ಅಬ್ಬಬ್ಬಾ ಇವರೆಂಥಾ ಅಂಧ ಭಕ್ತರು; ಪುಣ್ಯ ಜಲ ಎಂದು ಎಸಿ ನೀರನ್ನು ಕುಡಿದ ಭಕ್ತರು

AC water
Spread the love

ನ್ಯೂಸ್ ಆ್ಯರೋ: ಎಸಿ ಯಿಂದ ಬೀಳುತ್ತಿದ್ದ ನೀರನ್ನು ತೀರ್ಥವೆಂದು ಭಕ್ತರು ಕುಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಮಥುರಾ ಬೃಂದಾವನದ ಬಂಕೆ ಬಿಹಾರಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಮಂದಿರದ ಆನೆಯ ಪ್ರತಿಮೆಯಿಂದ ಬರುತ್ತಿರುವ ನೀರನ್ನು ಭಕ್ತರು ಚರಣಾಮೃತ ಎಂದು ಭಾವಿಸಿ ತೀರ್ಥವಾಗಿ ಕುಡಿಯುತ್ತಾರೆ. ಕೆಲವರು ಗ್ಲಾಸಿನಲ್ಲಿ ಮನೆಗೆ ಕೊಂಡೊಯ್ಯುತ್ತಾರೆ. ದೇಹದ ಮೇಲೆಯೂ ಸಿಂಪಡಿಸಿಕೊಳ್ಳುತ್ತಾರೆ. ಆದರೆ ಈ ಚರಣಾಮೃತದ ಹಿಂದೆ ಏನಿದೆ ಎಂಬುದನ್ನು ಓರ್ವ ವ್ಲಾಗರ್ ಪತ್ತೆ ಹಚ್ಚುವ ಮೂಲಕ ಇಡೀ ಘಟನೆ ಬೆಳಕಿಗೆ ಬಂದಿದೆ.

ಈ ದೃಶ್ಯವನ್ನು ಸೆರೆಹಿಡಿದಿರುವ ವ್ಲಾಗರ್ ಅವರು ಆ ನೀರಿನ ಬಗ್ಗೆ ನಿಜ ಮಾಹಿತಿಯನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇದು ಎಸಿಯ ನೀರು ಎಂದು ಮಂದಿರದ ಅರ್ಚಕ ತನ್ನಲ್ಲಿ ಹೇಳಿರುವುದಾಗಿ ವ್ಲಾಗರ್ ವಿಡಿಯೋದಲ್ಲಿ ಹೇಳಿದ್ದಾರೆ. ಮಾತ್ರ ಅಲ್ಲ ಆ ನೀರನ್ನು ಕುಡಿಯುತ್ತಿದ್ದ ಮತ್ತು ದೇಹದ ಮೇಲೆ ಸಿಂಪಡಿಸಿಕೊಳ್ಳುತ್ತಿದ್ದ ಭಕ್ತರಲ್ಲೂ ಅವರು ಈ ಸಂಗತಿಯನ್ನು ಹೇಳಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಹೆಚ್ಚಿನವರು ಅವರನ್ನು ನಿರ್ಲಕ್ಷಿಸಿ ಮುಂದೆ ಹೋಗಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಮಥುರಾದ ಈ ದೇವಸ್ಥಾನಕ್ಕೆ ಪ್ರತಿದಿನ 15000 ಕ್ಕಿಂತಲೂ ಅಧಿಕ ಭಕ್ತರು ಆಗಮಿಸುತ್ತಿದ್ದಾರೆ. ಇಷ್ಟೊಂದು ಜನನಿಬಿಡ ಪ್ರದೇಶದಲ್ಲಿ ಜನರು ಹೀಗೆ ನೀರು ಕುಡಿಯುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಈ ವಿಷಯದಲ್ಲಿ ಈವರೆಗೆ ಮಂದಿರದಿಂದ ಯಾವುದೇ ಸ್ಪಷ್ಟೀಕರಣ ಹೊರ ಬಂದಿಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!