ದೆಹಲಿ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆ; ಫೆ.8ಕ್ಕೆ ಹೊರಬರಲಿದೆ 70 ಕ್ಷೇತ್ರಗಳ ಮತದಾನದ ಫಲಿತಾಂಶ

Delhi Election 2025 Date
Spread the love

ನ್ಯೂಸ್ ಆ್ಯರೋ: ಬಹುನಿರೀಕ್ಷಿತ ದೆಹಲಿ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ದಿನಾಂಕವನ್ನು ಘೋಷಿಸಿದ್ದು. ಫೆಬ್ರವರಿ 5 ರಂದು 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆಯಲಿದ್ದು. ಫೆಬ್ರವರಿ 8 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಕಳೆದ ಬಾರಿ ನಡೆದ ಅಂದ್ರೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸುಮಾರು 62 ಕ್ಷೇತ್ರಗಳನ್ನು ಗೆದ್ದು ಭಾರೀ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು. ಬಿಜೆಪಿ ಉಳಿದ 8 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದ್ದರೆ. ಕಾಂಗ್ರೆಸ್ ಖಾತೆ ತೆಗೆಯುವಲ್ಲಿಯೂ ಕೂಡ ವಿಫಲವಾಗಿತ್ತು.

ಈ ಬಾರಿ ಲಿಕ್ಕರ್ ಹಗರಣ ಸೇರಿ ಹಲವು ಆರೋಪಗಳು ಆಮ್​ ಆದ್ಮಿ ಪಕ್ಷದ ಮೇಲೆ ಬಂದಿವೆ. ಸಿಎಂ, ಡಿಸಿಎಂ ಮದ್ಯನೀತಿ ಹಗರಣದಲ್ಲಿ ಜೈಲು ಕೂಡ ಸೇರಿ ಆಚೆ ಬಂದ ಘಟನೆಗಳು ನಡೆದಿವೆ. ಹೀಗಾಗಿ ಈ ಬಾರಿ ಅದರ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಸಜ್ಜಾಗಿವೆ. ಆದರೆ ಆಮ್ ಆದ್ಮಿ ಪಕ್ಷ ಸತತ ಒಂದು ದಶಕದಿಂದ ದೆಹಲಿಯಲ್ಲಿ ದರ್ಬಾರ್ ನಡೆಸುತ್ತಿದೆ.

ಕಳೆದ ಬಾರಿಯೂ ಕೂಡ ಆಡಳಿತ ವಿರೋಧಿ ಅಲೆ ಇದೆ ಎಂಬ ಸುದ್ದಿಯೂ ಜೋರಾಗಿ ಹರಡಿತ್ತು. ಇದರಾಚೆಯೂ ಕೂಡ ಆಮ್​ ಆದ್ಮಿ ಪಕ್ಷ ದೊಡ್ಡ ಮಟ್ಟದ ಗೆಲುವಿನೊಂದಿಗೆ ಸರ್ಕಾರ ರಚನೆ ಮಾಡಿತ್ತು. ಈ ಬಾರಿಯ ಹಗರಣಗಳ ಆರೋಪಗಳು ಆಮ್​ ಆದ್ಮಿಗೆ ಮಗ್ಗಲು ಮುಳ್ಳಾಗಿ ಕಾಡಲಿದೆಯಾ ಅಥವಾ ಕಳೆದ ಬಾರಿಯಂತೆಯೇ ಈ ಬಾರಿಯೂ ಕೂಡ ಭರ್ಜರಿ ಬಹುಮತ ಪಡೆಯಲಿದೆಯಾ ಅನ್ನೋದು ಫೆಬ್ರವರಿ 8 ರಂದು ತಿಳಿದು ಬರಲಿದೆ.

Leave a Comment

Leave a Reply

Your email address will not be published. Required fields are marked *

error: Content is protected !!