ಕರಿಮಣಿ ಮಾಲೀಕ ನೀನಲ್ಲ ಎಂದ ರೀಲ್ಸ್ ರಾಣಿ; ಸ್ಲೋ ಪಾಯಿಸನ್ ನೀಡಿ ಗಂಡನ ಹತ್ಯೆ

Udp
Spread the love

ನ್ಯೂಸ್ ಆ್ಯರೋ: ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಲೋ ಪಾಯಿಸನ್​ ನೀಡಿ ಪತ್ನಿ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ. ಬಾಲಕೃಷ್ಣ(44) ಹತ್ಯೆಗೊಳಗಾದ ಗಂಡ. ಸದ್ಯ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಜೆಕಾರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿನಗೂ ಮುನ್ನ ಕಳೆದ 25 ದಿನದಿಂದ ಜ್ವರ, ವಾಂತಿಯಿಂದ ಬಾಲಕೃಷ್ಣ ಬಳಲುತ್ತಿದ್ದರು. ಕೆಎಂಸಿ, ನಿಮ್ಹಾನ್ಸ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದ ಹಿನ್ನೆಲೆ ಬಾಲಕೃಷ್ಣನನ್ನು ಮನೆಗೆ ಕರೆತರಲಾಗಿತ್ತು. ಅಕ್ಟೋಬರ್ 20ರ ತಡರಾತ್ರಿ ಮೃತಪಟ್ಟಿದ್ದಾರೆ.

ಬಾಲಕೃಷ್ಣ ಅನಾರೋಗ್ಯ ಬಗ್ಗೆ ಮನೆಯವರಿಗೆ ಸಂಶಯ ಮೂಡಿತ್ತು. ಹೀಗಾಗಿ ಮೃತ ಬಾಲಕೃಷ್ಣ ಸಹೋದರ ರಾಮಕೃಷ್ಣರಿಂದ ದೂರು ದಾಖಲಿಸಿದ್ದರು. ಇದಾಗಿ ಮರಣೋತ್ತರ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದ ದಿನ ತನ್ನ ಸಹೋದರನ ಬಳಿ ಪ್ರತಿಮಾ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ. ಪ್ರಿಯಕರ ದಿಲೀಪ್ ಜೊತೆ ಸೇರಿ ಒಂದುವರೆ ತಿಂಗಳಿಂದ ಸ್ಲೋ ಪಾಯಿಸನ್ ನೀಡಿದ್ದು, ಉಸಿರುಗಟ್ಟಿಸಿ ಸಾಯಿಸಿದ್ದನ್ನು ಒಪ್ಪಿಕೊಂಡಿದ್ದಾಳೆ.

ಸದ್ಯ ಸಹೋದರ ಸಂದೀಪ್ ಮತ್ತು ಪ್ರತಿಮಾ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಪ್ರತಿಮ ಬ್ಯೂಟಿಷನಾಗಿ ದುಡಿಯುತ್ತಿದ್ದರು. ಮದುವೆ ಮನೆಗಳಿಗೆ ಹೋಗಿ ನವ ಜೋಡಿಗಳ ಅಲಂಕಾರ ಮಾಡುತ್ತಿದ್ದರು. ನೋಡುವುದಕ್ಕೂ ಸ್ಫುರದ್ರೂಪಿಯಾದ ಕಾರಣ ರಿಲ್ಸ್ ಮಾಡುವ ಜಾಲಿ ಬೆಳೆಸಿಕೊಂಡಿದ್ದಳು. ಲೈಕ್ ಗಳ ಆಸೆಗೆ ಬಿದ್ದು ಡ್ರಿಂಕ್ಸ್ ಮಾಡುವುದನ್ನು ಹೆಚ್ಚಾಗಿ ಬಳಸಿಕೊಂಡಿದಳು. ಗಂಡ ಬಾಲಕೃಷ್ಣ ಪೂಜಾರಿಯನ್ನೇ ಪಕ್ಕದಲ್ಲಿ ಇರಿಸಿಕೊಂಡು ಕರಿಮಣಿ ಮಾಲೀಕ ನಿನ್ನಲ್ಲ ಎಂದು ರೀಲ್ಸ್ ಮಾಡಿಬಿಟ್ಟಿದ್ದಳು. ಇದೀಗ ಪ್ರತಿಮ ತನ್ನ ಗಂಡನಿಗೆ ಸ್ಲೋ ಪಾಯಿಸನ್ ನೀಡಿ ಸಾಯಿಸಿದ್ದಾಳೆ.

ಪ್ರತಿಮಾಳ ಸೋಶಿಯಲ್ ಲೈಫ್ ಕಂಡು, ದಿಲೀಪ್ ಗೆ ಆಕೆಯ ಬಗ್ಗೆ ವಿಪರೀತ ವ್ಯಾಮೋಹ ಹುಟ್ಟಿತ್ತು. ಆಕೆ ಏನು ಹೇಳಿದರು ಈತ ಮಾಡಲು ತಯಾರಿದ್ದ. ಇಬ್ಬರು ಸೇರಿ ಬಾಲಕೃಷ್ಣನಿಗೆ ಮುಹೂರ್ತ ಇಡಲು ನಿರ್ಧಾರ ಮಾಡುತ್ತಾರೆ. ಹಾಗೂ ಹೇಗೆ ವಿಚಾರ ತಿಳಿದುಕೊಂಡು ಹಂತ ಹಂತವಾಗಿ ಸ್ಲೋ ಪಾಯಿಸನ್ ನೀಡಲು ನಿರ್ಧಾರ ಮಾಡುತ್ತಾರೆ. ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಷವುಣಿಸಿ, ಆರೋಗ್ಯ ಕೆಡುವಂತೆ ನೋಡಿಕೊಳ್ಳುತ್ತಾರೆ. ಕೊನೆಗೆ ಸಂಪೂರ್ಣ ಆರೋಗ್ಯ ಹದಗೆಟ್ಟು ಬಾಲಕೃಷ್ಣ ಆಸ್ಪತ್ರೆ ಸೇರಿದ್ದಾರೆ.

ಉಡುಪಿ ಜಿಲ್ಲೆಯ ಅಜರಕಾಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆಲ್ಲಕಾಸ್ಪತ್ರೆಗೆ ಸೇರಿಸಲಾಗುತ್ತದೆ. ಇದರಿಂದಲೂ ಏನು ಪ್ರಯೋಜನವಾಗುವುದಿಲ್ಲ. ಮುಂದೆ ಹೆಚ್ಚಿನ ಚಿಕಿಸಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಬೆಂಗಳೂರಿನಿಂದ ಚಿಕಿತ್ಸೆ ಮುಗಿಸಿಕೊಂಡು ಬಂದ ಬಾಲಕೃಷ್ಣ, ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಂತೆ ಕಂಡುಬಂದಿದ್ದರು. ಆ ದಿನ ರಾತ್ರಿ ಪ್ರತಿಮಾ ಕೂಡ ಗಂಡನನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಬಂಧುಗಳಿಗೆಲ್ಲ ಹೇಳಿ ರಾತ್ರಿ ಪತಿಯ ಜೊತೆ ಏಕಾಂಗಿಯಾಗಿದ್ದರು.

ಜೊತೆಗೆ ಪತಿ ಸುಧಾರಿಸಿಕೊಳ್ಳಬಹುದು ಎಂಬ ಆತಂಕ ಪ್ರತಿಮಾಗೆ ಕಾದಿತ್ತು. ಹಾಗಾಗಿ ಪತಿಯನ್ಮು ಕೊಂದೆ ಬಿಡಬೇಕು ಎಂಬ ನಿರ್ಧಾರ ಮಾಡಿ ನಡುರಾತ್ರಿ ಪ್ರಿಯಕರ ದಿಲೀಪ್ ಹೆಗಡೆಯನ್ನು ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ಇಬ್ಬರು ಸರಿ ರಾತ್ರಿ ಮೂರು ಗಂಟೆ ಸುಮಾರಿಗೆ ದಿಂಬಿನ ಮೂಲಕ ಕುತ್ತಿಗೆ ಒತ್ತಿ ಹಿಡಿದು, ಬಾಲಕೃಷ್ಣ ಪೂಜಾರಿಯನ್ನು ಬಲಿ ಪಡೆದಿದ್ದಾರೆ. ನಂತರ ದಿಲೀಪ್ ಹೆಗಡೆ ಏನು ಆಗಿಲ್ಲ ಎಂಬಂತೆ ಕಾರ್ಕಳಕ್ಕೆ ವಾಪಸ್ ಆಗಿದ್ದಾನೆ. ಪಕ್ಕದಲ್ಲಿ ಇರುವ ಸಂಬಂಧಿಕರ ಮನೆಗೆ ಕರೆ ಮಾಡಿ ಪ್ರತಿಮಾ, ತನ್ನ ಪತಿ ಸತ್ತಿರುವುದಾಗಿ ಮಾಹಿತಿ ರವಾನಿಸಿದ್ದಾಳೆ.ಪತಿ ಸತ್ತು ಐದನೇ ದಿನ ಸತ್ಯ ಬೆಳಕಿಗೆ ಬಂದಿದೆ.

Leave a Comment

Leave a Reply

Your email address will not be published. Required fields are marked *

error: Content is protected !!