ಬೆಕ್ಕಿನ ಕ್ಷೌರಕ್ಕೆ ಆಗಿದ್ದು ಬರೋಬ್ಬರಿ 55 ಸಾವಿರ ರೂ.; ಬಿಲ್ ನೋಡಿ ಶಾಕ್ ಆದ ಮಾಜಿ ಕ್ರಿಕೆಟರ್‌ ವಾಸಿಂ

Wasim Akram shocked
Spread the love

ನ್ಯೂಸ್ ಆ್ಯರೋ: ಹೌದು. . ಇದು ನೀವೂ ನಂಬಲೇ ಬೇಕಾದ ವಿಚಾರ. ಇದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಅವರು ತಮ್ಮ ಮನೆಯ ಬೆಕ್ಕಿಗೆ ಕ್ಷೌರ ಮಾಡಿಸಲು ಎಷ್ಟು ಖರ್ಚಾಗುತ್ತದೆ? ಎಂದು ಬಿಲ್ ನೋಡಿ ವಾಸಿಂ ಅಕ್ರಮ್ ಮಾತನಾಡಿರುವ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ.

ಪಾಕಿಸ್ತಾನ-ಆಸ್ಟ್ರೇಲಿಯಾ ಸರಣಿಯ ವೇಳೆ, ಕಾಮೆಂಟೇಟರ್ ಆಗಿ ಕೆಲಸ ಮಾಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದ ವಾಸಿಂ ಅಕ್ರಮ್, ತನ್ನ ಮುದ್ದಿನ ಬೆಕ್ಕಿನ ಕೂದಲನ್ನು ಕತ್ತರಿಸಲು ಪೆಟ್ ಸಲೂನ್‌ಗೆ ಹೋಗಿದ್ದರು. ಬೆಕ್ಕಿನ ಕೂದಲು ಕತ್ತರಿಸಲು 1000 ಆಸ್ಟ್ರೇಲಿಯನ್ ಡಾಲರ್ (ಸುಮಾರು 55 ಸಾವಿರ ರೂಪಾಯಿ) ತೆಗೆದುಕೊಂಡರು. ಬಿಲ್ ನೋಡಿ ಪ್ರಜ್ಞೆ ತಪ್ಪಿದೆ ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ. ಈ ಘಟನೆಯ ಕುರಿತು ವಾಸಿಂ ಅಕ್ರಮ್ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ-ಆಸ್ಟ್ರೇಲಿಯಾ ಏಕದಿನ ಸರಣಿಗೆ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಈ ಸ್ವಿಂಗ್ ಸುಲ್ತಾನ್ ಪಂದ್ಯದ ಮಧ್ಯದಲ್ಲಿ ವಿಷಯ ಪ್ರಸ್ತಾಪಿಸಿದರು. ‘ನಿನ್ನೆ ಬೆಕ್ಕಿನ ಕ್ಷೌರ ಮಾಡಿಸಲು ಹೋಗಿದ್ದೆ.. ಬೆಕ್ಕನ್ನು ಮಲಗಿಸಿ ಕೂರಿಸಿ ಊಟ ಮಾಡಿ ಏನೇನೋ ಮಾಡಿ ಸಾವಿರ ಆಸ್ಟ್ರೇಲಿಯನ್ ಡಾಲರ್ ತೆಗೆದುಕೊಂಡರು.. ಬಿಲ್ ನೋಡಿ ಆ ಹಣದಲ್ಲಿ 200 ಬೆಕ್ಕಿಗೆ ಕ್ಷೌರ ಮಾಡಬಹುದೆಂದು ಹೇಳಿದರು.

ಬಿಲ್ ಮೂಲತಃ ಕ್ಷೌರಕ್ಕಾಗಿ $40 ಅನ್ನು ಒಳಗೊಂಡಿತ್ತು, ಆದರೆ ಉಳಿದ ಹಣವನ್ನು ಇತರ ಸೇವೆಗಳಿಗಾಗಿ ಬಿಲ್ ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಗೆ 104 ಡಾಲರ್, ಅನಸ್ತೇಷಿಯಾಕ್ಕೆ 304 ಡಾಲರ್, ಸಲೂನ್ ನಲ್ಲಿ ಚಾರ್ಜ್​​ ಮಾಡಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!