ದಿನ ಭವಿಷ್ಯ 06-09-2024 ಶುಕ್ರವಾರ| ಗೌರಿಯು ಯಾರ ಬಾಳನ್ನು ಬೆಳಗಲಿದ್ದಾಳೆ…!?
ನ್ಯೂಸ್ ಆ್ಯರೋ : ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತೃತೀಯ/ಚತುರ್ಥಿ, ಹಸ್ತ ನಕ್ಷತ್ರ/ಚಿತ್ತ ನಕ್ಷತ್ರ, ಶುಕ್ರವಾರ ಗೌರಿ ಹಬ್ಬದ ದಿನ ಯಾರಿಗೆ ಒಳ್ಳೆದಾಗಲಿದೆ ತಿಳಿಯೋಣ..
ಮೇಷ ರಾಶಿ : ಅಧಿಕಾರಿಗಳ ಭೇಟಿಯಿಂದ ಕೆಲಸ ಕಾರ್ಯಗಳು ಏರು-ಪೇರಾಗುವುದು. ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ತೆರೆದಿದೆ. ಆತಂಕವು ದೂರವಾಗುತ್ತದೆ.
ವೃಷಭ ರಾಶಿ : ಅನುಭವದ ಕೊರತೆ ನಿಮ್ಮ ವೈಫಲ್ಯಕ್ಕೆ ಪ್ರಧಾನ ಕಾರಣವಾಗಲಿದೆ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಬರುವುದು. ಅನಿವಾರ್ಯವಾಗಿ ದೂರದ ಊರಿಗೆ ಪ್ರಯಾಣಿಸಬೇಕಾಗುವುದು.
ಮಿಥುನ ರಾಶಿ : ಆಸ್ತಿ ವಿಷಯಗಳನ್ನು ತ್ವರಿತವಾಗಿ ಬಗೆ ಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಉಪಹಾರ ಗೃಹಗಳಿಂದ ಲಾಭ ಪಡೆಯುವಿರಿ. ಗೆಳೆಯರೊಂದಿಗೆ ಪ್ರವಾಸ ಹೋಗಲು ದಿನ ನಿಶ್ಚಿತವಾಗುವುದು.
ಕಟಕ ರಾಶಿ : ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯ. ಔಷಧ ಮಾರಾಟಗಳಲ್ಲಿ ಸಂಪಾದನೆ ಹೆಚ್ಚಲಿದೆ. ಕೆಲವು ವ್ಯಕ್ತಿಗಳ ದ್ವೇಷದ ಕೃತ್ಯಗಳ ಫಲವಾಗಿ ನೀವು ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ.
ಸಿಂಹ ರಾಶಿ : ಕರ್ತವ್ಯದಲ್ಲಿ ಅಧಿಕವಾದ ಆತ್ಮವಿಶ್ವಾಸವು ಲೆಕ್ಕಾಚಾರವಿಲ್ಲದ ಜೀವನದಂತೆಯೇ ಆಗುತ್ತದೆ. ಈ ದಿನ ಯಾವುದೇ ತೀರ್ಪುಗಳನ್ನು ನೀಡುವುದು ಅಥವಾ ಇನ್ನೊಬ್ಬರನ್ನು ಪರೀಕ್ಷಿಸುವ ಕೆಲಸವು ನಿಮಗೆ ಸರಿಯಲ್ಲ.
ಕನ್ಯಾ ರಾಶಿ : ರಾಜಕೀಯ ವ್ಯವಹಾರಗಳ ಪ್ರಬಲ ಆಕಾಂಕ್ಷಿಯಾಗಿರುವ ನೀವು ಚುರುಕಾಗಬೇಕಾಗಿದೆ. ಹಣಕಾಸಿನ ವಹಿವಾಟು ಉತ್ತಮವಾಗಿದ್ದು ಮಾರಾಟ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವಿರಿ.
ತುಲಾ ರಾಶಿ : ಏಕಾಗ್ರತೆ ಕೊರತೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ಉಂಟಾಗುತ್ತವೆ. ಆತ್ಮೀಯನಿಗೆ ಸಾಂತ್ವನ ಹೇಳಬೇಕಾದ ಸಂದರ್ಭ ಬರಲಿದೆ. ಉದ್ಯೋಗದ ವಿಷಯದಲ್ಲಿದ್ದ ಚಿಂತೆ ದೂರಾಗಲಿದೆ.
ವೃಶ್ಚಿಕ ರಾಶಿ : ಈ ದಿನ ವಿವಿಧ ರೀತಿಯಲ್ಲಿ ಧನಾಗಮನ ಉತ್ತಮವಾಗಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ನಿಮ್ಮ ಕಾರ್ಯವೈಖರಿಯಿಂದ ಅನುಭವಕ್ಕೆ ಬರುತ್ತದೆ. ಕೆಲಸವನ್ನು ನೂತನವಾಗಿ ಆರಂಭಿಸುವಿರಿ.
ಧನು ರಾಶಿ : ಗೆಳೆಯರು ಮಾಡುವ ಸಹಾಯಗಳಿಗೆ ಕೃತಜ್ಞತಾ ಪೂರ್ವಕವಾಗಿ ಇರುವುದನ್ನು ಮೈಗೂಡಿಸಿಕೊಳ್ಳಿ. ಸಾಮಾಜಿಕ ಸ್ಥಾನಮಾನ ಕಾಯ್ದುಕೊಳ್ಳುವ ಹೆಸರಿನಲ್ಲಿ ನಿಮಗಿರುವ ಕಟ್ಟುಪಾಡುಗಳು ಹೆಚ್ಚೆಂದು ಎನ್ನಿಸುವುದು.
ಮಕರ ರಾಶಿ : ದಾಂಪತ್ಯ ಜೀವನದಲ್ಲಿ ತಾಳ್ಮೆ-ಸಮಾಧಾನದಿಂದ ಮುಂದುವರಿಯುವುದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರಕುವುದು. ಮಹಿಳೆಯರಿಗೆ ಋಣಾತ್ಮಕ ಚಿಂತನೆಯು ಆರೋಗ್ಯವನ್ನು ಹಾಳು ಮಾಡುತ್ತದೆ.
ಕುಂಭ ರಾಶಿ : ಎದ್ದ ಸಮಯದಲ್ಲೆ ನಿಮಗೆ ಅಶುಭದ ಸಂಕೇತವೆಂದು ಕಂಡ ವಿಷಯಗಳ ಬಗ್ಗೆ ಹೆಚ್ಚಿನ ಯೋಚನೆಯ ಅಗತ್ಯವಿಲ್ಲ. ಸ್ನೇಹಿತರೊಡನೆ ಸುಂದರ ಸಂಜೆ ಕಳೆಯುವ ಅವಕಾಶ ತಪ್ಪಿಸಿಕೊಳ್ಳುವ ಯೋಚನೆ ಮಾಡದಿರಿ.
ಮೀನಾ ರಾಶಿ : ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳು ಬಗೆಹರಿಯುತ್ತವೆ. ಸ್ವಂತ ಉದ್ಯೋಗ ನಡೆಸುವವರು ಒಳ್ಳೆಯ ಅಭಿವೃದ್ಧಿಯನ್ನು ಎದುರು ನೋಡಬಹುದು. ಮನೆಯಲ್ಲಿ ಮಂಗಳಕಾರ್ಯಗಳು ನೆರವೇರುತ್ತವೆ.
Leave a Comment