ಉಡುಪಿ ಹೊಟೇಲ್ ಮೆನು ವೀಡಿಯೋ ವೈರಲ್ – ನನ್ನ ಮುಂದಿನ ಟ್ರಿಪ್ ಅಲ್ಲಿಗೇ ಎಂದ ಆನಂದ್ ಮಹೀಂದ್ರಾ…!!

ಉಡುಪಿ ಹೊಟೇಲ್ ಮೆನು ವೀಡಿಯೋ ವೈರಲ್ – ನನ್ನ ಮುಂದಿನ ಟ್ರಿಪ್ ಅಲ್ಲಿಗೇ ಎಂದ ಆನಂದ್ ಮಹೀಂದ್ರಾ…!!

ನ್ಯೂಸ್ ಆ್ಯರೋ : ಜನರಿಗೆ ಆಹಾರದ ಮೇಲೆ ಅದೇನೋ ವಿಶೇಷ ಆಸಕ್ತಿಯಿರುತ್ತದೆ. ವಿಶೇಷ ರೆಸಿಪಿಗಳನ್ನು ಸವಿಯುವುದು ಅದೇನೋ ಒಂಥರಾ ಖುಷಿಯಿರುತ್ತೆ. ವಿಭಿನ್ನ ಖಾದ್ಯ ಉಣಬಡಿಸುವ ಹೊಟೇಲ್ ಗಳತ್ತ ಜನರ ಚಿತ್ತ ಇದ್ದಕಿದ್ದಂತೆ ಹೋಗಿಬಿಡುತ್ತೆ. ಅದೇ ರೀತಿ ಈ ಒಂದು ಹೊಟೇಲ್ ನ ಮೆನು ನೋಡಿ ಆನಂದ್ ಮಹೀಂದ್ರಾ ಅವರು ಕೂಡಾ ಫಿದಾ ಆಗಿದ್ದಾರೆ.

ಹೊರಗೆ ಎಲ್ಲಾದರೂ ಹೋದರೆ ಹೆಚ್ಚಾಗಿ ಜನರು ಉಡುಪಿ ಹೋಟೇಲ್ ಗೆ ಹೋಗಲು ಇಷ್ಟಪಡುತ್ತಾರೆ. ಅಲ್ಲಿ ಒಂದು ಲೋಟ ಕಾಫಿ ಕುಡಿದರೂ ಆಗುವ ಖುಷಿಯೇ ಬೇರೆ. ಬೇರೆ ರಾಜ್ಯದಲ್ಲೂ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡಿರುವ ಉಡುಪಿ ಹೋಟೆಲ್ ಎಲ್ಲಾ ಕಡೆ ಫೇಮಸ್. ಮಹೀಂದ್ರಾ ಗ್ರೂಫ್ ಚೇರ್ ಮೆನ್ ಆನಂದ್ ಮಹೀಂದ್ರಾ ಕೂಡಾ ಉಡುಪಿ ಹೊಟೇಲ್ ನ ತಿಂಡಿಯ ರುಚಿ ನೋಡಲು ಬರ್ತಿದ್ದಾರಂತೆ. ಇದು ಶಾಕ್ ಆದ್ರೂ ಸತ್ಯ.

ಪಟಪಟ ಹೊಟೇಲ್ ಮೆನು ಹೇಳುವ ಭಟ್ಟರು:

ಹೊಟೇಲ್ ಗಳಲ್ಲಿ ಆ ದಿನದ ಸ್ಪೆಷಲ್ ಏನು? ಯಾವೆಲ್ಲಾ ತಿಂಡಿಗಳಿವೆ? ಅನ್ನೋದನ್ನು ಬರೆದು ಗೋಡೆಯಲ್ಲಿ ತೂಗು ಹಾಕಿರುತ್ತಾರೆ. ಇನ್ನು ಕೆಲವು ಕಡೆ ಹೊಟೇಲ್ ನಲ್ಲಿ ಏನೆಲ್ಲಾ ಇದೆ ಎಂದು ಸ್ವತಃ ವೈಟರ್ ನವರೇ ಹೇಳುವ ಸಂಪ್ರದಾಯವಿದೆ. ಅದೇ ರೀತಿ ವಿಸಿಟ್ ಉಡುಪಿ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ಈ ವೀಡಿಯೋದಲ್ಲಿ ಹೊಟೇಲ್ ಭಟ್ಟರೊಬ್ಬರು ತಮ್ಮ ಹೊಟೇಲ್ ನಲ್ಲಿ ಏನೆಲ್ಲಾ ದೊರೆಯುತ್ತದೆ ಎಂಬುದನ್ನು ಪಟಪಟ ಹೇಳಿದ್ದಾರೆ. ಅದೆಲ್ಲವೂ ಕರಾವಳಿಯ ಸ್ಪೆಷಲ್ ಫುಡ್ ಗಳೇ. ನಿಮ್ಮ ಹೊಟೇಲ್ ನಲ್ಲಿ ಏನೆಲ್ಲಾ ದೊರೆಯುತ್ತದೆ ಎಂದು ಪ್ರಶ್ನಿಸಿದ ಗ್ರಾಹಕರೊಬ್ಬರಿಗೆ ಭಟ್ಟರು ಶತಾಬ್ಧಿ ಎಕ್ಸ್‌ಪ್ರೆಸ್‌ ನಂತೆ ಬಜ್ಜಿ, ಚಟ್ಟಂಬಡೆ, ಬನ್ಸ್, ಅವಲಕ್ಕಿ, ಸಜ್ಜಿಗೆ, ಕಡ್ಲೆ- ಅವಲಕ್ಕಿ, ಇಡ್ಲಿ- ಸಾಂಬಾರ್, ಇಡ್ಲಿ ಚಟ್ನಿ, ವಡೆ ಸಾಂಬಾರ್, ಸಾದಾ ದೋಸೆ, ನೀರುಳ್ಳಿ ದೋಸೆ, ಚಪಾತಿ ಕೂರ್ಮಾ, ಡ್ರಮ್ ಸ್ಟಿಕ್ ಮಂಚೂರಿ, ಉಪ್ಪಿಟ್ಟು ಸೇರಿದಂತೆ ನಾನಾ ಫುಡ್ ಐಟಮ್ ಗಳ ಹೆಸರು ಹೇಳಿ ಕೊನೆಯಲ್ಲಿ ನಿಮಗೇನು ಬೇಕು ಹೇಳಿ..? ಎನ್ನುತ್ತಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದು ಇದು ಆನಂದ್ ಮಹೀಂದ್ರಾ ಅವರ ಕಣ್ಣಿಗೂ ಬಿದ್ದಿದೆ.

ನನ್ನ ಮುಂದಿನ ಟ್ರಿಪ್ ಉಡುಪಿಗೆ ಎಂದ ಆನಂದ್ ಮಹೀಂದ್ರಾ…

ಉಡುಪಿ ಹೊಟೇಲ್ ವೀಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರು ‘ ನಾನು ಮುಂದಿನ ಬಾರಿ ಎಲ್ಲಾದ್ರೂ ಟ್ರಿಪ್ ಹೋಗೋದಾದ್ರೆ ಅದು ಕರ್ನಾಟಕದ ಉಡುಪಿಗೆ’ ಎಂದಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *