ಪ್ರಥಮ್ ಅಭಿನಯದ ‘ನಟ ಭಯಂಕರ’ ಚಿತ್ರ ಹೇಗಿದೆ? – ಗಳಿಕೆ ವಿಚಾರದಲ್ಲಿ ಆದ ಟ್ರೋಲ್ ಬಗ್ಗೆ ಪ್ರಥಮ್ ಹೇಳಿದ್ದೇನು?

ಪ್ರಥಮ್ ಅಭಿನಯದ ‘ನಟ ಭಯಂಕರ’ ಚಿತ್ರ ಹೇಗಿದೆ? – ಗಳಿಕೆ ವಿಚಾರದಲ್ಲಿ ಆದ ಟ್ರೋಲ್ ಬಗ್ಗೆ ಪ್ರಥಮ್ ಹೇಳಿದ್ದೇನು?

ನ್ಯೂಸ್ ಆ್ಯರೋ : ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಟಿಸಿ, ನಿರ್ದೇಶನ ಮಾಡಿರುವ ‘ನಟ ಭಯಂಕರ’ ಸಿನಿಮಾ ಬಿಡುಗಡೆಗೊಂಡಿದ್ದು, ಈವರೆಗೂ ಕೇವಲ ನಟನಾಗಿ ಪ್ರೇಕ್ಷಕರ ಮುಂದೆ ನಿಂತಿದ್ದ ಪ್ರಥಮ್, ಈ ಬಾರಿ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿನಿಮಾ ಪೂರ್ತಿ ನಗಿಸುತ್ತಲೇ ಒಂದು ಹಾರರ್ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳಿದ್ದಾರೆ.

ಅಲ್ಲದೇ ಇದೊಂದು ಪಕ್ಕಾ ಹಾರರ್ ಹಾಗೂ ಥ್ರಿಲ್ಲರ್ ಮಿಶ್ರಿತ ಸಿನಿಮಾವಾಗಿದ್ದರೂ, ಭರ್ಜರಿ ಮನರಂಜನೆಯೂ ಇದೆಯಂತೆ. ನಗಿಸುವುದಕ್ಕಾಗಿ ಪ್ರಥಮ್ ಜೊತೆ ಓಂ ಪ್ರಕಾಶ್ ರಾವ್, ಕುರಿ ಪ್ರತಾಪ್, ಮಜಾ ಟಾಕೀಸ್ ಪವನ್, ಬಿರಾದಾರ ಹಾಗೂ ರಾಕ್ ಲೈನ್ ಸುಧಾಕರ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಸಾಯಿ ಕುಮಾರ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗಾಗಿ ಇದೊಂದು ಪಕ್ಕಾ ಮನರಂಜನೆಯ ಸಿನಿಮಾ ಎನ್ನುವುದು ಪ್ರಥಮ್ ಮಾತು.

ಆದರೆ ಈ ಸಿನೆಮಾಕ್ಕೆ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ‘ಕ್ರಾಂತಿ’ಯ ಅಬ್ಬರದ ನಡುವೆ ‘ನಟ ಭಯಂಕರ’ ಸೈಡ್ ಲೈನ್ ಆಗಿದೆ. ಚಿತ್ರವನ್ನು ನೋಡಿದ ಸಿನಿ ಪ್ರಿಯರಲ್ಲಿ ಕೆಲವರು ಚಿತ್ರ ಕಾಮಿಡಿ ಎಂಟರ್‌ಟೈನರ್ ಎಂದು ಹೇಳಿದ್ದು, ಇನ್ನೂ ಕೆಲವರು ಚಿತ್ರ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ನಟ ಭಯಂಕರ ಚಿತ್ರ ಮೊದಲ ಮೂರು ದಿನಗಳಲ್ಲಿ ಎಷ್ಟು ಗಳಿಸಿದೆ ಎಂಬ ಮಾಹಿತಿ ಇಲ್ಲಿದೆ.

ನಟ ಭಯಂಕರ ಸಿನೆಮಾದ ಗಳಿಕೆ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಮಾಹಿತಿ ಹಂಚಿಕೊಂಡಿದ್ದು, ಚಿತ್ರ ಮೊದಲ ಮೂರು ದಿನಗಳಲ್ಲಿ ಎಷ್ಟು ಗಳಿಸಿದೆ ಎಂಬ ಲೆಕ್ಕಾಚಾರವನ್ನು ಹೊರ ಹಾಕಿದೆ. ಸ್ಯಾಕ್‌ನಿಕ್ ವೆಬ್ ಸೈಟ್ ಹಂಚಿಕೊಂಡಿರುವ ಮಾಹಿತಿ ಪ್ರಕಾರ ನಟ ಭಯಂಕರ ಚಿತ್ರ ಮೊದಲ ದಿನ ಅಂದರೆ ಶುಕ್ರವಾರ 15 ಲಕ್ಷ ರೂ. ಗಳಿಸಿದ್ದು, 2ನೇ ದಿನವಾದ ಶನಿವಾರ 30 ಲಕ್ಷ ರೂ. ಸಂಪಾದಿಸಿದೆ. ಹಾಗೇ ಭಾನುವಾರ 45 ಲಕ್ಷ ರೂ. ಗಳಿಸಿದ್ದು, ವೀಕೆಂಡ್ ಇದ್ದರೂ ಸಿನಿ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಹಿನ್ನಡೆ ಅನುಭವಿಸಿರುವ ಈ ಚಿತ್ರ ಮೂರು ದಿನಗಳಲ್ಲಿ 90 ಲಕ್ಷ ರೂ. ಗಳಿಸಿ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಇನ್ನೂ ನಟ ಭಯಂಕರ ಸಿನಿಮಾ ತೆರೆಗೆ ಬಂದ ಮೊದಲ ದಿನವೇ ಬರೋಬ್ಬರಿ 35.5 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಅಲ್ಲದೇ ಆ ಪೋಸ್ಟರ್ ಅನ್ನು ಕ್ರಾಂತಿ ಚಿತ್ರ ಮೊದಲ ದಿನ 35.3 ಕೋಟಿ ಕಲೆಕ್ಷನ್ ಮಾಡಿತ್ತು ಎಂಬ ಪೋಸ್ಟರ್ ಜತೆ ಹೋಲಿಸಿ ಪ್ರಥಮ್ ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಟ್ರೋಲ್ ಮಾಡಿದ್ದರು. ಸದ್ಯ ಈ ಹೋಲಿಕೆಯ ಟ್ರೋಲ್ ವೈರಲ್ ಆಗಿದ್ದು, ಇದು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ನಟ ಪ್ರಥಮ್ ಇದರ ಕುರಿತು ಪ್ರತಿಕ್ರಿಯೆ ನೀಡಿದ್ದು, ತನ್ನ ಹಾಗೂ ಕ್ರಾಂತಿ ಚಿತ್ರದ ಕಲೆಕ್ಷನ್ ಬಗ್ಗೆ ಮಾಡಲಾಗಿರುವ ಟ್ರೋಲ್ ಫೋಟೊವನ್ನು ಹಂಚಿಕೊಂಡಿರುವ ಪ್ರಥಮ್ “ಇದು ಸುಳ್ಳು ಸುದ್ದಿ. ನಾನು ಪೂಜೆ ಮಾಡೋ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ಇದಕ್ಕೂ ನನಗೂ ಸಂಬಂಧವಿಲ್ಲ. ಹಾಗೂ ಮುಖ್ಯವಾಗಿ ನಮ್ಮ ಚಿತ್ರ ಅಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್ ಸರ್ ದೊಡ್ಡವರು. ಸುಮ್ಮನೆ ಸುಳ್ಳು ಹೋಲಿಕೆ ಬೇಡ. ಚೆನ್ನಾಗಾಗ್ತಾ ಇದೆ ಸಂತೋಷ. ಆದರೆ ಈಶ್ವರನ ಸಾಕ್ಷಿಯಾಗಿ ಇದು ಸುಳ್ಳು ಹಾಗೂ ನನಗೂ ಇದಕ್ಕೂ ಸಂಬಂಧವಿಲ್ಲ. ದಯವಿಟ್ಟು ನಿಲ್ಲಿಸಿ” ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *