ಶಿಶಿರ್‌ನ ಎತ್ತಿ ಬಿಸಾಡಿದ ಮಂಜು; ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಔಟ್ ?
ನ್ಯೂಸ್ ಆ್ಯರೋ: ಬಿಗ್ ಬಾಸ್ ಸೀಸನ್ 11ರಲ್ಲಿ ಸದ್ಯ ಕ್ಯಾಪ್ಟನ್ ಆಗಿರುವುದು ಉಗ್ರಂ ಮಂಜು. ಹೀಗಾಗಿ ಬಿಗ್ ಬಾಸ್ ಅರಮನೆಯ ರಾಜನ ಸ್ಥಾನ ನೀಡಲಾಗಿದೆ. ಇಡೀ ವಾರ ಈ ಕಾನ್ಸೆಪ್ಟ್ ಮೇಲೆ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ ಆದರೆ ಕೊಂಚ ಟ್ವಿಸ್ಟ್ ಬೇಕು ಎಂದು ಮೋಕ್ಷಿತಾ ಪೈ ಯುವರಾಣಿ ಎಂದು ಬಿಗ ಬಾಸ್ ಘೋಷಿಸಿದ್ದಾರೆ. ಅಣ್ಣ ತಂಗಿ ನಡುವೆ ಮನಸ್ಥಾಪವಿದ್ದು ತಮ್ಮ ಸ್ಥಾನ ಮತ್ತು ಆಸ್ತಿಯನ್ನು ಕಸಿದುಕೊಳ್ಳಲು ಎರಡು ತಂಡಗಳು ಹೋರಾಡಬೇಕಿದೆ. ಆದರೆ ಈ ವಾರ ಮಂಜು ಸಿಕ್ಕಾಪಟ್ಟೆ ಅಗ್ರೆಸಿವ್ ಆಗಿರುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.
ಹೌದು. . . ಮೋಕ್ಷಿತಾ ಯುವ ರಾಣಿ ಆಗಿ ಎಂಟ್ರಿ ಕೊಟ್ಟ ಮೇಲೆ ಗಾರ್ಡನ್ ಏರಿಯಾದಲ್ಲಿ ತಮ್ಮ ಪ್ರಜೆಗಳ ಜೊತೆ ಚರ್ಚೆ ಮಾಡಲು ಜಾಗ ನೀಡಲಾಗಿತ್ತು. ಇದನ್ನು ಕನ್ಫೆಷನ್ ರೂಮ್‌ಗೆ ಕರೆದು ಬಿಗ್ ಬಾಸ್ ಹೇಳಿದ್ದರು, ಇದನ್ನು ತಿಳಿಯದ ಮಂಜು ಜಾಗ ಕಸಿದುಕೊಳ್ಳಲು ಮುಂದಾಗುತ್ತಾರೆ. ಪ್ರಜೆ ಆಗಿದ್ದ ಶಿಶಿರ್ ತಮ್ಮ ಯುವರಾಣಿಯನ್ನು ಸೇಫ್ ಮಾಡಲು ಅಡ್ಡ ಹೋಗುತ್ತಾರೆ ಅಲ್ಲಿ ಕೋಪಗೊಂಡ ಉಗ್ರಂ ಮಂಜು ಶಿಶಿರ್‌ರನ್ನು ಎತ್ತಿ ಬಿಸಾಡುತ್ತಾರೆ. ಈ ಘಟನೆ ಒಂದೆರಡು ನಿಮಿಷಗಳ ಕಾಲ ನಡೆದಿದೆ.
ಟಿವಿಯಲ್ಲಿ ಈ ಜಗಳವನ್ನು ಪ್ರಸಾರ ಮಾಡಲಾಗಿತ್ತು. ಮಂಜು ಶಿಶರ್ ಜೊತೆ ನಡೆದುಕೊಂಡ ರೀತಿ ಸರಿಯಾಗಿಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ರಂಜಿತ್ ಕೇವಲ ಎದೆಗೆ ಎದೆ ಕೊಟ್ಟು ನಿಂತಿದ್ದಕ್ಕೆ ಮ್ಯಾನ್ ಹ್ಯಾಂಡ್ಲಿಂಗ್ ಎಂದು ಬಿಗ್ ಬಾಸ್ ಹೊರ ಹಾಕಿದ್ದರು ಆದರೆ ಇಲ್ಲಿ ಮಂಜು ಎತ್ತಿ ಬಿಸಾಡಿ ಶಿಶಿರ್ ಕಾಲಿನ ಭಾಗವನ್ನು ಬಿಗಿಯಾಗಿ ಇಟ್ಟುಕೊಂಡಿದ್ದು ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇಲ್ಲಿ ಬಿಗ್ ಬಾಸ್ ಮಾಡುತ್ತಿರುವುದು ಮೋಸ ಎಂದು ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಅಲ್ಲದೆ ಈ ವಾರ ಮಾತುಕತೆಯಲ್ಲಿ ಸುದೀಪ್ ಮಂಜುಗೆ ಶಿಕ್ಷೆ ನೀಡಬೇಕು ಅಂತಿದ್ದಾರೆ. ಅಲ್ಲದೇ ಈ ಬಾರಿ ಮಂಜುವನ್ನು ಹೊರ ಹಾಕಬೇಕು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಈ ವಾರ ಉಗ್ರಂ ಮಂಜು ಬಿಗ್ ಬಾಸ್ ಮನೆಯಿಂದ ಔಟ್ ಆಗ್ತಾರ ಅಂತ ಕಾದು ನೋಡಬೇಕಿದೆ.
Leave a Comment