ನಡುರಸ್ತೆಯಲ್ಲೇ ಆಟೋ ಚಾಲಕನಿಗೆ ಹಿಗ್ಗಾಮುಗ್ಗ ಥಳಿತ; ಯುವತಿ ಕಾಲಿಗೆ ಬಿದ್ದ ಡ್ರೈವರ್, ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡುರಸ್ತೆಯಲ್ಲೇ ಆಟೋ ಚಾಲಕನಿಗೆ ಯುವತಿ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಆಟೋ ಚಾಲಕ ಯುವತಿ ಕಾಲಿಗೆ ಬಿದ್ದಿರುವುದರು ಸೆರೆಯಾಗಿದೆ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಪೊಲೀಸರು ಯುವತಿಯ ವಿರುದ್ಧ ಎಫ್ಐಆರ್ ದಾಖಲಿಸಬೇಕಾಯಿತು. ಮಿರ್ಜಾಪುರ ಪೊಲೀಸ್ ಹೆಚ್ಚುವರಿ ಎಸ್ಪಿ ಒ.ಪಿ. ಸಿಂಗ್ ಕೂಡ ಈ ವಿಷಯದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ಯುವತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಇದೆಲ್ಲದರ ನಡುವೆ, ಯುವತಿ ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ರೀಲ್ ಅನ್ನು ಪೋಸ್ಟ್ ಮಾಡುವ ಮೂಲಕ ತನ್ನ ಪರವಾಗಿ ಮಾತನಾಡಿದ್ದಾಳೆ. ಇದರಲ್ಲಿ ಕಥೆ ಬೇರೇನೋ ಆಗಿ ಬದಲಾಗುತ್ತಿದೆ.
ಈ ವಿಡಿಯೋದಲ್ಲಿ, ಓರ್ವ ಯುವತಿಯೊಬ್ಬಳು ಆಟೋ ರಿಕ್ಷಾ ಚಾಲಕನನ್ನು ಹೊಡೆಯುವುದನ್ನು ಕಾಣಬಹುದು. ವೀಡಿಯೊವನ್ನು ಪೋಸ್ಟ್ ಮಾಡಿದ @ShubhamShuklaMP ಬಳಕೆದಾರರ ಪ್ರಕಾರ, ಆಟೋ ಬಾಡಿಗೆ ವಿಚಾರವಾಗಿ ಯುವತಿ ಆಟೋ ಚಾಲಕ ವಿಮಲೇಶ್ ಶುಕ್ಲಾ ಅವರಿಗೆ ಥಳಿಸಿದ್ದಾಳೆ. ವಿಡಿಯೋ ಕ್ಲಿಪ್ನಲ್ಲಿ, ಯುವತಿ ಆಟೋ ಚಾಲಕನ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಮತ್ತು ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದು.
ವೀಡಿಯೊದ ಕೊನೆಯಲ್ಲಿ, ಆಟೋ ಚಾಲಕನು ಹುಡುಗಿಯ ಪಾದಗಳನ್ನು ಮುಟ್ಟುವುದನ್ನು ಸಹ ಕಾಣಬಹುದು. ಈ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಆಟೋ ಚಾಲಕ ಈಗ ಬಗ್ಗೆ ದೂರು ನೀಡಿದ್ದು ಹೀಗಾಗಿ ಮಿರ್ಜಾಪುರ ಪೊಲೀಸರು ಯುವತಿಯ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಏತನ್ಮಧ್ಯೆ, ಯುವತಿ ಪ್ರಿಯಾಂಶಿ ಕೂಡ ಇನ್ಸ್ಟಾಗ್ರಾಮ್ನಲ್ಲಿ ಖಾತೆಯನ್ನು ಹೊಂದಿದ್ದಾಳೆ. ಆಕೆ ಒಂದು ವಿಡಿಯೋ ಮಾಡಿ ಈ ಸಂಪೂರ್ಣ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಆಟೋ ರಿಕ್ಷಾ ಚಾಲಕನಿಗೆ ಥಳಿತ ಮತ್ತು ಮಿರ್ಜಾಪುರ ಪೊಲೀಸರ ಕ್ರಮದ ನಡುವೆ, @priyanshi_mzp ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಪೋಸ್ಟ್ ಮಾಡಿ ತನ್ನ ಕಡೆಯಿಂದ ಕಥೆಯನ್ನು ಹೇಳಿಕೊಂಡಿದ್ದಾರೆ. ತಾನು ಎಲ್ಲೋ ಹೋಗಲು ಆಟೋ ಸ್ಟ್ಯಾಂಡ್ನಲ್ಲಿ ನಿಂತಿರುವುದಾಗಿ ಹೇಳುತ್ತಾಳೆ. ಈ ಸಮಯದಲ್ಲಿ, ಒಬ್ಬ ಆಟೋ ಚಾಲಕ ಅವಳ ಮೇಲೆ ಕೆಲವು ಅಶ್ಲೀಲ ಕಾಮೆಂಟ್ಗಳನ್ನು ಮಾಡುತ್ತಾನೆ. ಇದರಿಂದ ಅವಳು ಕೋಪಗೊಂಡು ಎಲ್ಲರ ಮುಂದೆ ಅವನನ್ನು ಹೊಡೆದಿರುವುದಾಗಿ ಹೇಳಿದ್ದಾಳೆ.
Leave a Comment