ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಯೂ ಟ್ಯೂಬರ್ ಗೆ 20 ವರ್ಷ ಜೈಲು ಶಿಕ್ಷೆ

YouTuber Chippada Bhargav
Spread the love

ನ್ಯೂಸ್ ಆ್ಯರೋ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ತೆಲುಗು ಯೂ ಟ್ಯೂಬರ್ ಹಾಗೂ ಟಿಕ್ ಟಾಕ್ ಖ್ಯಾತಿಯ ಚಿಪ್ಪದ ಭಾರ್ಗವ್ ಗೆ ವಿಶಾಖಪಟ್ಟಣಂನ ಪೋಕ್ಸೋ ವಿಶೇಷ ನ್ಯಾಯಾಲಯವೊಂದು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅತ್ಯಾಚಾರದಿಂದ ಗರ್ಭಿಣಿಯಾಗಿರುವ 14 ವರ್ಷದ ಅಪ್ರಾಪ್ತೆಗೆ ರೂ. 4 ಲಕ್ಷ ಪರಿಹಾರ ನೀಡುವಂತೆ ಆರೋಪಿಗೆ ಕೋರ್ಟ್ ಆದೇಶಿಸಿದೆ.

ಫನ್ ಬಕೆಟ್ ಭಾರ್ಗವ್ ಎಂದು ಹೆಸರಾಗಿರುವ ಭಾರ್ಗವ್, ಈ ಹಿಂದೆ 2021ರಲ್ಲಿ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಆತನ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿಯ ಇತರ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು.

ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿ ಎಂದು ಗೊತ್ತಾದ ಬಳಿಕ ಆಕೆಯ ಕುಟುಂಬಸ್ಥರು ಹೈದರಾಬಾದಿನ ಪೆಂದುರ್ತಿ ಠಾಣೆಯಲ್ಲಿ ಏಪ್ರಿಲ್ 16, 2021 ರಂದು ದೂರು ದಾಖಲಿಸಿದ್ದರು. ಬಳಿಕ ಹೈದರಾಬಾದಿನಲ್ಲಿ ಆರೋಪಿಯನ್ನು ಬಂಧಿಸಿ, ವಿಶಾಖಪಟ್ಟಣಂಗೆ ಕರೆ ತರಲಾಗಿತ್ತು.

ವಿಶೇಷ ನ್ಯಾಯಾಲಯದಲ್ಲಿ ಜಾರ್ಜ್ ಶೀಟ್ ದಾಖಲಿಸಿದ ಪೊಲೀಸರು ಎಲ್ಲಾ ದಾಖಲೆಗಳನ್ನು ಸಲ್ಲಿಸಿದರು. ಅವರನ್ನು ದೋಷಿ ಎಂದು ಪರಿಗಣಿಸಿದ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅಲ್ಲದೇ ಸಂತ್ರಸ್ತೆಗೆ ರೂ. 4 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತು.

Leave a Comment

Leave a Reply

Your email address will not be published. Required fields are marked *

error: Content is protected !!