ವಿಮಾನದಲ್ಲಿ ಸಂಸ್ಕೃತದಲ್ಲಿ ಅನೌನ್ಸ್​ಮೆಂಟ್; ವೈರಲ್‌ ವಿಡಿಯೋ ಗೆ ನೆಟ್ಟಿಗರು ಫಿದಾ

Viralpost
Spread the love

ವಾರಣಾಸಿ ವಿಮಾನ ನಿಲ್ದಾಣದಲ್ಲಿ ಸಂಸ್ಕೃತದಲ್ಲಿ ಅನೌನ್ಸ್​ಮೆಂಟ್ ನೀಡಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋದಲ್ಲಿ ಸೂಚನೆಗಳನ್ನು ಸಂಸ್ಕೃತದಲ್ಲಿ ಹೇಳುತ್ತಿರುವುದನ್ನು ಕಾಣಬಹುದು. ಆದರೆ ಈ ವಿಡಿಯೋ ನಿಜವಲ್ಲ, ಸಂಸ್ಕೃತದಲ್ಲಿ ಡಬ್ಬಿಂಗ್​ ಮಾಡಿ ವಿಡಿಯೋ ಎಡಿಟ್​ ಮಾಡಲಾಗಿದೆ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

@MumbaichaDon ಎಂಬ ಟ್ವಿಟರ್​ ಖಾತೆಯಲ್ಲಿ ಸಂಸ್ಕೃತದಲ್ಲಿ ಅನೌನ್ಸ್​ಮೆಂಟ್ ನೀಡುತ್ತಿರುವ ವೀಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ಇಂದು(ಡಿ.05) ಬೆಳಿಗ್ಗೆ ಹಂಚಿಕೊಂಡಿರುವ ವಿಡಿಯೋ ಈಗಾಗಲೇ 22 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಸನಾತನ ಧರ್ಮ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.

ಆದರೆ ಈ ವಿಡಿಯೋ ನಿಜವಲ್ಲ, ಸಂಸ್ಕೃತದಲ್ಲಿ ಡಬ್ಬಿಂಗ್​ ಮಾಡಿ ವಿಡಿಯೋ ಎಡಿಟ್​ ಮಾಡಲಾಗಿದೆ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

https://twitter.com/MumbaichaDon/status/1864517425527669079?ref_src=twsrc%5Etfw%7Ctwcamp%5Etweetembed%7Ctwterm%5E1864517425527669079%7Ctwgr%5Ec9f5759bdbf0f5c7c375821c00a608f169b277e6%7Ctwcon%5Es1_c10&ref_url=https%3A%2F%2Ftv9kannada.com%2Ftrending%2Fvaranasi-airport-sanskrit-announcement-goes-viral-aks-945322.html

Leave a Comment

Leave a Reply

Your email address will not be published. Required fields are marked *

error: Content is protected !!