85ರ ಮುದುಕನನ್ನು ಮದುವೆಯಾದ 24ರ ಯುವತಿ; ಈಗ ಆಕೆಗೆ ಇರುವುದು ಅದೊಂದೇ ಆಸೆ

Miracle Pogue
Spread the love

ನ್ಯೂಸ್ ಆ್ಯರೋ: ಪ್ರೀತಿ ಕುರುಡು ಎಂಬ ಮಾತನ್ನು ನೀವು ಕೇಳಿರಬೇಕು. ಆದರೆ ಇಂದು ನಾವು ನಿಮಗೆ ಪರಿಚಯಿಸಲು ಹೊರಟಿರುವ ಜೋಡಿಯ ಬಗ್ಗೆ ತಿಳಿದ ನಂತರ ನಿಮಗೆ ಆ ಮಾತಿನ ಮೇಲೆ ಹೆಚ್ಚು ನಂಬಿಕೆ ಬರುತ್ತೆ. ಹೌದು. .ಈ ವ್ಯಕ್ತಿ ತನ್ನ ಮೊಮ್ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದಾರೆ. ಮದುವೆಯ ಸಮಯದಲ್ಲಿ ವರನಿಗೆ 85 ವರ್ಷ ವಯಸ್ಸಾಗಿತ್ತು, ಆದರೆ ಅವನ ಹೊಸ ವಧುವಿಗೆ ಕೇವಲ 24 ವರ್ಷ. ಅಂದರೆ ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ 61 ವರ್ಷ.

ಇವರ ಪ್ರೀತಿ ಒನ್ ಸೈಡ್ ಅಲ್ಲ, ಇಬ್ಬರೂ ಪರಸ್ಪರ ಪ್ರೀತಿ ಮದುವೆಯಾಗಿದ್ದಾರೆ. 85 ವರ್ಷದ ವ್ಯಕ್ತಿಯಲ್ಲಿ 24 ವರ್ಷದ ಹುಡುಗಿ ಏನನ್ನು ನೋಡಿದ್ದಾಳೆಂದು ನಮಗೆ ತಿಳಿದಿಲ್ಲ. ಮುದುಕನೂ ಪ್ರೀತಿಯಲ್ಲಿ ಬಿದ್ದಿದ್ದರಿಂದ ತಡಮಾಡದೆ ಇಬ್ಬರೂ ಕೂಡಲೆ ಮದುವೆಯಾದರು. ಮದುವೆಯಾಗುತ್ತಿದ್ದಂತೆ ನವ ವಧು ಹೊಸ ಆಸೆಯನ್ನು ಬಿಚ್ಚಿಟ್ಟಿದ್ದಾಳೆ.

ಅಮೆರಿಕದ ಮಿಸ್ಸಿಸ್ಸಿಪ್ಪಿ ನಿವಾಸಿಯಾಗಿರುವ ಈ ಮಹಿಳೆಯ ಹೆಸರು ಮಿರಾಕಲ್ ಪೋಗ್, ಅವರಿಗೆ ಈಗ 25 ವರ್ಷ. ಈ ಮಹಿಳೆ ತನಗಿಂತ 61 ವರ್ಷ ಹಿರಿಯ ವ್ಯಕ್ತಿಯನ್ನು ಪತಿಯಾಗಿ ಆಯ್ಕೆ ಮಾಡಿಕೊಂಡಿದ್ದಾಳೆ. 2019 ರಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಆಗ ಮಿರಾಕಲ್ಗೆ 20 ವರ್ಷ. ಇನ್ನು ಈಕೆ ಪತಿ ಚಾರ್ಲ್ಸ್, ನಿವೃತ್ತ ರಿಯಲ್ ಎಸ್ಟೇಟ್ ಏಜೆಂಟ್, ಆತನಿಗೆ 86 ವರ್ಷ.

ವೃತ್ತಿಯಲ್ಲಿ ನರ್ಸ್ ಆಗಿ ಕೆಲಸ ಮಾಡುವ ಮಿರಾಕಲ್, ಚಾರ್ಲ್ಸ್ ಜೊತೆ ಸ್ನೇಹ ಬೆಳೆಸಿದರು ಮತ್ತು ಇಬ್ಬರೂ ಶೀಘ್ರದಲ್ಲೇ ಪ್ರೀತಿಸಲು ಆರಂಭಿಸಿದರು. ಡೈಲಿ ಮೇಲ್ ಪ್ರಕಾರ, ಚಾರ್ಲ್ಸ್ ಫೆಬ್ರವರಿ 2020 ರಲ್ಲಿ ಆಕೆಯನ್ನು ಮದುವೆಯಾಗಲು ಪ್ರಸ್ತಾಪಿಸಿದರು. ಆದರೆ ಕುಟುಂಬದ ಸದಸ್ಯರು, ವಿಶೇಷವಾಗಿ ಮಿರಾಕಲ್ ಅವರ ತಂದೆ, ಈ ಸಂಬಂಧವನ್ನು ಇಷ್ಟಪಡಲಿಲ್ಲ, ನಂತರ ತನ್ನ ಮಗಳ ಸಂತೋಷಕ್ಕಾಗಿ ಒಪ್ಪಿಕೊಂಡರು. ಮಿರಾಕಲ್ ಹೇಳುವಂತೆ ತಾನು 61 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದಿದ್ದಾಳೆ.

ಈಗ ಆಕೆಯ ಏಕೈಕೆ ಬಯಕೆ ಏನು ಗೊತ್ತೇ? ಮಿರಾಕಲ್ ತನ್ನ 85 ವರ್ಷದ ಪತಿಯನ್ನು ಆದಷ್ಟು ಬೇಗ ತಂದೆಯನ್ನಾಗಿ ಮಾಡಬೇಕೆಂದು ಬಯಸಿದ್ದಾಳೆ. ಮಿರಾಕಲ್ ಈಗ ತನ್ನ ಮೊದಲ ಮಗುವನ್ನು ಆದಷ್ಟು ಬೇಗ ಈ ಜಗತ್ತಿಗೆ ತರಲು ತಯಾರಿ ನಡೆಸುತ್ತಿದ್ದಾಳೆ. ಚಾರ್ಲ್ಸ್ ಗೆ ತಂದೆಯಾಗುವುದು ವೈದ್ಯಕೀಯವಾಗಿ ಕಷ್ಟಕರವಾಗಿದೆ, ಆದ್ದರಿಂದ ಮಿರಾಕಲ್ ಐವಿಎಫ್ ಮೂಲಕ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದಾರೆ.

ನಾವು ಸ್ನೇಹಿತರಾದಾಗ ಮತ್ತು ಪ್ರೀತಿಯಲ್ಲಿ ಬಿದ್ದಾಗ ನಾನು ಒಮ್ಮೆ ಚಾರ್ಲ್ಸ್ ಅವರ ಜನ್ಮ ದಿನಾಂಕ ಯಾವುದು ಎಂದು ಕೇಳಿದೆ. ಅವರು 1937 ರಲ್ಲಿ ಜನಿಸಿದರು ಎಂದು ಅವರು ನನಗೆ ಹೇಳಿದರು ಎಂದು ಮಿರಾಕಲ್ ಹೇಳಿದರು. ಆದರೆ ನಿಜ ಹೇಳಬೇಕೆಂದರೆ ಅವರನ್ನು ಮೊದಲ ಬಾರಿಗೆ ನೋಡಿದಾಗ, ಅವರು ನನಗೆ 60-70 ವರ್ಷ ವಯಸ್ಸಿನವರಂತೆ ತೋರುತ್ತಿದ್ದರು ಏಕೆಂದರೆ ಅವರು ತುಂಬಾ ಚೆನ್ನಾಗಿ ಕಾಣುತ್ತಾರೆ.

ಮಿರಾಕಲ್ ತಂದೆ ಆರಂಭದಲ್ಲಿ ಅವರ ಸಂಬಂಧವನ್ನು ಒಪ್ಪಲಿಲ್ಲವಾದರೂ, ನಂತರ ಅವರು ಅವರ ಮದುವೆಗೆ ಒಪ್ಪಿದರು. ಆದರೆ ಮೊದಲಿನಿಂದಲೂ, ಮಿರಾಕಲ್ ಮತ್ತು ಅವರ 61 ವರ್ಷದ ಪತಿ ನಡುವಿನ ಸಂಬಂಧಕ್ಕೆ ತಾಯಿ ಮತ್ತು ಅಜ್ಜ ಒಪ್ಪಿದ್ದರು. ಈ ಸಂಬಂಧಕ್ಕೆ ಇಬ್ಬರ ಅಭ್ಯಂತರವೂ ಇರಲಿಲ್ಲ. ತಾಯಿ ತಮಿಕಾ ಫಿಲಿಪ್ಸ್ ಮತ್ತು ಅಜ್ಜ ಜೋ ಬ್ರೌನ್ ಇಬ್ಬರೂ ಈ ಸಂಬಂಧವು ನಿಮಗೆ ಸಂತೋಷವನ್ನು ನೀಡಿದರೆ, ನಮಗೆ ಯಾವುದೇ ತೊಂದರೆ ಇಲ್ಲ ಎಂದು ಬಹಿರಂಗವಾಗಿ ಹೇಳಿದರು. ಆದರೆ ಮಿರಾಕಲ್ ತಂದೆ ಕರೀಂ ಫಿಲಿಪ್ಸ್ ಅವರನ್ನು ಒಪ್ಪಿಸುವುದು ತುಂಬಾ ಕಷ್ಟಕರವಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!