ಅಡುಗೆಗೆ ಗಂಡ ಎರಡು ಟೊಮ್ಯಾಟೊ ಬಳಸಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ – ಗಂಡ-ಹೆಂಡಿರ ನಡುವೆ ಜಗಳ ತಂದಿಟ್ಟ ಟೊಮ್ಯಾಟೊ!

ಅಡುಗೆಗೆ ಗಂಡ ಎರಡು ಟೊಮ್ಯಾಟೊ ಬಳಸಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ – ಗಂಡ-ಹೆಂಡಿರ ನಡುವೆ ಜಗಳ ತಂದಿಟ್ಟ ಟೊಮ್ಯಾಟೊ!

ನ್ಯೂಸ್ ಆ್ಯರೋ : ಎರಡು ಟೊಮ್ಯಾಟೊ ಗಂಡ-ಹೆಂಡತಿ ನಡುವೆ ಜಗಳ ತಂದಿಟ್ಟು ಸಂಸಾರವನ್ನೇ ಹಾಳು ಮಾಡಿತು ಎಂದರೆ ನೀವು ನಂಬುತ್ತೀರಾ. ನಂಬಿಕೆ ಬಾರದಿದ್ದರೂ ಇದನ್ನು ನೀವು ನಂಬಲೇ ಬೇಕು.‌ ದೇಶದಾದ್ಯಂತ ಟೊಮ್ಯಾಟೊ ಸುದ್ದಿಯಲ್ಲಿದೆ. ದಿನದಿಂದ ದಿನಕ್ಕೆ ಟೊಮ್ಯಾಟೊ ರೇಟ್ ಜಾಸ್ತಿಯಾಗಿ ಗ್ರಾಹಕ ಕಂಗಾಲಾಗಿದ್ದಾನೆ‌. ಈ‌ ನಡುವೆ ಮಧ್ಯಪ್ರದೇಶದ ಶಹದೊಲ್​​ ಜಿಲ್ಲೆಯಲ್ಲಿ ಗಂಡ ಅಡುಗೆ ಮಾಡಲು ಎರಡು ಟೊಮ್ಯಾಟೊ ಬಳಸಿದ ಎಂಬ ಕಾರಣಕ್ಕೆ ಪತ್ನಿಯೊಬ್ಬಳು ಮನೆ ಬಿಟ್ಟು ಹೋಗಿದ್ದಾಳೆ. ಈ ವಿಚಿತ್ರ ಘಟನೆಯ ಡೀಟೈಲ್ಸ್ ಇಲ್ಲಿದೆ.

ಟೊಮ್ಯಾಟೊ ತಂದಿಟ್ಟ ಗಲಾಟೆ!

ಮಧ್ಯಪ್ರದೇಶದ ಶಹದೊಲ್​​ ಜಿಲ್ಲೆಯವನಾದ ಸಂಜೀವ್ ಬುರ್ಮನ್ ಎಂಬಾತ ಟಿಫಿನ್ ಸೆಂಟರ್ ಒಂದನ್ನು ನಡೆಸುತ್ತಿದ್ದ. ಕೆಲ ದಿನಗಳ ಹಿಂದೆ ಆತ ಅಡುಗೆ ಮಾಡಲು ಎರಡು ಟೊಮ್ಯಾಟೊಗಳನ್ನು ಬಳಸಿದ್ದ. ಇದನ್ನು ಕಂಡು ಕುಪಿತಳಾದ ಪತ್ನಿ ‘ನನ್ನನ್ನು ಕೇಳದೆ ಎರಡು ಟೊಮ್ಯಾಟೊ ಯಾಕೆ ಬಳಸಿದ್ದೀರಿ’ ಎಂದು ಗಲಾಟೆ ತೆಗೆದಿದ್ದಾಳೆ.

ಗಲಾಟೆ ಹೆಚ್ಚಾಗುತ್ತಿದ್ದಂತೆ ಬೇಸರಿಸಿಕೊಂಡ ಪತ್ನಿ ಮಗಳ ಜೊತೆ ಮನೆ ಬಿಟ್ಟು ಹೋಗಿದ್ದಾಳೆ. ಮಗಳು ಮತ್ತು ಪತ್ನಿ ಟೊಮ್ಯಾಟೊ ವಿಚಾರಕ್ಕೆ ಗಲಾಟೆ ಮಾಡಿ ಮನೆ ಬಿಟ್ಟು ಹೋಗಿದ್ದರಿಂದ ಕಂಗಾಲಾದ ಪತಿ ಪೊಲೀಸ್ ಠಾಣೆಗೆ ತೆರಳಿ ಹೆಂಡತಿಯನ್ನು ಮನೆಗೆ ಕರೆತರಲು ಸಹಾಯ ಮಾಡಿ ಎಂದು ಕಣ್ಣೀರಿಟ್ಟು ಗೋಳಾಡಿದ್ದಾನೆ‌.

ಪೊಲೀಸರು ಹೇಳಿದ್ದೇನು?

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿಯನ್ನು ಕರೆಸಿಕೊಡುವಂತೆ ಪತಿಗೆ ಧೈರ್ಯ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ರಾಜೀವ್, ‘ತನನ್ನು‌ ಕೇಳದೆ ಗಂಡ ಎರಡು ಟೊಮ್ಯಾಟೊಗಳನ್ನು ಅಡುಗೆಗೆ ಬಳಸಿದ್ದಕ್ಕಾಗಿ ಗಲಾಟೆ ಮಾಡಿ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ ಎಂಬುದು ಮೇಲ್ನೋಟಕ್ಕೆ ಸತ್ಯ ಎಂದು ಸಾಬೀತಾಗಿದೆ. ಶೀಘ್ರದಲ್ಲೇ ಆಕೆಯ ಮನವೊಲಿಸಿ ಪತಿಯೊಂದಿಗೆ ಕಳುಹಿಸಿ ಕೊಡಲು ವ್ಯವಸ್ಥೆ ಮಾಡಲಾಗುವುದು’ ಎಂದಿದ್ದಾರೆ. ಅಂತೂ ಈ ಟೊಮ್ಯಾಟೊದಿಂದಾಗಿ ಗ್ರಾಹಕರು ಪಡದ ಪಾಡಿಲ್ಲ ಬಿಡಿ..!

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *