ದಿನ ಭವಿಷ್ಯ 03-09-2024 ಮಂಗಳವಾರ | ಇಂದಿನ ರಾಶಿಫಲ ಹೀಗಿದೆ…

IMG 20240903 WA0000
Spread the love

ನ್ಯೂಸ್ ಆ್ಯರೋ : ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಅಮವಾಸ್ಯೆಯ ಮಂಗಳವಾರದ ರಾಶಿ ಫಲಗಳು ಇಲ್ಲಿವೆ.

ಮೇಷ ರಾಶಿ : ಈ ರಾಶಿಯವರಿಗೆ ಇಂದು ಶ್ರಮ ಮತ್ತು ಸೂಕ್ತ ಪ್ರಯತ್ನಗಳಿಗೆ ಒಳ್ಳೆಯ ಫಲಿತಾಂಶಗಳು ಮತ್ತು ಪ್ರತಿಫಲಗಳನ್ನು ಸಿಗುತ್ತದೆ. ಇತರರಿಂದ ಟೀಕೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ವೃದ್ಧಿಯಾಗಲಿದೆ.

ವೃಷಭ ರಾಶಿ : ಈ ರಾಶಿಯವರಿಗೆ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ. ಗಮನವಿಟ್ಟು ಕೆಲಸ ಕಾರ್ಯಗಳನ್ನು ಮಾಡಬೇಕು. ದಾಂಪತ್ಯದಲ್ಲಿ ಸಾಮರಸ್ಯ ಕಂಡುಕೊಳ್ಳುವುದು ಅಗತ್ಯ.

ಮಿಥುನ ರಾಶಿ: ಈ ರಾಶಿಯವರು ಇಂದು ಆನಂದದಿಂದ ದಿನ ಕಳೆಯಲಿದ್ದೀರಿ. ಹೆಚ್ಚು ಹೊತ್ತು ಒಂಟಿಯಾಗಿಯೇ ಕಾಲ ಕಳೆಯುತ್ತೀರಿ. ನಿಮ್ಮ ಪ್ರತಿ ನಡೆಗೆ ಸಂಗಾತಿಯ ಬೆಂಬಲವಿರುತ್ತದೆ. ಇಂದು ನಿಮಗೆ ಅತ್ಯುತ್ತಮ ದಿನವಾಗಲಿದೆ.

ಕಟಕ ರಾಶಿ : ಈ ರಾಶಿಯವರು ಮಿಂಚಿ ಹೋದ ಕಾಲದ ಬಗ್ಗೆ ಚಿಂತಿಸಿ, ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ. ಪ್ರತಿ ಕಾರ್ಯದಲ್ಲಿ ಮನೆಯವರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ.

ಸಿಂಹ ರಾಶಿ: ಈ ರಾಶಿಯವರು ಇಂದು ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸುಧಾರಿಸಿಕೊಳ್ಳಲಿದ್ದೀರಿ. ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಕನ್ಯಾ ರಾಶಿ : ಈ ರಾಶಿಯವರು ಇಂದು ಅನಾರೋಗ್ಯದಿಂದ ಬಳಲಲಿದ್ದಾರೆ. ವೈವಾಹಿಕ ಜೀವನವನ್ನು ಉತ್ತಮವಾಗಿಸುವ ನಿಮ್ಮ ಪ್ರಯತ್ನಗಳು ಇವತ್ತು ನಿರೀಕ್ಷೆಗೂ ಮೀರಿ ಫಲ ನೀಡುತ್ತವೆ. ಆರೋಗ್ಯದ ಕಡೆ ಎಚ್ಚರ ವಹಿಸಿ.

ತುಲಾ ರಾಶಿ : ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಧನಲಾಭ. ಕೌಟುಂಬಿಕ ಕಲಹಗಳು ನಿಮ್ಮ ನೆಮ್ಮದಿಯನ್ನು ಹಾಳುಗೆಡವಲಿದೆ. ಮಾನಸಿಕ ನೆಮ್ಮದಿಗೆ ದೇವರ ಕಾರ್ಯಗಳಲ್ಲಿ ಪಾಲ್ಗೊಳ್ಳಿ.

ವೃಶ್ಚಿಕ ರಾಶಿ : ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಸೋಮಾರಿತನವನ್ನು ತೋರಿಸಲಿದ್ದಾರೆ. ಸೋಮಾರಿತನವು ನಿಮ್ಮ ಕೆಲಸಕ್ಕೆ ಕುತ್ತು ತರಲಿದೆ. ಕಠಿಣ ಪರಿಶ್ರಮ ಅಗತ್ಯ.

ಧನು ರಾಶಿ : ಈ ರಾಶಿಯವರು ಇಂದು ತಾಳ್ಮೆ ಹಾಗೂ ಶ್ರಮದಿಂದ ತಮ್ಮ ಗುರಿ ಸಾಧಿಸಲಿದ್ದಾರೆ. ಹೊಸ ಪರಿಚಯಗಳು ನಿಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಲಿದೆ. ನಿಮ್ಮವರಿಂದ ಹಣಕಾಸಿನ ಬೆಂಬಲ ಸಿಗಲಿದೆ.

ಮಕರ ರಾಶಿ : ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಿದೆ. ಇಂದು ನೀವು ಜೀವನದ ಸವಿ ನೆನಪುಗಳನ್ನು ಮೆಲುಕು ಹಾಕಲಿದ್ದೀರಿ. ಸಂಗಾತಿಯೊಡನೆ ದೂರ ಪ್ರಯಾಣದ ಯೋಗವಿದೆ.

ಕುಂಭ ರಾಶಿ : ಈ ರಾಶಿಯವರು ಇಂದು ತಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ಮಾತಿನಿಂದ ಸಂಬಂಧಗಳು ದೂರವಾಗಲಿದೆ. ಎಲ್ಲ ವಿಚಾರದಲ್ಲೂ ಜಾಗರೂಕ ನಡೆ ಅವಶ್ಯ.

ಮೀನ ರಾಶಿ : ಈ ರಾಶಿಯರಿಗೆ ಇಂದು ತಮ್ಮ ಪ್ರೀತಿ ಪಾತ್ರರೊಡನೆ ವೈಮನಸ್ಸು ಮೂಡಲಿದೆ. ಆತ್ಮವಿಶ್ವಾಸದ ಕೊರತೆ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಕಿರಿಕಿರಿಯ ಅನುಭವಿಸಲಿದ್ದೀರಿ.

Leave a Comment

Leave a Reply

Your email address will not be published. Required fields are marked *

error: Content is protected !!