ಈ ವಿಚಾರಗಳನ್ನು ಎಂದಿಗೂ ಚಾಟ್‌‌ಜಿಪಿಟಿ ಬಳಿ ಕೇಳ್ಬಾರ್ದಂತೆ; ಯಾಕೆ ಗೊತ್ತಾ? ಇಲ್ಲಿದೆ ಕಾರಣ

Chatgpt
Spread the love

ನ್ಯೂಸ್ ಆ್ಯರೋ: ಈಗಂತೂ ಬಹುತೇಕರು ತಮಗೆ ಯಾವುದೇ ರೀತಿಯ ವಿಷಯದ ಬಗ್ಗೆ ಒಂದು ಚಿಕ್ಕ ನೋಟ್ ಬೇಕಾದರೂ ಸಹ ಚಾಟ್‌ಜಿಪಿಟಿ ಮತ್ತು ಎಐ ಚಾಟ್‌ಬಾಟ್ ಸಹಾಯದಿಂದಲೇ ಪಡೆಯುತ್ತಿದ್ದಾರೆ ಅಂತ ಹೇಳಬಹುದು. ಏಕೆಂದರೆ ಈ ಕೃತಕ ಬುದ್ದಿಮತ್ತೆ ಎಂದರೆ ಎಐ ಚಾಟ್‌ಬಾಟ್ ಅನೇಕ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದೆ. ಆದರೆ ತಜ್ಞರು ಅತಿಯಾದ ಅವಲಂಬನೆಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ ನೋಡಿ.

ವಿಶೇಷವಾಗಿ ಆರೋಗ್ಯ ಸಲಹೆಯಂತಹ ಸೂಕ್ಷ್ಮ ವಿಷಯಗಳಿಗೆ ಇದರ ಬಳಕೆ ಸ್ವಲ್ಪ ಎಚ್ಚರಿಕೆಯಿಂದಲೇ ಮಾಡುವುದು ಸೂಕ್ತ ಅಂತ ಹೇಳಿದ್ದಾರೆ. ಇತ್ತೀಚಿನ ಅಧ್ಯಯನಗಳು ವ್ಯಕ್ತಿಗಳು ಅನೇಕ ರೀತಿಯ ಮಾರ್ಗದರ್ಶನಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ಕಡೆಗೆ ಮುಖವನ್ನು ತಿರುಗಿಸುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತವೆ.

ನ್ಯೂಯಾರ್ಕ್ ಪೋಸ್ಟ್ ವರದಿಯು ಕ್ಲೀವ್ಲ್ಯಾಂಡ್ ಕ್ಲಿನಿಕ್ ಡೇಟಾವನ್ನು ಉಲ್ಲೇಖಿಸುತ್ತದೆ, ಐದು ಅಮೆರಿಕನ್ನರಲ್ಲಿ ಒಬ್ಬರು ಎಐನಿಂದ ಆರೋಗ್ಯ ಸಲಹೆಯನ್ನು ಪಡೆದಿದ್ದಾರೆ ಎಂದು ತೋರಿಸುತ್ತದೆ. ಹೆಚ್ಚುವರಿಯಾಗಿ, ಕಳೆದ ವರ್ಷದ ಟೆಬ್ರಾ ಸಮೀಕ್ಷೆಯು ಸುಮಾರು 25 ಪ್ರತಿಶತದಷ್ಟು ಅಮೆರಿಕನ್ನರು ಸಾಂಪ್ರದಾಯಿಕ ಚಿಕಿತ್ಸೆಗಿಂತ ಚಾಟ್‌ಬಾಟ್ ಅನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ ಎಂದು ಕಂಡು ಹಿಡಿದಿದೆ.

ವೈಯಕ್ತಿಕ ಮಾಹಿತಿ:
ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸದಂತಹ ವೈಯುಕ್ತಿಕ ವಿವರಗಳನ್ನು ಚಾಟ್‌ಜಿಪಿಟಿ ಅಥವಾ ಎಐ ಚಾಟ್‌ಬಾಟ್‌ಗಳೊಂದಿಗೆ ಎಂದಿಗೂ ಅಪ್ಪಿ ತಪ್ಪಿಯೂ ಹಂಚಿಕೊಳ್ಳಬೇಡಿ. ನೀವು ಇಂತಹ ವೈಯುಕ್ತಿಕ ವಿವರಗಳನ್ನು ಇದರೊಟ್ಟಿಗೆ ಹಂಚಿಕೊಂಡರೆ ಇದು ನಿಮ್ಮನ್ನು ಮತ್ತು ಇಂಟರ್ನೆಟ್‌ನಲ್ಲಿ ನೀವು ಹುಡುಕುವ ಮಾಹಿತಿಯ ಬಗ್ಗೆ ಪೂರ್ತಿಯಾಗಿ ಮಾಹಿತಿಯನ್ನು ಒದಗಿಸುತ್ತದೆ.

ಹಣಕಾಸಿನ ಮಾಹಿತಿ:
ಸೈಬರ್ ವಂಚನೆಗಳು ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಹಣಕಾಸಿನ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಅಂತ ಅನೇಕರು ಹೇಳುತ್ತಿರುತ್ತಾರೆ. ಅದೇ ರೀತಿಯಾಗಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಅಥವಾ ಸಾಮಾಜಿಕ ಭದ್ರತಾ ಸಂಖ್ಯೆಯಂತಹ ವಿವರಗಳನ್ನು ಚಾಟ್‌ಜಿಪಿಟಿ ಅಥವಾ ಎಐ ಚಾಟ್‌ಬಾಟ್‌ಗಳೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ. ಈ ಮಾಹಿತಿಯನ್ನು ನಿಮ್ಮ ಹಣ ಅಥವಾ ನಿಮ್ಮ ಗುರುತನ್ನು ಕದಿಯಲು ಜನರು ಬಳಸಬಹುದು.

ಇ-ಮೇಲ್ ಅಥವಾ ಇನ್ನಿತರೆ ಖಾತೆಗಳ ಪಾಸ್‌ವರ್ಡ್:
ಎಐ ಚಾಟ್‌ಬಾಟ್‌ಗಳೊಂದಿಗೆ ನಿಮ್ಮ ಇ-ಮೇಲ್ ಖಾತೆಯ ಅಥವಾ ಇನ್ನಿತರೆ ಖಾತೆಗಳ ಪಾಸ್‌ವರ್ಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಖಾತೆಗಳನ್ನು ಪ್ರವೇಶಿಸಲು ಮತ್ತು ನಿಮ್ಮ ಡೇಟಾವನ್ನು ಕದಿಯಲು ಈ ಮಾಹಿತಿಯನ್ನು ಜನರು ಬಳಸಿಕೊಳ್ಳಬಹುದು.

ನಿಮ್ಮ ರಹಸ್ಯಗಳು:
ಚಾಟ್‌ಜಿಪಿಟಿ ಅಥವಾ ಎಐ ಚಾಟ್‌ಬಾಟ್‌ಗಳೊಂದಿಗೆ ನಿಮ್ಮ ಜೀವನದ ರಹಸ್ಯ ವಿಷಯಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಚಾಟ್‌ಜಿಪಿಟಿ ಒಬ್ಬ ವ್ಯಕ್ತಿ ಅಲ್ಲ, ಅದೊಂದು ಸಾಫ್ಟ್‌ವೇರ್ ಆಗಿದ್ದು, ಅದು ನಿಮ್ಮ ರಹಸ್ಯಗಳನ್ನು ಸುರಕ್ಷಿತವಾಗಿರಿಸಲು ನಂಬಲಾಗುವುದಿಲ್ಲ.

ವೈದ್ಯಕೀಯ ಮಾಹಿತಿ ಅಥವಾ ಆರೋಗ್ಯ ಸಲಹೆ:
ಚಾಟ್‌ಜಿಪಿಟಿ ಅಥವಾ ಎಐ ನಿಮ್ಮ ವೈದ್ಯರಲ್ಲ, ಆದ್ದರಿಂದ ಆರೋಗ್ಯ ಸಲಹೆಗಾಗಿ ಇವುಗಳನ್ನು ಎಂದಿಗೂ ನಂಬಬೇಡಿ. ಅಲ್ಲದೆ, ವಿಮಾ ಸಂಖ್ಯೆ ಮತ್ತು ಹೆಚ್ಚಿನವು ಸೇರಿದಂತೆ ನಿಮ್ಮ ಆರೋಗ್ಯ ವಿವರಗಳನ್ನು ಎಂದಿಗೂ ಇವುಗಳಲ್ಲಿ ಹಂಚಿಕೊಳ್ಳಬೇಡಿ.

ಅನುಚಿತ ವಿಷಯಗಳು
ಹೆಚ್ಚಿನ ಚಾಟ್‌ಬಾಟ್‌ಗಳು ಅವರೊಂದಿಗೆ ಹಂಚಿಕೊಳ್ಳಲಾದ ಯಾವುದೇ ರೀತಿಯ ಅನುಚಿತ ವಿಷಯಗಳನ್ನು ಫಿಲ್ಟರ್ ಮಾಡುತ್ತವೆ, ಆದ್ದರಿಂದ ಅನುಚಿತವಾದ ವಿಷಯವನ್ನು ಕೇಳಿದರೆ ಅದು ನಿಮ್ಮನ್ನು ಬಳಕೆಯಿಂದ ನಿಷೇಧಿಸಬಹುದು.
ಇದು ಮಾತ್ರವಲ್ಲ, ನೆನಪಿಡಿ, ಇಂಟರ್ನೆಟ್ ಎಂದಿಗೂ ಯಾವುದನ್ನೂ ಮರೆಯುವುದಿಲ್ಲ. ಆದ್ದರಿಂದ, ಇಂತಹ ವಿಷಯಗಳ ಬಗ್ಗೆ ತುಂಬಾನೇ ಜಾಗರೂಕರಾಗಿರಿ.

Leave a Comment

Leave a Reply

Your email address will not be published. Required fields are marked *

error: Content is protected !!