ಮದ್ಯಪ್ರಿಯರಿಗೆ ಸರ್ಕಾರದಿಂದ ಶಾಕ್; ಇಂದಿನಿಂದಲೇ ದರ ಏರಿಕೆ

Liquor Price Hike
Spread the love

ನ್ಯೂಸ್ ಆ್ಯರೋ: ಮದ್ಯಪ್ರಿಯರಿಗೆ ಬಿಗ್ ಶಾಕ್. ಬಜೆಟ್‌ಗೆ ಮೊದಲೇ ಮದ್ಯದ ದರ ಏರಿಕೆಯಾಗಿದೆ. 10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆಯಾಗಿದ್ದು ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.

ಸಾಧಾರಣವಾಗಿ ಬಜೆಟ್‌ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್‌ ಮಂಡನೆಯಾಗುವ ಮೊದಲೇ ದರ ಏರಿಕೆಯಾಗಿದೆ.

ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ. ದುಬಾರಿ ಬೆಲೆಯ ಬಿಯರ್‌ ದರ ಏರಿಕೆಯಾಗಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ದರವನ್ನು ಅಬಕಾರಿ ಇಲಾಖೆ ಏರಿಸಿದೆ.

ಇಂದಿನಿಂದಲೇ ಪರಿಷ್ಕೃತ ದರ ಜಾರಿ ಆಗಲಿದ್ದು, ಯಾವ ಬ್ರ್ಯಾಂಡ್ನ ದರ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ. ಈ ಹಿಂದೆ 100 ರೂಪಾಯಿ ಇದ್ದ ಲೆಜೆಂಡ್ ಬಿಯರ್ ದರ 145 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ 130 ರೂಪಾಯಿ ಇದ್ದ ಪವರ್ ಕೂಲ್ ಬಿಯರ್ ದರ 155 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ 145 ರೂಪಾಯಿ ಇದ್ದ ಬ್ಲಾಕ್ ಫೋರ್ಟ್ ಬಿಯರ್ ದರ 160 ರೂಪಾಯಿಗೆ ಏರಿಕೆಯಾಗಿದೆ.

ಈ ಹಿಂದೆ 180 ರೂಪಾಯಿ ಇದ್ದ ಹಂಟರ್ ಬಿಯರ್ ದರ 190 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ 240 ರೂಪಾಯಿ ಇದ್ದ ವುಡ್ ಪೀಆಕೆರ್ ಕ್ರೆಸ್ಟ್ ದರ 250 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ 230 ರೂಪಾಯಿ ಇದ್ದ ವುಡ್ ಪೆಕರ್ ಗ್ಲೈಡ್ ಬಿಯರ್ ದರ 240 ರೂಪಾಯಿಗೆ ಏರಿಕೆಯಾಗಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಳ ಮಾಡಿತ್ತು. ಆ ಬಳಿಕ ಬಸ್ ಪಾಸ್ ಹಾಗೂ ಬಸ್ ಬಾಡಿಗೆ ದರ ಕೂಡ ಹೆಚ್ಚಳವಾಗಿತ್ತು. ಇದರ ನಡುವೆಯೇ ಹಾಲಿನ ದರ ಹೆಚ್ಚಳ ಬಗ್ಗೆಯೂ ಒಕ್ಕೂಟಗಳಿಂದ ಒತ್ತಾಯ ಕೇಳಿ ಬರುತ್ತಿದೆ. ಈ ಮಧ್ಯೆ ಸರ್ಕಾರ ಬಿಯರ್ ಬೆಲೆ ಹೆಚ್ಚಳ ಮಾಡರುವುದು ಮದ್ಯ ಪ್ರಿಯಕರ ಆಕ್ರೋಶಕ್ಕೆ ಕಾರಣವಾಗಿದೆ.

Leave a Comment

Leave a Reply

Your email address will not be published. Required fields are marked *