ಮಹಿಳೆಯರ ಈ ಭಾಗ ನೋಡಿಯೇ ಆಕೆ ಎಂಥವಳು ಅಂತ ಹೇಳಬಹುದು; ಚಾಣಕ್ಯರು ಮಹಿಳೆಯರ ಮೈಕಟ್ಟನ್ನು ವಿವರಿಸಿದ್ದು ಹೀಗೆ
ಜೀವನದ- ದಾಂಪತ್ಯದ, ಗಂಡು- ಹೆಣ್ಣಿನ ಸಂಬಂಧದ ಪ್ರತಿಯೊಂದು ಅಂಶವನ್ನು ಚಾಣಕ್ಯ ನೀತಿಯಲ್ಲಿ ಆಳವಾಗಿ ವಿವರಿಸಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರ ಮೈಕಟ್ಟನ್ನು- ಅಂಗಗಳನ್ನು ನೋಡಿಯೇ ಆಕೆಯ ಗುಣಾವಗುಣಗಳನ್ನು ಹೇಳಬಹುದಂತೆ. ಹಾಗೆಯೇ ಪುರುಷರ ಮೈಯನ್ನು- ಅಂಗಗಳನ್ನು ನೋಡಿಯೂ ಅವರ ಗುಣಾವಗುಣ ಹೇಳಬಹುದು. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಅನೇಕ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ಚಾಣಕ್ಯ ನೀತಿಯ ಅನುಸಾರ ಮಹಿಳೆಯರ ಸ್ವಭಾವವನ್ನು ಅವರ ದೇಹದ ಕೆಲವು ಅಂಗಗಳನ್ನು ನೋಡುವ ಮೂಲಕವೇ ತಿಳಿಯಬಹುದಂತೆ. ಅವರ ಪ್ರಕಾರ, ಕುತ್ತಿಗೆ ಆಕಾರ ಪುಟ್ಟದಾಗಿದ್ದರೆ, ಅಂತಹ ಮಹಿಳೆಯರು ತಮ್ಮ ನಿರ್ಧಾರಗಳಿಗಿಂತ ಬೇರೆಯವರ ನಿರ್ಧಾರಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತಾರಂತೆ. ಅದೇ ರೀತಿ ಉದ್ದವಾಗಿ ದುಂಡಾಗಿ ಕುತ್ತಿಗೆ ಹೊಂದಿರುವವರು, ಇತರರಿಗಿಂತ ಕೊಂಚ ಭಿನ್ನವಾಗಿ ಇರುತ್ತಾರಂತೆ. ಕುತ್ತಿಗೆ ಮಧ್ಯಮ ಆಕಾರದಲ್ಲಿದ್ದರೆ, ಅಂತಹ ಮಹಿಳೆಯರು ಬಹಳಷ್ಟು ಮುಂಗೋಪಿಗಳಾಗಿರುತ್ತಾರೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಕಣ್ಣುಗಳ ವಿಚಾರಕ್ಕೆ ಬಂದರೆ, ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಕಿರಿಕಿರಿಯ ಸ್ವಭಾವವನ್ನು ಹೊಂದಿರುತ್ತಾರಂತೆ. ಬೂದು ಬಣ್ಣದ ಕಣ್ಣುಳ್ಳ ಮಹಿಳೆಯರು ತಮ್ಮ ಉತ್ತಮ ಸ್ವಭಾವದಿಂದಲೇ ಎಲ್ಲರ ಮನಗೆಲ್ಲುತ್ತಾರೆ ಎನ್ನಲಾಗಿದೆ. ಯಾವ ಮಹಿಳೆಯರ ಕೈಗಳು ಚಪ್ಪಟೆಯಾಗಿರುತ್ತದೆಯೋ ಅಂತಹ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸಂತೋಷದ ಕೊರತೆಯನ್ನು ಅನುಭವಿಸುತ್ತಾರೆ.
ಇವೆಲ್ಲದರ ಹೊರತಾಗಿ ಬಾಯಿಯಿಂದ ಹಲ್ಲುಗಳು ಹೊರ ಕಾಣುವ ರೀತಿ ಇದ್ದರೆ, ಅಂತಹ ಮಹಿಳೆಯರಿಗೆ ಜೀವನದಲ್ಲಿ ಕಷ್ಟ ಇರುತ್ತದೆ. ಕಿವಿಯಲ್ಲಿ ಕೂದಲು ಹೊಂದಿರುವ ಮಹಿಳೆಯರಿಗೆ ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳಿರುತ್ತವೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ವಿಶಾಲವಾದ ಎದೆ ಹಾಗೂ ನಿತಂಬ ಪ್ರದೇಶಗಳನ್ನು ಹೊಂದಿರುವ ಸ್ತ್ರೀಯರು ಹೆಚ್ಚಿನ ಫಲವಂತಿಕೆಯಿಂದ ಕೂಡಿದ್ದು, ಹೆಚ್ಚು ಮಕ್ಕಳನ್ನು ಹೆರುವ, ಬೆಳೆಸುವ ಸಾಮರ್ಥ್ಯವನ್ನು ಹೊಂದಿರುತ್ತಾಳೆ. ಸಂಸಾರದ ಭಾರವನ್ನು ಹೊರಬಲ್ಲವಳು ಎಂದು ಹೇಳಬಹುದು ಎನ್ನುತ್ತಾನೆ ಚಾಣಕ್ಯ.
ಹಾಗೆಯೇ, ಪುರುಷರಿಗೂ ಈ ವಿಷಯವು ಅನ್ವಯವಾಗುತ್ತದಂತೆ. ವಿಶಾಲವಾದ ಹಣೆಯುಳ್ಳವನು ಭಾಗ್ಯವಂತ. ತಲೆಕೂದಲುಗಳನ್ನು ಬಹಳ ಬೇಗನೆ ಕಳೆದುಕೊಂಡವನು ನಿರ್ಭಾಗ್ಯವಂತ. ಮೆಳ್ಳೆಗಣ್ಣು ಹೊಂದಿದವನು ಸ್ವಲ್ಪ ಅನುಮಾನದ ಸ್ವಭಾವದವನು. ಬಲಿಷ್ಠ ತೋಳು ಹಾಗೂ ಎದೆ ಹೊಂದಿರುವವನು ಪರಿಶ್ರಮಜೀವಿ ಹಾಗೂ ಕುಟುಂಬವನ್ನು ಪೋಷಿಸುತ್ತಾನಂತೆ.
ಬಾಗಿದ ಬೆನ್ನಿನವನು ಭಾಗ್ಯವಂತನಲ್ಲ. ಚಪ್ಪಟೆಯಾದ ಪೃಷ್ಠಗಳನ್ನು ಹೊಂದಿರುವವನು ಯಾವುದೇ ಒಂದು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲಾರನಂತೆ. ಅಗಲವಾದ ಕಂಗಳುಳ್ಳವನು ರಸಿಕ, ಉರುಟಾದ ಮುಖವನ್ನು ಹೊಂದಿರುವನು ಕಲಾವಿದ. ಕುಳ್ಳಗಿನ ಅಂಗಸೌಷ್ಟವ ಹೊಂದಿರುವವನ ಮೇಲೆ ಕೆಲಸಗಳ ಭಾರ ಹೊರಿಸಬಾರದು ಎನ್ನುತ್ತಾನೆ ಚಾಣಕ್ಯ.
Leave a Comment