ಯುಪಿಐ ಪೇಮೆಂಟ್ ಬಳಸುವವರಿಗೆ ಗುಡ್ ನ್ಯೂಸ್ – ತೆರಿಗೆ ಪಾವತಿಗೆ ಯುಪಿಐ ಮಿತಿ ಐದು ಲಕ್ಷದವರೆಗೆ ಏರಿಕೆ

IMG 20240808 WA0093
Spread the love

ನ್ಯೂಸ್ ಆ್ಯರೋ‌ : ಯುಪಿಐ (UPI) ಮೂಲಕ ಇನ್ನು ಮುಂದೆ 5 ಲಕ್ಷ ರೂ.ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು. ಇಲ್ಲಿಯವರೆಗೆ ಒಂದು ಬಾರಿಗೆ ಗರಿಷ್ಟ 1 ಲಕ್ಷ ರೂ.ವರೆಗೆ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಲು ಅವಕಾಶವಿತ್ತು. ಈಗ ಈ ಮಿತಿಯನ್ನು 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ. ತೆರಿಗೆ ಪಾವತಿಗಾಗಿ ಯುಪಿಐ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಸ್ತಾಪಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (RBI) ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಯುಪಿಐ ಮೂಲಕ 5 ಲಕ್ಷ ರೂ. ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು ಎಂದು ತಿಳಿಸಿದರು.

ಆಹಾರ ಹಣದುಬ್ಬರ ಇಳಿಕೆಯಾಗದ ಕಾರಣ ನಿರೀಕ್ಷೆಯಂತೆ ಆರ್‌ಬಿಐ ಸತತ ಒಂಬತ್ತನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರವನ್ನು 6.5% ರಲ್ಲಿಯೇ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ.

ಚಿಲ್ಲರೆ ಹಣದುಬ್ಬರವನ್ನು 4% ರ ಮಿತಿಯಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರೆಪೊ ದರದಲ್ಲಿ ಬದಲಾವಣೆ ಮಾಡುತ್ತಿಲ್ಲ. ಹಣದುಬ್ಬರವು 4%ರ ಮಿತಿ ಅಥವಾ ಅದಕ್ಕಿಂತ ಕೆಳಗೆ ಇಳಿಕೆಯಾದರೆ ಮಾತ್ರ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ಶಶಿಕಾಂತ್‌ ದಾಸ್‌ ತಿಳಿಸಿದರು.

ಎನ್ಪಿಸಿಐ ಪ್ರಕಾರ, “ಸಾಮಾನ್ಯ ಯುಪಿಐಗೆ ವಹಿವಾಟಿನ ಮಿತಿ ಪ್ರತಿ ವಹಿವಾಟಿಗೆ 1 ಲಕ್ಷ ರೂ. ಕ್ಯಾಪಿಟಲ್ ಮಾರ್ಕೆಟ್ಸ್, ಕಲೆಕ್ಷನ್ಸ್, ಇನ್ಶೂರೆನ್ಸ್, ವಿದೇಶಿ ಒಳಬರುವ ಹಣ ರವಾನೆಗಳಂತಹ ಯುಪಿಐನಲ್ಲಿನ ಕೆಲವು ನಿರ್ದಿಷ್ಟ ವರ್ಗದ ವಹಿವಾಟುಗಳಿಗೆ ವಹಿವಾಟಿನ ಮಿತಿ 2 ಲಕ್ಷದವರೆಗೆ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮತ್ತು ಚಿಲ್ಲರೆ ನೇರ ಯೋಜನೆಯಂತಹ ಪ್ರತಿ ವಹಿವಾಟಿಗೆ ಮಿತಿ 5 ಲಕ್ಷ ರೂ. ಆಗಿದೆ.

ಡಿಸೆಂಬರ್ 2021 ರಲ್ಲಿ, ಚಿಲ್ಲರೆ ನೇರ ಯೋಜನೆ ಮತ್ತು ಐಪಿಒ ಚಂದಾದಾರಿಕೆಗಳಿಗಾಗಿ ಯುಪಿಐ ಪಾವತಿಗಳ ವಹಿವಾಟಿನ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಯಿತು.

Leave a Comment

Leave a Reply

Your email address will not be published. Required fields are marked *

error: Content is protected !!