ಇದು ಸ್ಪೀಡ್ ಡೇಟಿಂಗ್ ಜಮಾನ – ಯುವಕರಿಗೆ 1,499 ಶುಲ್ಕ, ಯುವತಿಯರಿಗೆ ಭಾರೀ ಡಿಸ್ಕೌಂಟ್..!!

ಇದು ಸ್ಪೀಡ್ ಡೇಟಿಂಗ್ ಜಮಾನ – ಯುವಕರಿಗೆ 1,499 ಶುಲ್ಕ, ಯುವತಿಯರಿಗೆ ಭಾರೀ ಡಿಸ್ಕೌಂಟ್..!!

ನ್ಯೂಸ್ ಆ್ಯರೋ‌ : ಕಾಲ ಬದಲಾದಂತೆ ಮನಸ್ಥಿತಿಯೂ ಬದಲಾಗುತ್ತದೆ. ಇದರ ಜೊತೆಗೆ ತಂತ್ರಜ್ಞಾನ, ವ್ಯವಸ್ಥೆಗಳೂ ಬದಲಾಗುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಯುವಕ – ಯುವತಿಯ ಸ್ನೇಹ ಸಂಬಂಧ. ಕೆಲವು ವರ್ಷಗಳ ಹಿಂದೆ ಹುಡುಗ-ಹುಡುಗಿ ಜೊತೆಯಾಗಿ ತಿರುಗಾಡಿದರೆ ತಪ್ಪು ಎನ್ನುವ ಭಾವನೆ ಇತ್ತು. ಕ್ರಮೇಣ ಇದು ಸಾಮಾನ್ಯ ಎಂಬಂತಾಯಿತು. ಜೊತೆಗೆ ಡೇಟಿಂಗ್ ಆ್ಯಪ್ ಕೂಡ ಬಂತು. ಈಗ ಇನ್ನು ಮುಂದೆ ಹೋಗಿ ಸ್ಪೀಡ್ ಡೇಟಿಂಗ್ ವ್ಯವಸ್ಥೆ ಜಾರಿಗೆ ಬಂದಿದೆ.

ಏನಿದು ಸ್ಪೀಡ್ ಡೇಟಿಂಗ್?

ಯುವಕ-ಯುವತಿಯನ್ನು ಒಂದೇ ಸೂರಿನಡಿ ಸೇರಿಸಿ ಪರಸ್ಪರ ಭೇಟಿಯಾಗುವ ಅವಕಾಶ ಕಲ್ಪಿಸುವುದೇ ಸ್ಪೀಡ್ ಡೇಟಿಂಗ್. ಹಲವು ಕಂಪೆನಿಗಳು ಪ್ರಮುಖ ನಗರಗಳಲ್ಲಿ ರೆಸ್ಟೋರೆಂಟ್, ಕೆಫೆ, ಬಾರ್, ಉದ್ಯಾನವನ ಮುಂತಾದ ಸ್ಥಳಗಳಲ್ಲಿ ಸ್ಪೀಡ್ ಡೇಟಿಂಗ್ ಆಯೋಜಿಸುತ್ತವೆ. ಇದಕ್ಕಾಗಿ ಪ್ರವೇಶ ಶುಲ್ಕವನ್ನೂ ವಿಧಿಸಲಾಗುತ್ತದೆ. ಸದ್ಯ ಬೆಂಗಳೂರಿನಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಪಾಲ್ಗೊಳ್ಳುವುದು ಹೇಗೆ?

ಹೆಸರು ನೋಂದಾಯಿಸಿಕೊಂಡ ಯುವ ಜನತೆಗೆ ತಮ್ಮ ಅಭಿರುಚಿ, ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ವ್ಯಕ್ತಿಯನ್ನು ಆರಿಸಿಕೊಳ್ಳುವ ಅವಕಾಶ ಇದರಲ್ಲಿ ಲಭಿಸುತ್ತದೆ. ಕೆಲವು ಬಾರಿ ಆನ್ ಲೈನ್ ಮೂಲಕವೂ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಹೆಚ್ಚು ಸಮಯ ತೆಗೆದುಕೊಳ್ಳದೆ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಬೇಗ ಡೇಟಿಂಗ್ ಆರಂಭಿಸುವುದೇ ಈ ಕಾರ್ಯಕ್ರಮದ ಉದ್ದೇಶ.

ವೈರಲ್

ಇದೀಗ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಫಾಸ್ಟ್ ಡೇಟಿಂಗ್ ಕುರಿತಾದ ಇನ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದೆ. ಇದರಲ್ಲಿ ಪಾಲ್ಗೊಳ್ಳುವ ಯುವಕ-ಯುವತಿಯರಿಗೆ ನಿಗದಿ ಪಡಿಸಿರುವ ಟಿಕೆಟ್ ಬೆಲೆ ಅಚ್ಚರಿಗೊಳಿಸುತ್ತದೆ. ಯುವಕರಿಗೆ ಪ್ರವೇಶ ಶುಲ್ಕ 1,499 ರೂ. ಇದ್ದರೆ ಯುವತಿಯರಿಗೆ ಕೇವಲ 99 ರೂ. ನಿಗದಿಪಡಿಸಿರುವುದು ಚರ್ಚೆಗೆ ಕಾರಣವಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *