Fact Check : ಬಿಡಿಸಿಕೊಳ್ಳದ ಬಾವುಟವನ್ನು ಕಾಗೆ ಬಿಡಿಸಿತಾ? ಕಾಗೆ ಸಹಾಯದಿಂದ ಬಾವುಟ ಹಾರಾಡಿತಾ? – ವೈರಲ್ ವಿಡಿಯೋದ ಅಸಲಿಯತ್ತೇನು?

20240817 161003
Spread the love

ನ್ಯೂಸ್ ಆ್ಯರೋ : ಸ್ವಾತಂತ್ರ್ಯ ದಿನದಂದು ಕಾಗೆಯ ಸಹಾಯದಿಂದ ಬಾವುಟ ಹಾರಿದ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ಅಸಲಿಯೋ ನಕಲಿಯೋ ಎಂಬ ಬಗ್ಗೆ ಚರ್ಚೆ ಆರಂಭವಾಗಿದ್ದು, ವಾಸ್ತವವಾಗಿ ಈ ವಿಡಿಯೋ ಅಸಲಿಯಾಗಿದ್ದು ದೃಶ್ಯ ಚಿತ್ರೀಕರಿಸಲ್ಪಟ್ಟ ಕ್ಯಾಮೆರಾ ಆ್ಯಂಗಲ್ ನಿಂದಾಗಿ ಈ ವಿಡಿಯೋ ವೈರಲ್ ಆಗಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾವುಟವನ್ನು ಧ್ವಜಸ್ತಂಭಕ್ಕೆ ಏರಿಸುವ ವೇಳೆ ಬಾವುಟ ಅಲ್ಲೇ ಸಿಲುಕಿಕೊಂಡಂತಾಗಿದ್ದು, ಅದೇ ವೇಳೆ ಹಾರಿ ಬರುವ ಕಾಗೆಯಿಂದಾಗಿ ಧ್ವಜ ಹಾರುವಂತೆ ವಿಡಿಯೋ ಚಿತ್ರೀಕರಣವಾಗಿದೆ‌.

ಆದರೆ ಅಸಲಿಗೆ ಕಾಗೆ ಹಾರಿ ಬಂದು ಕುಳಿತಿದ್ದು ಅಲ್ಲೇ ಸಮೀಪದಲ್ಲಿ ಇರುವ ತೆಂಗಿನ ಗರಿಯ ಮೇಲೆ. ಕ್ಯಾಮೆರಾ ಆ್ಯಂಗಲ್ ಓರೆಯಾಗಿರುವ ಕಾರಣ ಈ ವಿಡಿಯೋದ ಅಸಲಿಯತ್ತು ಬೆಳಕಿಗೆ ಬಂದಿದೆ.

ವೈರಲ್ ಆಗುತ್ತಿರುವ ವಿಡಿಯೋ
ಅಸಲಿ ದೃಶ್ಯ

ಈ ವಿಡಿಯೋ ಕೇರಳದ್ದು ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯ ವಿಷಯವಾಗುತ್ತಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋವನ್ನು ಕ್ಯಾಮೆರಾ ಕೈಚಳಕ ಎನ್ನಬಹುದಾಗಿದ್ದು, ನಕಲಿಯಂತೂ ಅಲ್ಲ‌. ಯಾಕೆಂದರೆ ಇದನ್ನು ಎಡಿಟ್ ಮಾಡಲಾಗಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

Leave a Comment

Leave a Reply

Your email address will not be published. Required fields are marked *