ಕಳಚಿದ ಮತ್ತೊಂದು ಹಿರಿಯ ಕೊಂಡಿ; ಖ್ಯಾತ ಬಹುಭಾಷಾ ನಟಿ ಪುಷ್ಪಲತಾ ನಿಧನ

Pushpalatha
Spread the love

ನ್ಯೂಸ್ ಆ್ಯರೋ: ಹಿರಿಯ ನಟಿ ಪುಷ್ಪಲತಾ ನಿಧನರಾಗಿದ್ದಾರೆ. 87 ವರ್ಷದ ನಟಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇವರು ತಮಿಳು ನಟ ಎವಿಎಂ ರಾಜನ್ ಅವರ ಪತ್ನಿ.

ಚೆನ್ನೈನ ಟಿ. ನಗರದ ತಿರುಮಲ ಪಿಳ್ಳೈ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ನಟಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪುಷ್ಪಲತಾ ಅನೇಕ ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಪೆದ್ದಕೊಡುಕು, ಅನ್ನದಮ್ಮುಲ್ ಅಫಿಲಿಯೇಶನ್, ಯುಗಪುರುಷುಡು, ರಾಜಪುತ್ರ ರಹಸ್ಯಂ, ಶ್ರೀರಾಮ ಪಟ್ಟಾಭಿಷೇಕಂ, ಮತ್ತು ಕೊಂಡವೀಟಿ ಸಿಂಹಂ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.

Actress Pushpalatha Dies

ಮಾತ್ರವಲ್ಲ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸೇರಿ ಒಟ್ಟು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಡಾ. ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಚಿತ್ರದಲ್ಲಿ ಕೂಡ ಪುಷ್ಪಲತಾ ಬಣ್ಣ ಹಚ್ಚಿದ್ದರು. ಬಳಿಕ ‘ಹೆಣ್ಣಿನ ಸೇಡು’, ‘ಒಲವೇ ಬದುಕು’ ಹಾಗೂ ‘ಜೀವನ ಜ್ಯೋತಿ’ ಚಿತ್ರದಲ್ಲಿ ಪೋಷಕ ನಟಿಯಾಗಿ ಮಿಂಚಿದ್ದರು.

Leave a Comment

Leave a Reply

Your email address will not be published. Required fields are marked *