ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್: ‘ಮನಿ’ಟ್ರ್ಯಾಪ್ ಆಯಿಷಾ ಲಾಕ್

ayesha arrested mangalore
Spread the love

ನ್ಯೂಸ್ ಆ್ಯರೋ: ನದಿಗೆ ಹಾರಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ಪರಾರಿಯಾಗಿದ್ದ ಎ1 ಆರೋಪಿ ಆಯಿಷಾ ಅಲಿಯಾಸ್ ರೆಹಮತ್, A5 ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬುವವರನ್ನು ಇಂದು(ಮಂಗಳವಾರ) ಕಲ್ಲಡ್ಕ ಬಳಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದ ಮಾಸ್ಟರ್​ಮೈಂಡ್ ಆಗಿರುವ ಎ2 ಆರೋಪಿ ಅಬ್ದುಲ್ ಸತ್ತಾರ್​ಗಾಗಿ ಶೋಧ ನಡೆದಿದೆ.

ಘಟನೆ ವಿವರ ನೋಡುವುದಾದರೇ,
ಅ.06 ರ ರಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆ ಆಗಿದ್ದು, ನಗರದ ಕೂಳೂರು ಬ್ರಿಡ್ಜ್​​ ಮೇಲೆ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಅವರ ಕೆಎ19 ಎಂಜಿ0004 ಸಂಖ್ಯೆಯ BMW X5 ಕಾರು ಪತ್ತೆ ಆಗಿತ್ತು. ಅದರಂತೆ ಮಂಗಳೂರಿನ ಕುಳೂರಿನ ಫಲ್ಗುಣಿ ನದಿಯಲ್ಲಿ ಸತತ ಮೂವತ್ತು ಗಂಟೆಗಳ ಕಾರ್ಯಾಚರಣೆಯ ಬಳಿಕ ಮುಮ್ತಾಜ್ ಮೃತದೇಹ, ಹುಡುಕಾಟದಲ್ಲಿದ್ದ ಸ್ಥಳೀಯ ಮೀನುಗಾರರಿಗೆ ಸಿಕ್ಕಿತ್ತು.

ಮುಮ್ತಾಜ್ ಮೃತದೇಹ ಪತ್ತೆಯಾಗುತ್ತಿದ್ದಂತೆ ಮೊಯಿದ್ದೀನ್ ಬಾವ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮನ ಮೃತದೇಹ ಕಂಡು ಬಾವಾ ಗೋಳಾಡಿದರೆ, ಸಂಬಂಧಿಕರು ಕಣ್ಣೀರಿಟ್ಟರು. ಶವವನ್ನು ಮೇಲಕ್ಕೆತ್ತಿದ ಬಳಿಕ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿ, ನಂತರ ಕೃಷ್ಣಾಪುರ ಮಸೀದಿಯಲ್ಲಿ ಅವರನ್ನು ದಫನ್ ಮಾಡಲಾಯಿತು.

ಇನ್ನು ಮುಮ್ತಾಜ್ ಆಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯನ್ನು ಉಪಯೋಗಿಸಿ ಮಾಡಿದ ಬ್ಲ್ಯಾಕ್ ಮೇಲ್ ಕಾರಣ ಎಂದು ಅಲಿ ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಮುಮ್ತಾಜ್ ಅಲಿ ತಮ್ಮ ಹೈದರ್ ಅಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ದೂರು ನೀಡಿದ್ದರು. ರೆಹಮತ್ ಅಲಿಯಾಸ್ ಆಯಿಷಾ ಎಂಬ ಮಹಿಳೆಯನ್ನು ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಆರು ಮಂದಿಯ ತಂಡ ಬ್ಲ್ಯಾಕ್ ಮೇಲ್ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಕಾವೂರು ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ,ಶೋಯೆಬ್ ಮತ್ತು ಮುಮ್ತಾಜ್ ಅಲಿ ಕಾರು ಚಾಲಕ ಸಿರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇನ್ನು ಮುಮ್ತಾಝ್‌ ಅಲಿಯವರು 50 ಲಕ್ಷ ಹಣ ಕೊಟ್ಟಿದ್ದರು, ಹಾಗೆಯೇ 25 ಲಕ್ಷ ಚೆಕ್ ಮೂಲಕ ನೀಡಿದ್ದರು. ವಾಯ್ಸ್ ಕ್ಲಿಪ್ಪಿಂಗ್ ನಲ್ಲಿ ಮುಮ್ತಾಝ್‌ ಅಲಿ, ಕೆಲವರ ಹೆಸರು ಉಲ್ಲೇಖ ಮಾಡಿದ್ದಾರೆ. ಮಹಿಳೆ ಜೊತೆಗಿನ ಸೆಕ್ಸ್ ವಿಡಿಯೋ ಅಂತ ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಈ ಬಗ್ಗೆ ಅವರು ಸಾಯುವ ಮುನ್ನ ಫ್ಯಾಮಿಲಿ ಗ್ರೂಪ್ ನಲ್ಲಿ ವಾಯ್ಸ್ ನೋಟ್ ಕೂಡ ಹಾಕಿದ್ದರು. ಆರೋಪಿ ಸತ್ತಾರ್ ಹೆಸರು ಕೂಡ ವಾಯ್ಸ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!