‘ವಕ್ಫ್ ಆಸ್ತಿ’ ವಿಚಾರಕ್ಕೆ 2 ಕೋಮಿನ ನಡುವೆ ಕಲ್ಲುತೂರಾಟ; 32 ಮಂದಿಯನ್ನು ಬಂಧಿಸಿದ ಖಾಕಿ ಪಡೆ

Arrest 1
Spread the love

ನ್ಯೂಸ್ ಆ್ಯರೋ: ಹಾವೇರಿಯ ಕಡಕೋಳ ಗ್ರಾಮದಲ್ಲಿ ಅನ್ಯಕೋಮಿನ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ‘ವಕ್ಫ್ ಆಸ್ತಿ’ ವಿಚಾರಕ್ಕೆ 2 ಕೋಮಿನ ನಡುವೆ ಕಲ್ಲುತೂರಾಟದಲ್ಲಿ 32 ಮಂದಿಯನ್ನು ಬಂಧಿಸಲಾಗಿದೆ.

ವಕ್ಫ್ ಹೆಸರಿಗೆ ಆಸ್ತಿ ವರ್ಗಾಯಿಸಿಕೊಂಡು ಮನೆಗಳನ್ನು ಖಾಲಿ ಮಾಡಿಸುತ್ತಾರೆ ಎಂಬ ವದಂತಿಯಿಂದ ಉದ್ರಿಕ್ತರ ಗುಂಪು ಅನ್ಯಕೋಮಿನ ಮುಖಂಡರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಮನೆ ಮುಂದೆ ನಿಲ್ಲಿಸಿದ್ದ ವಾಹನ ಜಖಂಗೊಳಿಸಿದೆ.ಮಾಹಿತಿ ತಿಳಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಎಸ್ಪಿ ಅಂಶುಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2 ಕೋಮಿನ ನಡುವೆ ಕಲ್ಲುತೂರಾಟದಲ್ಲಿ 32 ಮಂದಿಯನ್ನು ಬಂಧಿಸಲಾಗಿದೆ. ಬಾಲಕರು ಸೇರಿದಂತೆ 32 ಮಂದಿಯನ್ನು ಬಂಧಿಸಲಾಗಿದೆ’ ಗ್ರಾಮದಲ್ಲಿ ಬಿಗಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ’ .

ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಮಾಹಿತಿ ನೀಡಿ, ಕಡಕೋಳ ಗ್ರಾಮದಲ್ಲಿ ಗರಡಿ ಮನೆಗೆ ಸಂಬಂಧಿಸಿದಂತೆ ಗೊಂದಲವಿತ್ತು. ಆಸ್ತಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಓದಿ ಭಯಗೊಂಡಿದ್ದಾರೆ. ವಕ್ಫ್ ಎಂದು ಹೆಸರು ನಮೂದಿಸುತ್ತಾರೆ ಎಂದು ಗಲಾಟೆ ಮಾಡಿದ್ದಾರೆ. ವಾಸವಿರುವ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಆತಂಕ ಉಂಟಾಗಿ ಅನ್ಯಕೋಮಿನ ಮುಖಂಡರ ಮನೆಗಳ ಮೇಲೆ ತೂರಾಟ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!