ಇನ್ಮುಂದೆ ತಿರುಪತಿ ತಿಮ್ಮಪ್ಪನ ಲಡ್ಡುಗೆ ಆಧಾರ್ ಕಡ್ಡಾಯ – ಬಂತು ಹೊಸ ರೂಲ್ಸ್
ನ್ಯೂಸ್ ಆ್ಯರೋ : ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಇನ್ಮುಂದೆ ಲಡ್ಡು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ಟೋಕನ್ ರಹಿತ ಭಕ್ತರಿಗೆ ತಿಮ್ಮಪ್ಪನ ಲಡ್ಡು ಮಾರಾಟಕ್ಕೆ ಆಧಾರ್ ದೃಢೀಕರಣ ಪರಿಚಯಿಸಲಾಗಿದೆ. ಮಧ್ಯವರ್ತಿಗಳ ಹಾವಳಿಯಿಂದ ಕಾಳಸಂತೆಯಲ್ಲಿ ಲಡ್ಡುಗಳ ಮಾರಾಟ ಹೆಚ್ಚಾಗಿದೆ.
ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಹಾಗೂ ಲಡ್ಡು ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಯ್ಯ ಚೌಧರಿ ತಿಳಿಸಿದ್ದಾರೆ.
ಭಕ್ತಾಧಿಗಳು ತಮ್ಮ ಆಧಾರ್ ದೃಢೀಕರಣ ಮಾಡಿ, ಒಬ್ಬ ಭಕ್ತ 2 ಲಡ್ಡುಗಳನ್ನು ಪಡೆದುಕೊಳ್ಳಬಹುದು. ಮೊದಲಿನಂತೆ ಒಂದು ಲಡ್ಡು ಉಚಿತವಾಗಿ ಪಡೆದು ಹೆಚ್ಚುವರಿ ಲಡ್ಡುಗಳನ್ನು ಹಣ ಕೊಟ್ಟು ಪಡೆದುಕೊಳ್ಳಬಹುದು. ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
Leave a Comment