೆ ಪದಕ ಸ್ವೀಕಾರ ವೇಳೆ ಹಿಜಾಬ್ ಧರಿಸುವಂತೆ ಅಲ್ಲಿನ‌ ಸಂಘಟಕರು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ ಪಂದ್ಯಾವಳಿಯ ಮೂಲ ವರದಿಯಲ್ಲಿ ಡ್ರೆಸ್ ಕೋಡ್ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ ಎಂದು ತಿಳಿದು ಬಂದಿದೆ. ಟೆಹ್ರಾನ್‌ನಲ್ಲಿ ಮಹಿಳೆಯರು ಹೊರನಡೆಯುವಾಗ ಹಿಜಾಬ್ ಅತ್ಯಗತ್ಯ ಎಂದು ತಿಳಿಸಿದ್ದರು, ಪಂದ್ಯಾವಳಿಯ ಸಮಯದಲ್ಲಿ ಅವುಗಳ ಬಳಕೆಯ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖವಿರಲಿಲ್ಲ. ಆದರೂ ಅಲ್ಲಿನ ಸಂಘಟಕರು ಭಾರತೀಯ ಯುವತಿಗೆ ಪ್ರಶಸ್ತಿ ಪಡೆಯುವ ವೇಳೆ ಹಿಜಾಬ್ ಪಡೆಯುವಂತೆ ಒತ್ತಾಯಿಸಿರುವುದು ಬೇಸರದ ಸಂಗತಿಯಾಗಿದೆ‌.

ಇದೇ, ಫೆಬ್ರವರಿ 5ರ ಭಾನುವಾರ ಟೆಹ್ರಾನ್‌ನಲ್ಲಿ ನಡೆದ 2023 ರ ಇರಾನ್ ಫಜ್ರ್ ಇಂಟರ್ನ್ಯಾಷನಲ್ ಚಾಲೆಂಜ್‌ನಲ್ಲಿ ಭಾರತೀಯ ಶೆಟ್ಲರ್ ತಾನ್ಯಾ, ಹಾಲಿ ಚಾಂಪಿಯನ್ ತಸ್ನಿಮ್ ಮಿರ್ ಅವರನ್ನು ಸೋಲಿಸಿ ಸಾಧನೆ ಮಾಡಿದರು.

ಟೂರ್ನಿಯ ಅಗ್ರ ಶ್ರೇಯಾಂಕಿತೆಯಾಗಿದ್ದ 17ರ ಹರೆಯದ ತಸ್ನಿಮ್ ಕೂಡ ತಾನ್ಯಾಗೆ ಸರಿಸಾಟಿಯಾಗಲಿಲ್ಲ. ತಾನ್ಯಾ ಆರಂಭದಿಂದಲೂ ಪಂದ್ಯವನ್ನು ನಿಯಂತ್ರಿಸಿದರು ಮತ್ತು ಮೊದಲ ಗೇಮ್ ಅನ್ನು 21-7 ರ ದೊಡ್ಡ ಅಂತರದಿಂದ ಗೆದ್ದರು. ನಂತರ ಅವರು ತಮ್ಮ ಪ್ರಾಬಲ್ಯವನ್ನು ಮುಂದುವರೆಸಿ ಎರಡನೇ ಗೇಮ್ ಅನ್ನು ಅದ್ಭುತ ರೀತಿಯಲ್ಲಿ ಗೆದ್ದ ನಂತರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *