ಒಂದು ಕೋಟಿ ಬೆಲೆಯ ಬಾಳೆಹಣ್ಣು ಕದ್ದು ತಿಂದು ಎಸ್ಕೇಪ್ ಆದ ವಿದ್ಯಾರ್ಥಿ – ಅಂತಹ ವಿಶೇಷ ಬಾಳೆಹಣ್ಣು ಸಿಕ್ಕಿದ್ದೆಲ್ಲಿ ಗೊತ್ತಾ

ಒಂದು ಕೋಟಿ ಬೆಲೆಯ ಬಾಳೆಹಣ್ಣು ಕದ್ದು ತಿಂದು ಎಸ್ಕೇಪ್ ಆದ ವಿದ್ಯಾರ್ಥಿ – ಅಂತಹ ವಿಶೇಷ ಬಾಳೆಹಣ್ಣು ಸಿಕ್ಕಿದ್ದೆಲ್ಲಿ ಗೊತ್ತಾ

ನ್ಯೂಸ್ ಆ್ಯರೋ‌ : ಬಾಳೆಹಣ್ಣು ಭಾರತದಲ್ಲಿ ಸಾಮಾನ್ಯವಾಗಿ ಎಲ್ಲಾ ಕಡೆ ದೊರೆಯುತ್ತದೆ. ಹೆಚ್ಚಿನವರು ಮನೆಯಲ್ಲೇ ಬೆಳೆಯುತ್ತಾರೆ. ಇದರ ಬೆಲೆ ಎಷ್ಟೆಂದು ಯಾರು ಬೇಕಾದರೂ ಊಹಿಸಬಹುದು. ಆದರೆ ಇಲ್ಲಿನ ಬಾಳೆಹಣ್ಣಿನ ಬೆಲೆ ಕೇಳಿದರೆ ನೀವು ಮೂಗಿನ ಮೇಲೆ ಬೆರಳಿಡುವುದು ಕಂಡಿತ. ದಕ್ಷಿಣ ಕೊರಿಯಾದಲ್ಲಿ ವಿದ್ಯಾರ್ಥಿಯೊಬ್ಬ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಬಾಳೆಹಣ್ಣನ್ನು ತಿಂದಿದ್ದಾನೆ.

ದಕ್ಷಿಣ ಕೊರಿಯಾದ ಲೀಯುಮ್‌ ಚಿತ್ರಶಾಲೆಯಲ್ಲಿ ಚಿತ್ರಕಲಾಕೃತಿಗಳ ಪ್ರದರ್ಶನ ನಡೆಯುತ್ತಿತ್ತು. ಅಲ್ಲಿ ಮೌರಿಜಿಯೊ ಕ್ಯಾಟೆಲಾನ್‌ ಎಂಬ ಕಲಾವಿದ ಒಂದು ಬಾಳೆಹಣ್ಣನ್ನು ಟೇಪ್‌ನಿಂದ ಗೋಡೆಗೆ ಅಂಟಿಸಿದ್ದ. ಇದೂ ಒಂದು ಕಲಾಕೃತಿ! ಇದರ ಬೆಲೆ 1 ಕೋಟಿ ರೂ.

ಅಲ್ಲಿಗೆ ಬಂದ ನೊಹ್‌ ಹಯ್ನ ಸೂ ಎಂಬ ವಿದ್ಯಾರ್ಥಿಗೆ ಸಿಕ್ಕಾಪಟ್ಟೆ ಹಸಿವಾಗಿತ್ತು. ಅವನಿಗೆ ಉಳಿದಿದ್ದು ಹೊಳೆಯಲಿಲ್ಲ. ಸುಮ್ಮನೆ ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಅದೇ ಟೇಪ್‌ಗೆ ಅಂಟಿಸಿ ಜಾಗ ಖಾಲಿ ಮಾಡಿದ.

ಬಳಿಕ ವಿಷಯ ಕೇಳಿ ಮೌರಿಜಿಯೊ ಕ್ಯಾಟೆಲಾನ್‌ ಏನು ಮಾಡಲಿಕ್ಕಾಗುತ್ತೆ ಎಂದು ಸುಮ್ಮನಾಗಿದ್ದಾರಂತೆ. ಹೀಗೆ ಅರಿವಿಲ್ಲದೆ ದುಬಾರಿ ಬೆಳೆಯ ಬಾಳೆಹಣ್ಣು ತಿಂದು ನೊಹ್‌ ಹಯ್ನ ಸೂ ಸುದ್ದಿಯಾಗಿದ್ದಾನೆ.

Related post

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…
ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ…

ನ್ಯೂಸ್ ಆ್ಯರೋ : ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ…

Leave a Reply

Your email address will not be published. Required fields are marked *