ಪ್ರೇಮ ವಿವಾಹಕ್ಕೆ ರೆಡಿಯಾದ ಗಿಚ್ಚಿ ಗಿಲಿಗಿಲಿ ಪ್ರಿಯಾಂಕ ಕಾಮತ್ – ನಿಶ್ಚಿತಾರ್ಥ ಆಗಿದ್ದು ಯಾರೊಂದಿಗೆ ಗೊತ್ತಾ?
- ಮನರಂಜನೆ
- January 23, 2023
- No Comment
- 1583
ನ್ಯೂಸ್ ಆ್ಯರೋ : ಇದೀಗ ಕನ್ನಡ ಸಿನಿಮಾ ರಂಗ ಹಾಗೂ ಟಿವಿ ರಿಯಾಲಿಟಿ ಶೋ ಗಳಲ್ಲಿನ ಸೆಲೆಬ್ರಿಟಿಗಳ ವಿವಾಹ ಪರ್ವ ಆರಂಭವಾದಂತಿದೆ. ಚಂದನವನದ ಚಂದದ ಜೋಡಿಗಳಾದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಸಿಕೊಂಡು ಮದುವೆ ತಯಾರಿಯಲ್ಲಿದ್ದಾರೆ. ಇದೀಗ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಪ್ರಿಯಾಂಕ ಕಾಮತ್ ತಾನು ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಸಿಕೊಂಡು ಸುದ್ದಿಯಲ್ಲಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಮನೆಮಾತಾಗಿದ್ದ ಮಜಾಭಾರತ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಗಿಚ್ಚಿ ಗಲಿಗಿಲಿ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ನಟಿ ಪ್ರಿಯಾಂಕ ಇದೀಗ ತಮ್ಮ ಪ್ರೀತಿಯ ಹುಡುಗ ಅಮಿತ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶೀಘ್ರದಲ್ಲಿಯೇ ಅಮಿತ್ ನಾಯಕ್ ಜೊತೆಗೆ ಹಸೆಮಣೆ ಏರಲಿರುವ ಪ್ರಿಯಾಂಕ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಫೋಟೋ ಪೋಸ್ಟ್ ಮಾಡಿದ್ದಾರೆ.
ಸದ್ಯ, ಈ ಫೋಟೋಗಳು ಬಾರಿ ವೈರಲ್ ಆಗುತ್ತಿದೆ. ಇದರೊಂದಿಗೆ ಪ್ರಿಯಾಂಕ ತಮ್ಮ ಅನಾರೋಗ್ಯದ ವೇಳೆ ಅಮಿತ್ ನಾಯಕ್ ಕಾಳಜಿ ವಹಿಸಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಮತ್ತು ನಿಶ್ಚಿತಾರ್ಥದ ಫೋಟೋಗಳಿಗೆ ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.