ನಾನು ಜಗ್ಗೇಶ್ ಪತ್ನಿ ಎಂದು ಪ್ರೆಸ್‌ಮೀಟ್‌ನಲ್ಲೇ ಹೇಳಿಬಿಟ್ರು: ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ
ನ್ಯೂಸ್ ಆ್ಯರೋ: ತಮ್ಮ ಸಹಜ ಸೌಂದರ್ಯದಿಂದಲೇ ಕನ್ನಡ ಸೇರಿದಂತೆ ಹಲವು ಚಿತ್ರರಂಗದಲ್ಲಿ ಗುರುತಿಸಿಕೊಂಡವರು ನಟಿ ವಿಜಯಲಕ್ಷ್ಮಿ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಈಗ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿಲ್ಲವಾದರೂ, ಇವರ ಬದುಕಿನಲ್ಲಿ ಬಂದಿರುವ ಬಿರುಗಾಳಿಯಿಂದಲೇ ಸುದ್ದಿಯಾಗುತ್ತಿದ್ದಾರೆ. ಒಂದು ಕಾಲದಲ್ಲಿ ರಾಣಿಯಂತೆ ಮೆರೆಯುತ್ತಿದ್ದ ನಟಿ ವಿಜಯಲಕ್ಷ್ಮಿ ಅವರಿಗೆ ಸದ್ಯ ಯಾವುದೇ ಚಾನ್ಸ್ ಸಿಗುತ್ತಿಲ್ಲ. ತಮಿಳು ಚಿತ್ರರಂಗಕ್ಕೆ ಅದಾಗಲೇ ಗುಡ್ ಬೈ ಹೇಳಿ ಬಂದಿದ್ದಾರೆ. ಇದರ ನಡುವೆಯೇ ತಮ್ಮ ಬದುಕು ಹಾಗೂ ಅಕ್ಕನ ಬದುಕಿನ ಬಗ್ಗೆ ಹಲವಾರು ವಿಡಿಯೋ ರಿಲೀಸ್ ಮಾಡುತ್ತಲೇ ಕಳೆದೆರಡು ವರ್ಷಗಳಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಅವರು ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಬದುಕಿನ ಹಲವು ದುರಂತಗಳ ಬಗ್ಗೆ ಮಾತನಾಡಿದ್ದಾರೆ.
ಇದರ ಮಧ್ಯೆಯೇ, ಶಾಕಿಂಗ್ ವಿಷಯವೊಂದನ್ನು ಅವರು ರಿವೀಲ್ ಮಾಡಿದ್ದಾರೆ. ಅದೇನೆಂದರೆ, ತಮಿಳುನಾಡಿನ ರಾಜಕಾರಣಿ, ಚಿತ್ರ ನಿರ್ದೇಶಕ ಸೀಮಾನ್ ಅವರು ಪತ್ರಿಕಾಗೋಷ್ಠಿಯಲ್ಲಿ ನಟ ಜಗ್ಗೇಶ್ ಅವರು ನನ್ನ ಪತಿ ಎಂದು ಸುಳ್ಳು ಸುದ್ದಿ ಹರಡಿ, ತಮ್ಮ ಮಾನವನ್ನು ಹರಾಜು ಹಾಕಿದ್ದೂ ಅಲ್ಲದೇ, ಜಗ್ಗೇಶ್ ಅವರ ವಿರುದ್ಧ ಅಪಪ್ರಚಾರ ಮಾಡಿದ ವಿಷಯವನ್ನು ಹೇಳಿದ್ದಾರೆ. ನಟಿ ವಿಜಯಲಕ್ಷ್ಮಿ ಅವರು ಈವಿಡಿಯೋದಲ್ಲಿ ಹೇಳಿದಂತೆ, 2020ರ ಸಮಯ. ಅದಾಗಲೇ ನನ್ನ ಅಕ್ಕನ ಬಾಳಿನಲ್ಲಿ ಬಹು ದೊಡ್ಡ ದುರಂತವೇ ನಡೆದು ಹೋಗಿತ್ತು. ಆಕೆಯ ಪತಿಯ ಮನೆಯವರ ಕಿರುಕುಳದಿಂದ ತಪ್ಪಿಸಿಕೊಳ್ಳಲು ನಮಗೆ ಯಾರದ್ದಾದರೂ ಸಹಾಯ ಬೇಕಿತ್ತು. ಆಗಲೇ ನಮಗೆ ಸಹಾಯ ಮಾಡುವುದಾಗಿ ಹೇಳಿ ಬಂದವರು ಇದೇ ಸೀಮನ್ ಅವರು. ಆಗ ಅವರ ಚಿತ್ರದಲ್ಲಿಯೂ ನಾನು ಕೆಲಸ ಮಾಡಿದ್ದೆ. ಆದ್ದರಿಂದ ಪರಿಚಯವಾಗಿತ್ತು. ಆದರೆ ಅಲ್ಲಿಂದಲೇ ದೊಡ್ಡ ದುರಂತವೂ ಶುರು ಆಯಿತು’ ಎಂದಿದ್ದಾರೆ.
ವಿಜಯಲಕ್ಷ್ಮಿ ಸಹೋದರಿ ಉಷಾ ಮದುವೆ ಆಗಿರುವುದು ಬಾಲಿವುಡ್ ನಟಿ ಜಯಪ್ರದ ಸಹೋದರ ರಾಜ ಬಾಬು ಅವರನ್ನು. ಆದರೆ ಅವರ ಅಕ್ಕನ ಸಂಸಾರ ಕೂಡ ಸುಖವಾಗಿಲ್ಲ. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಗಂಡನ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಜಯಪ್ರದಾ ಮತ್ತು ಅವರ ಕುಟುಂಬಸ್ಥರು ಸಿಕ್ಕಾಪಟ್ಟೆ ಕಿರುಕುಳ ನೀಡಿ ಅಕ್ಕನನ್ನು ಮನೆಯಿಂದ ಹೊರಹಾಕಿದ್ದ ಬಗ್ಗೆ ಇದಾಗಲೇ ವಿಜಯಲಕ್ಷ್ಮಿ ಮಾತನಾಡಿದ್ದಾರೆ. ಅಕ್ಕನ ಗಂಡನ ಮನೆಯವರಿಂದ ತುಂಬಾ ಟಾರ್ಚರ್ ಇದ್ದುದರಿಂದ ಹಾಗೂ ಜಯಪ್ರದಾ ರಾಜಕೀಯ ಹಿನ್ನೆಲೆ ಇದ್ದುದರಿಂದ ನಮಗೆ ಯಾರಾದರೂ ರಾಜಕೀಯ ವ್ಯಕ್ತಿಯ ಸಹಾಯ ಬೇಕಿತ್ತು. ಆಗ ಸೀಮಾನ್ ಅವರು ನೆರವಾದರು. ಅದಾಗಲೇ ಅವರು ನಾಮ್ ತಮಿಳು ಕಚ್ಚಿ ರಾಜಕೀಯ ಪಕ್ಷ ಶುರು ಮಾಡಿದ್ದರು. ಆ ಪಕ್ಷಕ್ಕೂ ನಾನು ಸಾಕಷ್ಟು ಹಣದ ನೆರವು ನೀಡಿದೆ. ಅವರಿಗೆ ಆಗ ಮದುವೆಯಾಗಿರಲಿಲ್ಲ. ನಾನು, ಅಕ್ಕ, ಅಮ್ಮ ಇದ್ದುದರಿಂದ ನಮ್ಮ ಮನೆಯಲ್ಲಿಯೂ ಗಂಡು ದಿಕ್ಕಿರಲಿಲ್ಲ ಎಂದು ನನ್ನನ್ನು ಮದುವೆಯಾಗುವುದಾಗಿ ಹೇಳಿದರು. ನಾನು, ಅವರು ಒಟ್ಟಿಗೇ ಇದ್ವಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಕೆಲ ವರ್ಷ ಒಟ್ಟಿಗೇ ಇದ್ವಿ. ಆದರೆ ಅವರ ಪಕ್ಷದವರಿಗೆ ಕನ್ನಡಿಗರನ್ನು ಕಂಡರೆ ಆಗುತ್ತಿರಲಿಲ್ಲ. ಆದ್ದರಿಂದ ಸೀಮಾನ್ ಅವರು, ನೀನು ಕನ್ನಡದವಳಾಗಿರುವ ಕಾರಣ, ನಿನ್ನೊಟ್ಟಿಗೆ ಇರಲು ಆಗುವುದಿಲ್ಲ, ಇದರಿಂದ ರಾಜಕೀಯಕ್ಕೆ ತೊಂದರೆಯಾಗುತ್ತದೆ ಎಂದುಬಿಟ್ಟರು. ಇಷ್ಟು ವರ್ಷ ಒಟ್ಟಿಗೇ ಇದ್ದು ಈಗ ಹೀಗೆ ಹೇಳಿದರೆ ಹೇಗೆ ಎಂದೆ. ಅದಾಗಲೇ ಅವರಿಗೆ ಸಿಕ್ಕಾಪಟ್ಟೆ ಹಣವನ್ನೂ ಸುರಿದು ಆಗಿತ್ತು. ಆದರೆ ಅವರು ನನ್ನ ಜೊತೆ ಜಗಳವಾಡಿ ಪ್ರತ್ಯೇಕ ಆಗಿಬಿಟ್ಟರು.
ನಂತರ ಅವರ ವಿರುದ್ಧ ದೂರು ದಾಖಲಿಸುವಂತೆ ಕೆಲವರು ನನಗೆ ಹೇಳಿದರು. ಆದರೆ ನಾನು ಹಾಗೆ ಮಾಡಲಿಲ್ಲ. ಆದರೆ ಅವರು ನನ್ನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೆಟ್ಟದ್ದಾಗಿ ಮಾತನಾಡಿಬಿಟ್ಟರು. ಕನ್ನಡದ ನಟ ಜಗ್ಗೇಶ್, ವಿಜಯಲಕ್ಷ್ಮಿ ಗಂಡ. ಬೇಕಿದ್ರೆ ಕರ್ನಾಟಕದಲ್ಲಿ ಯಾರ ಬಳಿಯಾದರೂ ಕೇಳಿ ಎಂದು ಹೇಳಿಬಿಟ್ಟರು. ಈ ಬಗ್ಗೆ ಪತ್ರಕರ್ತರು ನನಗೆ ಕಾಲ್ ಮಾಡಿದಾಗ ನನಗೆ ಶಾಕ್ ಆಗಿ ಹೋಯ್ತು. ಜಗ್ಗೇಶ್ ಅವರ ಹೆಸರನ್ನು ಏಕೆ ಅವರು ವಿನಾಕಾರಣ ಎಳೆದು ತಂದರು ಎನ್ನುವುದು ನನಗೆ ಗೊತ್ತಿಲ್ಲ. ಅವರು ತುಂಬಾ ಒಳ್ಳೆಯ ವ್ಯಕ್ತಿ. ಅದರೆ ಹೀಗೆಲ್ಲಾ ನನ್ನ ಮತ್ತು ಅವರ ಜೊತೆ ಸಂಬಂಧ ಕಲ್ಪಿಸಿಬಿಟ್ಟರು ಎಂದು ವಿಜಯಲಕ್ಷ್ಮಿ ನೋವು ತೋಡಿಕೊಂಡಿದ್ದಾರೆ.
ಬಳಿಕ ಅವರ ಸಹವಾಸವೇ ಬೇಡ ಎಂದು ಸುಮ್ಮನಾದೆ. ಅವರ ಮದುವೆಯೂ ಬೇರೊಬ್ಬರ ಜೊತೆ ಆಯ್ತು. ಆದರೂ ನಾನೂ ಇರಲಿ, ಪತ್ನಿಯೂ ಇರಲಿ ಎನ್ನುವುದು ಅವರ ಆಸೆಯಾಗಿತ್ತು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ. ನನ್ನಿಂದ ಒಂದು ಹೆಣ್ಣಿಗೆ ಅನ್ಯಾಯ ಆಗುವುದು ನನಗೆ ಇಷ್ಟವಿರಲಿಲ್ಲ. ಇಷ್ಟೆಲ್ಲಾ ಆದ ಬಳಿಕ, ತಮಿಳು ನಾಡಿನ ಸರ್ಕಾರದವರೇ ಸೀಮಾನ್ ವಿರುದ್ಧ ದೂರು ದಾಖಲು ಮಾಡಲು ಹೇಳಿದರು. ಮತ್ತೆ ಅದೆಲ್ಲಾ ನನಗೆ ಇಷ್ಟವಾಗಲಿಲ್ಲ. ವರ್ಷದಿಂದೀಚೆಗೆ ಬೇಡ ಬೇಡ ಎಂದರೂ ಹಣದ ಸಹಾಯ ಮಾಡಿದರು ಎನ್ನುತ್ತಲೇ ತಮ್ಮ ಜೀವನದ ಹಲವು ಘಟನೆಗಳನ್ನು ನಟಿ ರಾಜೇಶ್ ಗೌಡ ಅವರ ಜೊತೆ ಶೇರ್ ಮಾಡಿದ್ದಾರೆ.
Leave a Comment