ನ್ಯೂ ಇಯರ್‌ ಗೆ ಭಾರತೀಯರು ಹೆಚ್ಚು ಆರ್ಡರ್‌ ಮಾಡಿದ್ದೇನು?; ಕಾಂಡೋಮ್‌ ಆರ್ಡರ್‌ ಕುರಿತು ಬ್ಲಿಂಕಿಟ್‌ ಸಿಇಒ ಟ್ವೀಟ್

condoms
Spread the love

ನ್ಯೂಸ್ ಆ್ಯರೋ: 2025 ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಇನ್ನೂ ಆನ್‌ಲೈನ್‌ನಲ್ಲೂ ಪಾರ್ಟಿಗೆ ಬೇಕಾದಂತಹ ವಸ್ತುಗಳನ್ನು ಬಲು ಜೋರಾಗಿಯೇ ಶಾಪಿಂಗ್‌ ಮಾಡಿದ್ದು, ಐಸ್‌ ಕ್ಯೂಬ್‌ನಿಂದ ಹಿಡಿದು ಕಾಂಡೋಮ್‌, ಚಿಪ್ಸ್‌ ವರೆಗೆ ಬ್ಲಿಂಕಿಟ್‌ನಲ್ಲಿ ಹೊಸ ವರ್ಷದ ಮುನ್ನಾದಿನದಂದು ಜನ ಹೆಚ್ಚಾಗಿ ಏನೆಲ್ಲಾ ಆರ್ಡರ್‌ ಮಾಡಿದ್ರು ಎಂಬುದರ ಬಗ್ಗೆ ಬ್ಲಿಂಕಿಟ್‌ ಸಿಇಒ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ಬ್ಲಿಂಕಿಟ್‌ನಲ್ಲಿ ಜನ ಯಾವುದನ್ನು ಹೆಚ್ಚು ಆರ್ಡರ್‌ ಮಾಡಿದು ಎಂಬ ಬಗ್ಗೆ ಬ್ಲಿಂಕಿಟ್‌ ಸಿಇಒ ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಡಿಸೆಂಬರ್‌ 31 ರಂದು ರಾತ್ರಿ 8 ಗಂಟೆಯವರೆಗೆ ಸುಮಾರು ಆಲೂ ಭುಜಿಯಾ ಮತ್ತು 6834 ಪ್ಯಾಕೆಟ್‌ ಐಸ್‌ಕ್ಯೂಬ್‌ಗಳನ್ನು ಡೆಲಿವರಿ ಬಾಯ್ಸ್‌ ಡೆಲಿವರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದಲ್ಲದೆ 1.22 ಲಕ್ಷದಷ್ಟು ಕಾಂಡೋಮ್‌, 45,531 ಮಿನರಲ್‌ ವಾಟರ್‌ ಬಾಟಲ್‌, 2,434 ಇನೋ ಆರ್ಡರ್‌ ಬಂದಿದೆ ಎಂದು ಹೇಳಿದ್ದಾರೆ. ಜೊತೆಗೆ ದ್ರಾಕ್ಷಿ, ಪಾರ್ಟಿ ಸ್ಟೇಪಲ್ಸ್‌ಗಳಾದ ಚಿಪ್ಸ್, ಕೋಕ್‌ಗಳನ್ನು ಆರ್ಡರ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಡಿಸೆಂಬರ್‌ 31 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾಗಾದರೆ ಈ ಹೊಸ ಪೀಳಿಗೆಯ ಪ್ರಕಾರ ಲೈಂಗಿಕತೆಯೇ ಪಾರ್ಟಿಯೇ?ʼ ಎಂಬ ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೇವ್ರೇ 1 ಲಕ್ಷ ಕಾಂಡೋಮ್‌ಗಳು ಆರ್ಡರ್‌ ಆಗಿವೆಯೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಮಾಹಿತಿಯನ್ನು ಕಂಡು ಫುಲ್‌ ಶಾಕ್‌ ಆಗಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!