ಅತುಲ್ ಸುಭಾಷ್‌ ಆತ್ಮಹತ್ಯೆ ಕೇಸ್​: ನಿಖಿತಾ ಸೇರಿ ಮೂವರಿಗೆ ಜಾಮೀನು ಮಂಜೂರು

Atul
Spread the love

ನ್ಯೂಸ್ ಆ್ಯರೋ: ಹೆಂಡತಿಯ ಕಾಟಕ್ಕೆ ಬೇಸತ್ತು ಸಾಫ್ಟ್‌ವೇರ್‌ ಇಂಜಿನಿಯರ್​ ಅತುಲ್ ಸುಭಾಷ್ ಆತ್ಮಹತ್ಯೆ ದೇಶಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಬಂಧನಕೊಳ್ಳಗಾಗಿದ್ದ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಸಿಂಘಾನಿಯಾಗೆ ಜಾಮೀನು ಮಂಜೂರು ಮಾಡಿ ಬೆಂಗಳೂರಿನ 29ನೇ ಸಿಸಿಹೆಚ್‌ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.

ಹೆಂಡತಿಯ ಕಾಟಕ್ಕೆ ಬೇಸತ್ತಿದ್ದ ಅತುಲ್ ಸುಭಾಷ್, 40 ಪುಟಗಳ ಡೆತ್‌ ನೋಟ್‌ ಮತ್ತು 6 ನಿಮಿಷ 50 ಸೆಕೆಂಡ್‌ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದರು. ಅತುಲ್, ತನ್ನ ಪತ್ನಿ ನಿಖಿತಾ ಸಿಂಘಾನಿಯಾ 9 ಕೇಸ್ ದಾಖಲಿಸಿದ್ದರು. ಕೊಲೆಗೆ ಯತ್ನ, ಅಸಹಜ ಲೈಂಗಿಕ ಕ್ರಿಯೆ, ಕಿರುಕುಳ ಕೊಡ್ತಿದ್ದ ಅಂತಾ ಕೇಸ್ ಹಾಕಿದ್ದರು. ಇದ್ರಿಂದ ಉತ್ತರ ಪ್ರದೇಶ ಕೋರ್ಟ್​ಗೆ ಅಲೆದಾಡಿ ಅಲೆದಾಡಿ ಅತುಲ್ ಹೈರಾಣಾಗಿ ಹೋಗಿದ್ದೆ ಎಂದು ಹೇಳಿಕೊಂಡಿದ್ದರು.

ಅತುಲ್ ಸಹೋದರ ವಿಕಾಸ್ ನೀಡಿದ ದೂರಿನ ಅನ್ವಯ ಅತುಲ್ ಪತ್ನಿ ನಿಖಿತಾ ಸೇರಿದಂತೆ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಎಫ್​ಐಆರ್​ನಲ್ಲಿ, ಅತುಲ್ ಸುಭಾಷ್ ವಿರುದ್ಧ ಆರೋಪಿಗಳು ಸುಳ್ಳು ಕೇಸ್ ಹಾಕಿದ್ದರು. ಪ್ರಕರಣ ಇತ್ಯರ್ಥಕ್ಕಾಗಿ 3 ಕೋಟಿ ರೂ. ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದರು. ಅಷ್ಟೇ ಅಲ್ಲ ಮಗನ ಭೇಟಿಗೆ ಅವಕಾಶ ನೀಡಲು 30 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಅಂತಾ ಉಲ್ಲೇಖಿಸಲಾಗಿತ್ತು.

ಈ ಕೇಸ್‌ನ ತನಿಖೆ ಕೈಗೊಂಡಿದ್ದ ಬೆಂಗಳೂರಿನ ಮಾರತ್‌ಹಳ್ಳಿ ಪೊಲೀಸರು ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ್ದರು. ಅತುಲ್‌ನ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಸಿಂಘಾನಿಯಾನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರೆ, ಪತ್ನಿ ನಿಖಿತಾ ಶಿಂಘಾನಿಯಾಳನ್ನು ಹರಿಯಾಣದ ಗುರುಗ್ರಾಮದಲ್ಲಿ ಲಾಕ್ ಮಾಡಿದ್ದರು.

ಮೊಬೈಲ್ ಸ್ವಿಚ್‌ ಆಫ್‌ ಮಾಡಿದ್ದ ಆರೋಪಿಗಳು ಸ್ನೇಹಿತರ ನೆರವು ಪಡೆದು ಪದೇಪದೆ ವಾಸ್ತವ್ಯ ಬದಲಿಸುತ್ತಿದ್ದರು. ಆದರೆ, ನೆರವಿಗಾಗಿ ಆಗಾಗ್ಗೆ ಸ್ನೇಹಿತರಿಗೆ ಕರೆ ಮಾಡುತ್ತಿದ್ದರು. ಈ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರು ಮೊಬೈಲ್‌ ಟವರ್‌ ಲೊಕೇಷನ್‌ ಆಧರಿಸಿ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದರು. ಬಳಿಕ ಮೂವರನ್ನು ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ನಂತರ ಮೂವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!