
ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಮಿಲ್ಕ್ ಬ್ಯೂಟಿ ತಮನ್ನಾ – ಬಾಹುಬಲಿ ನಟಿ ಮದುವೆಗೆ ಒತ್ತಡ ಯಾರದ್ದು ಗೊತ್ತಾ?
- ವೈರಲ್ ನ್ಯೂಸ್
- November 16, 2023
- No Comment
- 51
ನ್ಯೂಸ್ ಆ್ಯರೋ: ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ನಟ ವಿಜಯ್ ವರ್ಮಾ ಅವರೊಂದಿಗೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮನೆಯವರ ಒತ್ತಡ ಎನ್ನಲಾಗುತ್ತಿದೆ.
ವರ್ಷದ ಆರಂಭದಲ್ಲೇ ಸಾರ್ವಜನಿಕವಾಗಿ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದ ಈ ಜೋಡಿಯಲ್ಲಿ ತಮನ್ನಾಗೆ ಮದುವೆ ಬಗ್ಗೆ ಪೋಷಕರ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಪ್ರವೇಶಿಸಲು ಈ ಜೋಡಿ ಅಣಿಯಾಗಿದೆ.
ಲಾಸ್ಟ್ ಸ್ಟೋರಿಸ್ 2 ಬಿಡುಗಡೆ ವೇಳೆ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ತಮ್ಮಿಬ್ಬರ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು.
ಈ ಹಿಂದೆ ವಿಜಯ್ ವರ್ಮಾ ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದ ತಮನ್ನಾ, ಅವರ ಜತೆ ಇದ್ದರೆ ನಾನು ಹೆಚ್ಚು ಸಂತೋಷವಾಗಿರುತ್ತೇನೆ. ಅವರು ಒಳ್ಳೆಯ ಮನುಷ್ಯ. ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರಿಗಾದರೂ ನಾವು ಸೋತೆವೆಂದರೆ ಅಲ್ಲಿ ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ವೈಯಕ್ತಿಕವಾಗಿದೆ. ಯಶಸ್ವಿ ವ್ಯಕ್ತಿಯೋ ಅಲ್ಲವೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ ಎಂದಿದ್ದರು.
18ನೇ ವಯಸ್ಸಿಗೆ ಚಿತ್ರರಂಗ ಪ್ರವೇಶಿಸಿದ ನಟಿ 30 ವರ್ಷಕ್ಕೆ ಮದುವೆ ಆಗಿ ಮಕ್ಕಳನ್ನು ಪಡೆಯಬೇಕು ಎಂದುಕೊಂಡಿದ್ದರಂತೆ. ಆದರೆ, ಜೀವನ ಬೇರೆಯದೇ ಯೋಜನೆ ಮಾಡಿಕೊಂಡಿತ್ತು ಎಂದು ಹೇಳಿದ್ದರು. ಕೊನೆಯದಾಗಿ ತಮನ್ನಾ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಆಖ್ರಿ ಸಚ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.